ನವ ದೆಹಲಿ : ಭಾರಿ ಕುತೂಹಲ ಮೂಡಿಸಿದ್ದ ಕೇಂದ್ರ ಸರ್ಕಾರದ ಸಚಿವ ಸಂಪುಟದ ವಿಸ್ತರಣೆಗೆ ಗುರುವಾರ ಮುಹೂರ್ತ ಫಿಕ್ಸ್ ಆಗಿದೆ ಎಂದು ಸರ್ಕಾರ ಅಧಿಕೃತ ಮೂಲಗಳು ತಿಳಿಸಿದೆ.
ಗುರುವಾರ(ಜುಲೈ 8) ಬೆಳಗ್ಗೆ 10: 30ಕ್ಕೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕೂಡ ಸರ್ಕಾರ ಮಾಹಿತಿ ನೀಡಿದೆ.
ಇದನ್ನೂ ಓದಿ : 2023ರ ವಿಧಾನಸಭಾ ಚುನಾವಣೆಗೆ ಈಗಲೇ ಸಿದ್ದತೆ ಮಾಡಿಕೊಳ್ಳಿ: ಡಿ.ಕೆ ಅರುಣಾ
‘ಇಂದು (ಮಂಗಳವಾರ, ಜುಲೈ 6) ಮೋದಿ ಅವರು ಪ್ರಮುಖ ಸಚಿವರು ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಇವತ್ತಿನ ಸಭೆ ರದ್ದಾಗಿದೆ. ಎರಡನೇ ಬಾರಿಗೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ಸಂಪುಟ ಮರುರಚನೆಯಾಗುತ್ತಿದೆ.
ಅಸ್ಸಾಂ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಸರ್ಬಾನಂದ ಸೋನೊವಾಲ್, ಜ್ಯೋತಿರಾದಿತ್ಯ ಸಿಂದಿಯಾ, ಸುಶೀಲ್ ಮೋದಿ ಅವರ ಹೆಸರುಗಳು ಸಚಿವ ಸ್ಥಾನದ ಪಟ್ಟಿಯಲ್ಲಿ ಪ್ರಮುಖವಾಗಿವೆ. ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಸೋದರ ಪಶುಪತಿ ಕುಮಾರ್ ಪರಾಸ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶದ ನಾಯಕರು ಹಾಗೂ ಬಿಜೆಪಿಯ ಮೈತ್ರಿ ಪಕ್ಷಗಳಾದ ಜೆಡಿ(ಯು) ಮತ್ತು ಅಪ್ನಾ ದಳದ ಪ್ರತಿನಿಧಿಗಳಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.
ಇನ್ನು, ಪ್ರಸ್ತುತ ಕೇಂದ್ರ ಸಚಿವ ಸಂಪುಟವು ಪ್ರಧಾನಿ ಮೋದಿ ಅವರನ್ನು ಹೊರತು ಪಡಿಸಿ 53 ಸಚಿವರನ್ನು ಒಳಗೊಂಡಿದೆ. ಗರಿಷ್ಠ 81 ಸಂಸದರಿಗೆ ಸಚಿವ ಸಂಪುಟ ಸೇರುವ ಅವಕಾಶವಿದೆ.
ಇದನ್ನೂ ಓದಿ : ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಈ ಎರಡು ಸೇವೆಗಳನ್ನು ಸ್ಥಗಿತಗೊಳಿಸಿದ ಯುಐಡಿಎಐ