ಧಾರವಾಡ: ಸಂಗೀತದ ತವರು ಧಾರವಾಡಕ್ಕೆ ಕೇಂದ್ರ ಸಂಗೀತ-ನಾಟಕ ಅಕಾಡೆಮಿ ಪ್ರಾದೇಶಿಕ ಕಚೇರಿ ಕೂಡ ತರಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದರು.
Advertisement
ಸೃಜನಾ ರಂಗಮಂದಿರದಲ್ಲಿ ಪಂ| ಕುಮಾರ ಗಂಧರ್ವರ ಜನ್ಮಶತಾಬ್ದಿ ಅಂಗವಾಗಿ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಕ್ಷಮತಾ ಸೇವಾ ಸಂಸ್ಥೆ ಹಾಗೂ ಕೇಂದ್ರ ಸಂಸ್ಕೃತಿ ಇಲಾಖೆ, ಎಲ್ ಐಸಿ ಸಹಯೋಗದಲ್ಲಿ ಮಂಗಳವಾರದಿಂದ ಆಯೋಜಿಸಿರುವ ಐದು ದಿನಗಳ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಧಾರವಾಡ ಸಂಸ್ಕೃತಿ ಇನ್ನೂ ಬಲವಾಗಿ ಬೆಳೆಯಬೇಕೆಂದರೆ ಬೇರೆ ಬೇರೆ ಕಲೆಗಳು ಇಲ್ಲಿ ನೆಲೆಯೂರಬೇಕು. ಅದಕ್ಕಾಗಿ ಲಲಿತಕಲಾ ಅಕಾಡೆಮಿಯಂತೆಯೇ ಸಂಗೀತ-ನಾಟಕ ಅಕಾಡೆಮಿಯನ್ನೂ ತರಬೇಕು ಎಂದು ಮನವಿ ಮಾಡಿದರು.
ಮೇಯರ್ ವೀಣಾ ಬರದ್ವಾಡ, ಎಲ್‌ಐಸಿಯ ದೊರೆಸ್ವಾಮಿ ನಾಯ್ಕ, ರಮಾಕಾಂತ ಜೋಶಿ, ಆನಂದ ಜುಂಜುರವಾಡ ಇನ್ನಿತರರಿದ್ದರು. ಗೋವಿಂದ ಜೋಶಿ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ನಂತರ ಪುಣೆಯ ಪಂ| ವಿಜಯ ಕೋಪರಕರ ಅವರ ಗಾಯನ ನಡೆಯಿತು. ಡಾ|ಎನ್. ರಾಜಮ್ ಹಾಗೂ ಅವರ ಮೊಮ್ಮಗಳು ನಂದಿನಿ ಶಂಕರ ಅವರಿಂದ ವಯೋಲಿನ್ ಜುಗಲಬಂಧಿ ಜರುಗಿತು.