ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾವ್ಯಾಪ್ತಿಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ಹಾಸಿಗೆ ಕೊರೊನಾ ಸೋಂಕಿತರಿಗೆ ಕಡ್ಡಾಯವಾಗಿಮೀಸಲಿರಿಸಿ, ಅಗತ್ಯ ಚಿಕಿತ್ಸೆ ನೀಡಬೇಕು ಎಂದುಅಪರ ಜಿಲ್ಲಾ ಧಿಕಾರಿ ಡಾ.ಜಗದೀಶ ಕೆ.ನಾಯಕ್‌ತಿಳಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದಲ್ಲಿರುವ ಡೀಸಿಕಚೇರಿ ಸಭಾಂಗಣದಲ್ಲಿ ಕೊರೊನಾ ನಿಯಂತ್ರಣಕ್ಕೆಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.ತಾಲೂಕಿನ ವೈದ್ಯಾಧಿ ಕಾರಿಗಳು ಮುಂಜಾಗ್ರತಾಕ್ರಮವಾಗಿ ಖಾಸಗಿ ಆಸ್ಪತ್ರೆಗಳು, ವಸತಿ ಶಾಲೆ ಸೇರಿಸಮಾಜ ಕಲ್ಯಾಣ ಇಲಾಖೆ ವಸತಿ ಗೃಹಗಳನ್ನುಕೊರೊನಾ ಸೋಂಕಿತರಿಗೆ ಮೀಸಲಿರಿಸಬೇಕು,ಅಗತ್ಯ ಸೌಕರ್ಯ ಒದಗಿಸುವಂತೆ ಇದೇವೇಳೆ ಸೂಚನೆನೀಡಿದರು.
45 ವರ್ಷ ಮೇಲ್ಪಟ್ಟವರೆಲ್ಲರೂ ಕೋವಿಡ್ ಲಸಿಕೆಹಾಕಿಸಿಕೊಳ್ಳಬೇಕು. ಯಾವುದೇ ಪೂರ್ವಗ್ರಹಪೀಡಿತರಾಗದೆ, ವದಂತಿಗಳಿಗೆ ಕಿವಿಕೊಡದೆ ಲಸಿಕೆಪಡೆಯಬೇಕು ಎಂದು ಸಾರ್ವಜನಿಕರಿಗೆ ತಿಳಿಸಲುಕ್ರಮ ಕೈಗೊಳ್ಳಬೇಕು ಎಂದು ವಿವರಿಸಿದರು.ಕೊರೊನಾ ಸೋಂಕಿತರಿಗೆ ನಿಗದಿಪಡಿಸಿರುವಹಾಸಿಗೆ ಮೀಸಲಿಡಬೇಕು.
ಖಾಸಗಿ ಆಸ್ಪತ್ರೆಗಳಲ್ಲಿಔಷಧಿ ಮತ್ತು ಚುಚ್ಚುಮದ್ದಿನ ಸಮಸ್ಯೆ ಆಗದಂತೆನಿಗಾವಹಿಸಬೇಕು. ಆ್ಯಕ್ಸಿಜನ್ ಸರಬರಾಜುಕೊರತೆಯಾಗದಂತೆ ನೋಡಿಕೊಳ್ಳಬೇಕು. ನಿಗದಿತಅವಧಿಗೆ ಆ್ಯಂಬುಲೆನ್ಸ್ ಸೇವೆಯನ್ನು ಕಡ್ಡಾಯಗೊಳಿಸಬೇಕು. ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್‌ನಿಂದ ಎಸ್ಸಿ-ಎಸ್ಟಿ ವರ್ಗಗಳಿಗೆ ದೊರೆಯುವಸೌಲಭ್ಯ ನೀಡಬೇಕು ಎಂದು ಹೇಳಿದರು.ಜಿಲ್ಲಾ ಆರೋಗ್ಯಾ ಧಿಕಾರಿ ಡಾ.ಮಂಜುಳಾದೇವಿಮಾತನಾಡಿ, ಆಸ್ಪತ್ರೆಗಳಲ್ಲಿ ಕೋವಿಡ್-19 ಲಸಿಕೆನೀಡುವ ಮುನ್ನ ಲಸಿಕೆ ಪಡೆಯುವವರಿಗೆಪ್ರಾಥಮಿಕ ತಪಾಸಣೆ ನಡೆಸಿ,ಆರೋಗ್ಯವಾಗಿದ್ದಾರೆಯೇ ಎಂದುಖಚಿತಪಡಿಸಿಕೊಂಡ ನಂತರವೇ ಲಸಿಕೆ ನೀಡಬೇಕು.
ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಭರ್ತಿಯಾದನಂತರ ಸೋಂಕಿತರನ್ನು ಖಾಸಗಿ ಆಸ್ಪತ್ರೆಗೆಕಳುಹಿಸಬೇಕು ಎಂದು ವೈದ್ಯರಿಗೆ ಸೂಚಿಸಿದರು.ಸಭೆಯಲ್ಲಿ ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ.ಗೀತಾಭಾಲಿ, ವಿಶ್ವ ಆರೋಗ್ಯ ಸಂಸ್ಥೆಯಜಿಲ್ಲಾ ನೋಡಲ್ ಅ ಧಿಕಾರಿ ಡಾ.ನಾಗರಾಜ್,ವೈದ್ಯಾಧಿ ಕಾರಿಗಳಾದ ಶ್ರೀನಿವಾಸ್, ಧರ್ಮೆàಂದ್ರ,ತಾಲೂಕು ವೈದ್ಯಾಧಿ ಕಾರಿಗಳು, ಖಾಸಗಿ ಆಸ್ಪತ್ರೆಗಳಮುಖ್ಯಸ್ಥರು ಇದ್ದರು.ಇಂಡಿಯನ್ ಖಾಸಗಿ ಆಸ್ಪತ್ರೆಗಳ ಒಕ್ಕೂಟದಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಸೋಂಕಿತರಿಗೆಸರ್ಕಾರ ನಿಗದಿಪಡಿಸಿರುವ ಹಾಸಿಗೆಗಳನ್ನುಸಿದ್ಧಪಡಿಸಲಾಗಿದೆ. ಯಾವುದೇ ಸಮಸ್ಯೆಯಾಗದಂತೆನೋಡಿಕೊಳ್ಳಲಾಗುತ್ತಿದೆ ಎಂದರು.