Advertisement

Kolkata ಹೃದಯ ಭಾಗದಲ್ಲಿ ಸ್ಫೋ*ಟ ; ವ್ಯಕ್ತಿ ಮೃ*ತ್ಯು : ತನಿಖೆ ಚುರುಕು

05:27 PM Sep 14, 2024 | Team Udayavani |

ಕೋಲ್ಕತಾ:  ನಗರದ ಬ್ಲೋಚ್‌ಮನ್ ಸ್ಟ್ರೀಟ್ ಮತ್ತು ಎಸ್‌ಎನ್ ಬ್ಯಾನರ್ಜಿ ರಸ್ತೆಯಲ್ಲಿ ಶನಿವಾರ(ಸೆ 14) ಮಧ್ಯಾಹ್ನ 1.45 ರ ಸುಮಾರಿಗೆ ಸಂಭವಿಸಿದ ಸ್ಫೋ*ಟದಲ್ಲಿ 58 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಘಟನೆ ಬ್ಲೋಚ್‌ಮನ್ ಸ್ಟ್ರೀಟ್‌ನ ಪ್ರವೇಶಿಸುವಲ್ಲೇ ಪ್ಲಾಸ್ಟಿಕ್ ಚೀಲ ಗಮನಿಸಿದ ತಲ್ತಾಲಾ ಪೊಲೀಸ್ ಠಾಣೆಯ ಅಧಿಕಾರಿಗಳು ತತ್ ಕ್ಷಣ ಕಾರ್ಯಾಚರಣೆಗೆ ಇಳಿದಿದ್ದಾರೆ. ಪ್ರದೇಶವನ್ನು ತತ್ ಕ್ಷಣವೇ ಭದ್ರತಾ ಟೇಪ್‌ನಿಂದ ಸುತ್ತುವರಿಸಿ ತನಿಖೆಗಾಗಿ ಬಾಂಬ್ ಪತ್ತೆ ಮತ್ತು ವಿಲೇವಾರಿ ಸ್ಕ್ವಾಡ್ (BDDS) ಅನ್ನು ಕರೆಸಲಾಯಿತು. ಸ್ಫೋಟದ ಕಾರಣ ಮತ್ತು ಸ್ವರೂಪವನ್ನು ನಿರ್ಧರಿಸಲು ವಿಧಿವಿಜ್ಞಾನ ತನಿಖೆಗಳು ನಡೆಯುತ್ತಿವೆ.

ಮೃತ ದುರ್ದೈವಿ ಬಾಪಿ ದಾಸ್ ಎಂದು ಗುರುತಿಸಲಾಗಿದ್ದು, ಚಿಂದಿ ಆಯುವ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿಸು ಬಂದಿದೆ. ಎನ್ಆರ್ ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಬಂಗಾಳದ ಬಿಜೆಪಿ ನಾಯಕ, ಕೇಂದ್ರ ಸಚಿವ ಸುಕಾಂತ ಮಜುಂದಾರ್ ”ಘಟನೆಯ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯಿಂದ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.”ಸ್ಫೋಟವು ಅತ್ಯಂತ ಕಳವಳಕಾರಿಯಾಗಿದ್ದು, ಇದನ್ನು ಕೂಲಂಕಷವಾಗಿ ತನಿಖೆ ಮಾಡಬೇಕು. ನಿರ್ದಿಷ್ಟವಾಗಿ, ಎನ್ಐಎಯಿಂದ ತನಿಖೆಯ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಈ ಘಟನೆಯ ತನಿಖೆ ಮಾಡಲು ಪೊಲೀಸರಿಗೆ ಅಂತಹ ವೃತ್ತಿಪರತೆ ಇದೆ ಎಂದು ನಾನು ಭಾವಿಸುವುದಿಲ್ಲ” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next