Advertisement

2020-21ರ ಆರ್ಥಿಕ ವರ್ಷದಲ್ಲಿ ನಿವ್ವಳ ಪರೋಕ್ಷ ತೆರಿಗೆಯಲ್ಲಿ ಶೇ. 12.3 ರಷ್ಟು ಏರಿಕೆ

01:10 PM Apr 14, 2021 | Team Udayavani |

ನವ ದೆಹಲಿ : 2020-21ರ ಆರ್ಥಿಕ ವರ್ಷದಲ್ಲಿ ನಿವ್ವಳ ಪರೋಕ್ಷ ತೆರಿಗೆ ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

Advertisement

ಶೇಕಡಾ 12.3ರಷ್ಟು ಹೆಚ್ಚಳವಾಗುವುದರ ಮೂಲಕ 10.71 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಈ ಮೂಲಕ ಪರಿಷ್ಕೃತ ಅಂದಾಜುಗಳಲ್ಲಿ ನಿಗದಿಪಡಿಸಿದ್ದ ಗುರಿಯನ್ನೂ ಕೂಡ ಮೀರಿದೆ ಎಂದು ಸಚಿವಾಲಯ ತಿಳಿಸಿದೆ.

ಓದಿ : ಒಂದೇ ದಿನದಲ್ಲಿ ದಾಖಲೆಯ ಕೋವಿಡ್ ಸೋಂಕಿತರು: ದೇಶದಲ್ಲಿ 1,84,372 ಜನರಿಗೆ ಸೋಂಕು ದೃಢ

ಇನ್ನು, ಆರ್ಥಿಕ ವರ್ಷ  2020-21ರಲ್ಲಿ ಜಿ ಎಸ್‌ ಟಿ ನಿವ್ವಳ ತೆರಿಗೆ ಸಂಗ್ರಹವು 5.48 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ ಒಟ್ಟು ತೆರಿಗೆ ಸಂಗ್ರಹದಲ್ಲಿ ಒಟ್ಟು ಶೇಕಡಾ 8 ರಷ್ಟು ಇಳಿಕೆಯಾಗಿರುವುದನ್ನು ಗಮನಿಸಬಹುದಾಗಿದೆ.

2019-20ರಲ್ಲಿ 5.99 ಲಕ್ಷ ಕೋಟಿ ತೆರಿಗೆ ಆದಾಯ ಸಂಗ್ರಹವಾಗಿತ್ತು. ಇನ್ನು ಕಸ್ಟಮ್‌ ಆದಾಯವು 2020-21ರಲ್ಲಿ 1.32 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ(1.09 ಲಕ್ಷ ಕೋಟಿ) ಶೇಕಡಾ 21ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ವರದಿ ತಿಳಿಸಿದೆ.

Advertisement

ಪರೋಕ್ಷ ತೆರಿಗೆಯು ಜಿ ಎಸ್‌ ಟಿ, ಕಸ್ಟಮ್ಸ್‌ ಮತ್ತು ಅಬಕಾರಿ ಸುಂಕವನ್ನು ಒಳಗೊಂಡಿದ್ದು, 2019-20ರಲ್ಲಿ 9.54 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿತ್ತು. 2020-21ರ ಪರಿಷ್ಕೃತ ಅಂದಾಜಿನಲ್ಲಿ 9.89 ಲಕ್ಷ ಕೋಟಿಗೆ ರೂಪಾಯಿಗೆ ಗುರಿ ನಿಗದಿಪಡಿಸಲಾಗಿದೆ. ಆದರೆ ಈ ಗುರಿಯನ್ನೂ ಮೀರಿ ತೆರಿಗೆ ಸಂಗ್ರಹಗೊಂಡಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಕೇಂದ್ರ ಅಬಕಾರಿ ಮತ್ತು ಸೇವಾ ತೆರಿಗೆ ಶೇಕಡಾ 59.2ರಷ್ಟು ಏರಿಕೆಯಾಗಿದ್ದು, 2.45 ಲಕ್ಷ ಕೋಟಿಯಿಂದ 3.91 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.

ಓದಿ : ವಿಶ್ವದಾದ್ಯಂತ ಮಾರುಕಟ್ಟೆಗಳಲ್ಲಿ ಸಸ್ತನಿಗಳ ಮಾರಾಟ ನಿಷೇಧಕ್ಕೆ WHO ಆದೇಶ  

Advertisement

Udayavani is now on Telegram. Click here to join our channel and stay updated with the latest news.

Next