Advertisement
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹದಿನಾಲ್ಕು ರಾಜ್ಯಗಳು ರಿಯಲ್ ಎಸ್ಟೇಟ್ ಕಾಯ್ದೆ ಸಂಬಂಧ ಸ್ಥಳೀಯವಾಗಿ ನಿಯಮಾವಳಿ ರೂಪಿಸಿವೆ ಎಂದು ಪರೋಕ್ಷವಾಗಿ ಕರ್ನಾಟಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕರ್ನಾಟಕ ಸರ್ಕಾರ ಹದಿನೈದು ದಿನಗಳಲ್ಲಿ ಕಾಯ್ದೆ ಸಂಬಂಧ ನಿಯಮಾವಳಿ ರೂಪಿಸುವುದಾಗಿ ತಿಳಿಸಿದೆ. ನನಗೆ ಆ ಭರವಸೆ ಇದೆ ಎಂದು ಹೇಳಿದ ಅವರು, ದಯವಿಟ್ಟು ಕೇಂದ್ರದ ಕಾಯ್ದೆ ಉದ್ದೇಶ ಅರ್ಥ ಮಾಡಿಕೊಳ್ಳಿ ಎಂದು ಹೇಳಿದರು.
ಮಾಡುವುದಿಲ್ಲ. ಆದರೆ, ಸಾರ್ವಜನಿಕರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಎಂಬುದಷ್ಟೇ ನಮ್ಮ ಆಶಯ ಎಂದು
ತಿಳಿಸಿದರು. ನಿವೇಶನ ಅಥವಾ ಫ್ಲ್ಯಾಟ್ ವಿಚಾರದಲ್ಲಿ ಅಳತೆ, ಗುಣಮಟ್ಟದ ಕಾಮಗಾರಿ ಹಾಗೂ ಕಚ್ಚಾ ಸಾಮಗ್ರಿಗಳ
ಬಳಕೆ, ಮೂಲಸೌಕರ್ಯ ಒದಗಿಸುವಿಕೆ, ಸೆಟ್ ಬ್ಯಾಕ್ ಬಿಟ್ಟು ಪರಿಸರ ಸಂರಕ್ಷಣೆ ಕ್ರಮ ಇವೆಲ್ಲವನ್ನೂ ಚಾಚೂ ತಪ್ಪದೆ
ಪಾಲಿಸಬೇಕು. ಇದಕ್ಕಾಗಿಯೇ ಕಾಯ್ದೆ ತಂದಿದ್ದೇವೆ ಎಂದು ಹೇಳಿದರು. ರಿಯಲ್ ಎಸ್ಟೇಟ್ ಕಂಪನಿಗಳು ಒಳ್ಳೆಯ ಹೆಸರು ಹೊಂದಿದ್ದರೆ ಅವರಿಗೆ ಬ್ಯಾಂಕ್‌ಗಳಿದ ಸಾಲ ಸಿಗಲಿದೆ. ನೋಟು
ಅಮಾನ್ಯ ನಂತರ ಏನೋ ಆಗಿ ಹೋಯಿತು ಎಂದು ಗುಲ್ಲೆಬ್ಬಿಸಲಾಯಿತು. ಆದರೆ, ದೇಶದಲ್ಲಿದ್ದ ಎಲ್ಲ ಹಣ ಬ್ಯಾಂಕಿಗೆ
ಜಮೆ ಆಗಿದೆ. ಹಾಗೂ ಅದರ ವಾರಸುದಾರರು ಪತ್ತೆಯಾಗಿದ್ದಾರೆ. ಹೀಗಾಗಿ, ಸಾಲ ಸಿಗುವುದಿಲ್ಲ, ಬ್ಯಾಂಕುಗಳಲ್ಲಿ ಹಣ
ಇಲ್ಲವೆಂಬ ಆತಂಕ ಬೇಡ ಎಂದು ತಿಳಿಸಿದರು. ಭೂ ಪರಿವರ್ತನೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವೈಯಕ್ತಿಕ ಅಥವಾ ಅಭಿವೃದ್ಧಿ ಯೋಜನೆಗಳಿಗೆ ಭೂ ಪರಿವರ್ತನೆ ಆದಷ್ಟು ಶೀಘ್ರ ಆಗುವಂತೆ ಕ್ರಮ ಕೈಗೊಳ್ಳ ಬೇಕಿದೆ. ಈ ನಿಟ್ಟಿನಲ್ಲಿ ಕಂದಾಯ, ನಗರಾಭಿವೃದ್ಧಿ ಹಾಗೂ ಕಾನೂನು ಇಲಾಖೆಗಳು ಸಮನ್ವಯತೆಯಿಂದ ಏಕ ಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಬೇಕು. 60 ದಿನಗಳಲ್ಲಿ ನಿರ್ಮಾಣಕ್ಕೆ ಅನುಮತಿ ಹಾಗೂ ಸಾಲ ಮರುಪಾವತಿ ಸಾಮರ್ಥ್ಯ, ಜಮೀನು ಒಡೆತನದ ಪತ್ರ ವಿಚಾರದಲ್ಲಿ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.
Related Articles
ಸಭೆಯ ನಂತರ ರಾಜ್ಯ ಬಿಜೆಪಿ ಬೆಳವಣಿಗೆ ಕುರಿತು ಮಾಧ್ಯಮದವರು ಪ್ರಸ್ತಾಪಿಸುತ್ತಿದ್ದಂತೆ ಆಸನದಿಂದ ಮೇಲೆದ್ದ ವೆಂಕಯ್ಯನಾಯ್ಡು, ನೋ ಪಾಲಿಟಿಕ್ಸ್, ಓನ್ಲಿ ಡೆವಲಪ್‌ಮೆಂಟ್, ವಿ ಕಮ್ ಫಾರ್ ಡೆವಲಪ್‌ಮೆಂಟ್ ಎಂದು ಹೇಳಿದರು. ಮಾಧ್ಯಮದವರು ಪದೇಪದೆ ಯಡಿಯೂರಪ್ಪ- ಈಶ್ವರಪ್ಪ ನಡುವಿನ ಜಗಳ ಪ್ರಸ್ತಾಪಿಸಿದಾಗ ಏನೂ ಆಗುವುದಿಲ್ಲ, ಇಬ್ಬರೂ ಸೇರಿಯೇ ಚುನಾವಣೆ ಎದುರಿಸುತ್ತಾರೆ ಎಂದಷ್ಟೇ ಹೇಳಿ ನಿರ್ಗಮಿಸಿದರು.
Advertisement
ಪಾಕ್ ಸಮಸ್ಯೆಪಾಕ್ ಸಮಸ್ಯೆ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ, ಆ ಬಗ್ಗೆ ಕೇಂದ್ರ ಸರ್ಕಾರ ಮತ್ತು ಅಲ್ಲಿನ ರಾಜ್ಯ ಸರ್ಕಾರ
ಜತೆಗೂಡಿ ಗಮನಹರಿಸಲಿದೆ. ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್-ಪಿಡಿಪಿ, ಕಾಂಗ್ರೆಸ್- ಎನ್‌ಸಿ ಮೈತ್ರಿ ಸರ್ಕಾರ
ಇದ್ದಾಗಲೂ ಸಮಸ್ಯೆ ಇತ್ತು. ಇದೀಗ ಬಿಜೆಪಿ-ಪಿಡಿಪಿ ಸರ್ಕಾರ ಇದೆ, ಈಗಲೂ ಸಮಸ್ಯೆಯಿದೆ. ಯಾವುದೇ ಸಮಸ್ಯೆ ಒಮ್ಮಿಂದೊಮ್ಮೆಲೇ ಬಗೆಹರಿಸಲಾಗದು ಎಂದು ವೆಂಕಯ್ಯನಾಯ್ಡು ಹೇಳಿದರು.