Advertisement

ಉನ್ನತ ಮಟ್ಟದ ಸಮಿತಿ

10:04 AM Oct 30, 2019 | Team Udayavani |

ಹೊಸದಿಲ್ಲಿ: ದೂರಸಂಪರ್ಕ ಕ್ಷೇತ್ರಕ್ಕೆ ಹಣಕಾಸು ಉತ್ತೇಜನ ಪ್ಯಾಕೇಜ್‌ ಘೋಷಿಸುವ ಕುರಿತು ನಿರ್ಧಾರ ಕೈಗೊಳ್ಳಲು ಉನ್ನತ ಮಟ್ಟದ ಕಾರ್ಯದರ್ಶಿಗಳ ಸಮಿತಿಯೊಂದನ್ನು ಕೇಂದ್ರ ಸರಕಾರ ಮಂಗಳವಾರ ರಚಿಸಿದೆ. ತರಂಗಾಂತರ ಶುಲ್ಕ ಇಳಿಕೆ, ಉಚಿತ ಮೊಬೈಲ್‌ ಫೋನ್‌ ಕರೆಗಳಿಗೆ ಕಡಿವಾಣ, ಅಗ್ಗದ ದರದಲ್ಲಿ ಡೇಟಾ ಸೌಲಭ್ಯಕ್ಕೆ ಅಂತ್ಯ ಹಾಡುವುದು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳುವ ಮೂಲಕ ಟೆಲಿಕಾಂ ವಲಯಕ್ಕೆ ಆರ್ಥಿಕ ಪ್ಯಾಕೇಜ್‌ ಘೋಷಿಸುವ ಕುರಿತು ಈ ಸಮಿತಿಯು ಪರಿಶೀಲನೆ ನಡೆಸಲಿದೆ. ಈ ಸಮಿತಿಗೆ ಸಂಪುಟ ಕಾರ್ಯದರ್ಶಿ ರಾಜೀವ್‌ ಗೌಬಾ ನೇತೃತ್ವ ವಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next