Advertisement

ಕಾಂಗ್ರೆಸ್ಸಿಗರು ವಸ್ತುಸ್ಥಿತಿ ಅರಿತು ಮಾತನಾಡಲಿ

06:21 PM May 23, 2021 | Team Udayavani |

ಗದಗ: ಕಾಂಗ್ರೆಸ್‌ ನಾಯಕರು ದೇಶದ ವೈದ್ಯಕೀಯ ಸೇವೆ-ಸೌಲಭ್ಯಗಳ ಬಗ್ಗೆ ವಸ್ತುಸ್ಥಿತಿ ಯನ್ನರಿತು ಮಾತನಾಡಬೇಕು. ಕಾಂಗ್ರೆಸ್‌ ಹಾಗೂ ಮೋದಿಯವರ ಅವ ಧಿಯಲ್ಲಾದ ಸುಧಾರಣೆಯನ್ನು ತುಲನೆ ಮಾಡಬೇಕು. ಇಲ್ಲವಾದರೆ ವಿಪಕ್ಷ ಸ್ಥಾನವನ್ನೂ ಕಳೆದು ಕೊಂಡಿರುವ ಕಾಂಗ್ರೆಸ್‌ ಮುಂದಿನ ದಿನಗಳಲ್ಲಿ ಮತ್ತಷ್ಟು ಅವನತಿ ಕಾಣಬೇಕಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಆಡಳಿತದಲ್ಲಿ ಹಾಗೂ ಬಿಜೆಪಿ ಅ ಧಿಕಾರವ ಧಿಯಲ್ಲಾದ ಆಸ್ಪತ್ರೆಗಳ ಸುಧಾರಣೆಯನ್ನು ಕಾಂಗ್ರೆಸ್‌ ನಾಯಕರು ತುಲನಾತ್ಮಕವಾಗಿ ನೋಡಬೇಕು. ಅಲ್ಲದೇ ಲಸಿಕಾಕರಣಕ್ಕೆ ಶಾಸಕರ ನಿಧಿ  ನೀಡಲಾಗುತ್ತಿದೆ. ಆದರೆ ಅದನ್ನೇ ಕಾಂಗ್ರೆಸ್ಸಿಗರು 100 ಕೋಟಿ ರೂ. ನೆರವು ನೀಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ. ಒಂದೊಮ್ಮೆ ಸರಕಾರ ಶಾಸಕರು-ಸಂಸದರಿಗೆ ಈ ಬಾರಿ ಪ್ರದೇಶಾಭಿವೃದ್ಧಿ ನಿಧಿ  ಇಲ್ಲವೆಂದೂ ಘೋಷಿಸಬಹುದು. ಆಗ ಎಲ್ಲಿಂದ ಹಣ ನೀಡುವರು? ಅವರ ಈ ಸ್ಥಿತಿಗೆ ಕನಿಕರ ಬರುತ್ತಿದೆ ಎಂದು ಲೇವಡಿ ಮಾಡಿದರು.

ಕೋವಿಡ್‌ ಲಸಿಕಾಕರಣಕ್ಕೆ ಆರಂಭದಲ್ಲಿ ಕಾಂಗ್ರೆಸ್‌ ಸಾಥ್‌ ನೀಡಿದ್ದರೆ ಈಗಾಗಲೇ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಮುಕ್ತಾಯವಾಗಿರುತ್ತಿತ್ತು. ಕೋವಿಡ್‌ ಲಸಿಕೆ ನಾನಾ ರೀತಿಯ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಸಾರ್ವಜನಿಕರಲ್ಲಿ ಸಂಶಯ ಮೂಡಿಸಿದ್ದ ಕಾಂಗ್ರೆಸ್‌ ನಾಯಕರು, ಇದೀಗ ವ್ಯಾಕ್ಸಿನ್‌ ಹಾಕಿಸಿಕೊಂಡು ಫೋಟೋಗೆ ಫೋಸ್‌ ನೀಡುತ್ತಿದ್ದಾರೆ. ವಿರೋಧ ಪಕ್ಷಗಳೂ ಸ್ವಸ್ಥ, ಸದೃಢವಾಗಿರಬೇಕೆಂಬುದು ನಮ್ಮ ಆಶಯ. ಆದರೆ ಕಾಂಗ್ರೆಸ್‌ ತನ್ನ ತಪ್ಪು ಒಪ್ಪಿಕೊಳ್ಳುತ್ತಿಲ್ಲ. ಕಾಂಗ್ರೆಸ್ಸಿಗರಿಗೆ ಜನಸಾಮಾನ್ಯರಿಗಿಂತ ನಾಮದಾರ್‌ ಕುಟುಂಬದ ಬಗ್ಗೆ ಹೆಚ್ಚು ಕಳಕಳಿ ಎಂದು ಟಾಂಗ್‌ ನೀಡಿದರು.

ಕಾಂಗ್ರೆಸ್‌ ಅವಧಿಯಲ್ಲಿ ಕೇವಲ 381 ಮೆಡಿಕಲ್‌ ಕಾಲೇಜುಗಳಿದ್ದವು. ಈಗ 562 ಮೆಡಿಕಲ್‌ ಕಾಲೇಜುಗಳಾಗಿವೆ. ರಾಜ್ಯದಲ್ಲಿ ಹಾವೇರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಯಾದಗಿರಿ ಸೇರಿದಂತೆ ಹೊಸದಾಗಿ ಆರು ಮೆಡಿಕಲ್‌ ಕಾಲೇಜುಗಳು ತಲೆ ಎತ್ತುತ್ತಿವೆ. ಕಾಂಗ್ರೆಸ್‌ ಅವಧಿಯಲ್ಲಿ ಒಂದು ಏಮ್ಸ್‌ ಇತ್ತು. ಈಗ 21 ಏಮ್ಸ್‌ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ. ಮೆಡಿಕಲ್‌ ಕಾಲೇಜುಗಳ ಸೀಟುಗಳ ಸಂಖ್ಯೆ 54 ಸಾವಿರದಿಂದ 80 ಸಾವಿರಕ್ಕೇರಿದೆ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್‌ ಏನು ಮಾಡಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು. ಪಿಎಂ ಕೇರ್‌ ನಿ ಧಿಯಡಿ 50 ಸಾವಿರ ವೆಂಟಿಲೇಟರ್‌ಗಳನ್ನು ಖರೀದಿಸಲಾಗಿದೆ.

ಎಲ್ಲವೂ ಉತ್ಕೃಷ್ಟ ಗುಣಮಟ್ಟ ಹೊಂದಿವೆ. ಇದೇ ವೆಂಟಿಲೇಟರ್‌ಗಳನ್ನು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳು, ಆರ್ಮಿ ಆಸ್ಪತ್ರೆಗಳಲ್ಲಿ ಬಳಸಲಾಗುತ್ತಿದೆ. ಆದರೆ ಈ ಬಗ್ಗೆ ಪರಿಪೂರ್ಣ ಮಾಹಿತಿ ಇಲ್ಲದೇ ಕೆಲವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹರಿಹಾಯ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next