Advertisement

ಅರಣ್ಯ ಕಾಯ್ದೆ ತಿದ್ದುಪಡಿ ಕರಡು ವಾಪಸ್‌ ಪಡೆದ ಕೇಂದ್ರ ಸರಕಾರ

10:15 AM Nov 17, 2019 | Team Udayavani |

ಹೊಸದಿಲ್ಲಿ: ಭಾರತೀಯ ಅರಣ್ಯ ಕಾಯ್ದೆ 1972ರ ತಿದ್ದುಪಡಿಯ ಕರಡನ್ನು ಕೇಂದ್ರ ಸರಕಾರ ಕೊನೆಗೂ ವಾಪಸ್‌ ಪಡೆದಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಅವರೇ ಈ ವಿಷಯ ತಿಳಿಸಿದ್ದು, ತಿದ್ದುಪಡಿಯ ಕರಡು ಜನರಲ್ಲಿ ಕೆಲವೊಂದು ತಪ್ಪು ಅಭಿಪ್ರಾಯ ಗಳನ್ನು ಮೂಡಿಸಿದೆ ಎಂದು ಹೇಳಿದ್ದಾರೆ.

Advertisement

ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನವೇ ಕೇಂದ್ರ ಸರಕಾರ ಈ ನಿರ್ಧಾರ ಕೈಗೊಳ್ಳುವ ಮೂಲಕ, ವಿಪಕ್ಷಗಳಿಗೆ ಚರ್ಚೆಯ ವಿಷಯ ವಾಗದಂತೆ ಮುನ್ನೆಚ್ಚರಿಕೆ ವಹಿಸಿದೆ.

ಶುಕ್ರವಾರ ಮಾತನಾಡಿದ ಜಾವಡೇಕರ್‌, 11 ರಾಜ್ಯಗಳು ತಮ್ಮದೇ ಸ್ವಂತ ಅರಣ್ಯ ಕಾನೂನುಗಳನ್ನು ತಂದಿವೆ. ಅವುಗಳಿಗೆ ಸುಧಾರಣೆ ತರಲು ಸಾಧ್ಯವೇ ಎಂಬ ನಿಟ್ಟಿನಲ್ಲಿ ಅಧ್ಯಯನ ಕೈಗೊಳ್ಳಲು ಸರಕಾರ ಮುಂದಾಯಿತು. ಆದರೆ, ಈ ಅಧ್ಯಯನವನ್ನು ಜನರು ಕೇಂದ್ರ ಸರಕಾರ ಅರಣ್ಯ ಕಾಯ್ದೆಗೆ ತಂದ ತಿದ್ದುಪಡಿ ಎಂದೇ ಭಾವಿಸಿದರು. ಸರಕಾರಕ್ಕೆ ಅಂಥ ಉದ್ದೇಶ ಇರಲಿಲ್ಲ. ಬುಡಕಟ್ಟು ಜನಾಂಗೀಯರು ಹಾಗೂ ಅರಣ್ಯಪ್ರದೇಶದಲ್ಲಿ ವಾಸಿಸುವವರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಬಿಂಬಿಸಲಾಯಿತು.
ಇಂಥ ತಪ್ಪು ಕಲ್ಪನೆಗಳಿಗೆ ತೆ‌ರೆ ಎಳೆಯುವ ಉದ್ದೇಶದಿಂದ ನಾವು ಈಗ ಕರಡು ತಿದ್ದುಪಡಿಯನ್ನು ವಾಪಸ್‌ ಪಡೆಯಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next