ಹೊಸದಿಲ್ಲಿ: ತಾನು ನೀಡುವ ಎಲ್ಲ ಪುರಸ್ಕಾರಗಳನ್ನು ಪಾರದರ್ಶಕವಾಗಿಡುವ ನಿಟ್ಟಿನಲ್ಲಿ, ಹಾಗೆಯೇ ಎಲ್ಲ ಪ್ರಶಸ್ತಿಗಳನ್ನು ಒಂದು ವೇದಿಕೆಯಲ್ಲಿ ತರಲು ಕೇಂದ್ರ ಸರಕಾರ “ರಾಷ್ಟ್ರೀಯ ಪುರಸ್ಕಾರ್’ ಎಂಬ ಹೊಸ ವೆಬ್‌ಸೈಟ್ ಆರಂಭಿಸಿದೆ.
https://awards.gov.in ಹೆಸರಿನ ಈ ವೆಬ್‌ಸೈಟ್‌ನಲ್ಲಿ ಪ್ರತೀ ನಾಗರಿಕರು ಅಥವಾ ಸಂಘ ಟನೆಗಳು ತಮ್ಮ ತಮ್ಮ ಹೆಸರುಗಳನ್ನು ವಿವಿಧ ಪುರಸ್ಕಾರಗಳಿಗೆ ನೋಂದಾಯಿಸಬಹುದು.
ವಿವಿಧ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ: ಕೇಂದ್ರದಿಂದ ನೀಡಲಾಗುವ ವಿವಿಧ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ನಿಗದಿತ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.
ಪದ್ಮ ಪ್ರಶಸ್ತಿ (ಜು. 30, 2022), ವಯೋ ಶ್ರೇಷ್ಠತಾ ಸಮ್ಮಾನ್ (ಆ. 18, 2022), ವ್ಯಕ್ತಿಶ್ರೇಷ್ಠತೆ- 2021 (ಆ. 28, 2022), ವ್ಯಕ್ತಿಶ್ರೇಷ್ಠತೆ - 2022 (ಆ. 28, 2022), ದಿವ್ಯಾಂಗರ ಕಲ್ಯಾಣಕ್ಕಾಗಿ ಶ್ರಮಿಸಿದ ಸಂಸ್ಥೆಗಳು -2021 (ಆ. 28, 2022), ದಿವ್ಯಾಂಗರ ಕಲ್ಯಾಣಕ್ಕಾಗಿ ಶ್ರಮಿಸಿದ ಸಂಸ್ಥೆಗಳು-2022 (ಆ. 28, 2022), ಸಿಎಸ್‌ಆರ್ ಪ್ರಶಸ್ತಿಗಳು (ಜು. 31, 2022), ನಾರೀ ಶಕ್ತಿ ಪುರಸ್ಕಾರ (ಅ. 31, 2022), ಸುಭಾಷ್ ಚಂದ್ರ ಬೋಸ್ ಆಪಾx ಪ್ರಬಂಧನ್ ಪುರಸ್ಕಾರ (ಆ. 31, 2022), ಇ-ಆಡಳಿತ ರಾಷ್ಟ್ರೀಯ ಪ್ರಶಸ್ತಿ ಗಳು (ಜು. 31, 2022), ಸರ್ದಾರ್ ಪಟೇಲ್ ರಾಷ್ಟ್ರೀಯ ಐಕ್ಯತೆ (ಜು. 31, 2022), ಮದ್ಯಪಾನ-ಉದ್ದೀಪನ ತಡೆಗೆ ಅಸಾ ಮಾನ್ಯ ಕೊಡುಗೆ (ಜು. 30, 2022), ಜೀವನ ರûಾ ಪದಕ (ಸೆ. 30, 2022).