Advertisement
ಇದಕ್ಕೆ ಪೂರಕವಾಗಿ ರೈಲ್ವೇ ಸಚಿವಾಲಯವು ಗರೀಬ್ ರಥ ಎಕ್ಸ್ ಪ್ರೆಸ್ ರೈಲಿನ ಹೊಸ ಬೋಗಿಗಳ ನಿರ್ಮಾಣವನ್ನು ಸ್ಥಗಿತಗೊಳಿಸುವಂತೆ ಈಗಾಗಲೇ ಆದೇಶಿಸಿದೆ ಎಂಬ ಅಂಶವೂ ಇದೀಗ ಬಹಿರಂಗಗೊಂಡಿದೆ. ಇದರ ಅರ್ಥ ಒಂದೋ ಗರೀಬ್ ರಥ ರೈಲು ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಇಲ್ಲವೇ ಇವುಗಳನ್ನು ಮೇಲ್ ಅಥವಾ ಎಕ್ಸ್ ಪ್ರೆಸ್ ರೈಲುಗಳನ್ನಾಗಿ ಪರಿವರ್ತಿಸಲಾಗುವುದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಇನ್ನು ಹೆಚ್ಚಿನ ದರವನ್ನು ನೀಡಿ ರೈಲು ಪ್ರಯಾಣ ಕೈಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಉದಾಹರಣೆಗೆ ದೆಹಲಿ – ಬಾಂದ್ರಾ ಗರೀಬ್ ರಥ ರೈಲು ಪ್ರಯಾಣದ ದರ 1050 ರೂಪಾಯಿಗಳಾಗಿತ್ತು ಆದರೆ ಇದೀಗ ಇದೇ ಮಾರ್ಗದ ಎಕ್ಸ್ ಪ್ರೆಸ್ ರೈಲಿನ ದರ 1500 ರಿಂದ 1600 ರೂಪಾಯಿಗಳಾಗಲಿವೆ. ಸದ್ಯಕ್ಕೆ ಕಾರ್ಯಾಚರಿಸುತ್ತಿರುವ ಗರೀಬ್ ರಥ ರೈಲಿನ ಬೋಗಿಗಳು 10-14 ವರ್ಷಗಳಷ್ಟು ಹಳೆಯದಾಗಿರುವುದರಿಂದ ಇವುಗಳ ನಿರ್ವಹಣಾ ವೆಚ್ಚವು ರೈಲ್ವೇ ಇಲಾಖೆಗೆ ಒಂದು ಹೊರೆಯಾಗಿ ಪರಿಣಮಿಸುತ್ತಿದೆ. ಹಾಗಾಗಿ ರೈಲ್ವೇ ಇಲಾಖೆಗೆ ಹೆಚ್ಚು ಆದಾಯವನ್ನು ತಂದುಕೊಡುವ ನಿಟ್ಟಿನಲ್ಲಿ ಗರೀಬ್ ರಥದ ಬದಲಿಗೆ 3-ಎಸಿ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸುವ ಯೋಚನೆ ರೈಲ್ವೇಯದ್ದಾಗಿದೆ.
Related Articles
Advertisement