ಮುಂದಿನ ಫೆಬ್ರವರಿಗೆ ಕೇಂದ್ರ ಬಜೆಟ್ ಮಂಡಿಸಲಿದ್ದು, ಇದಕ್ಕೆ ನವೆಂಬರ್‌ನಲ್ಲೇ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ದೀರ್ಘಾವಧಿ ಬಂಡವಾಳ ಹೂಡಿಕೆ ಲಾಭ ತೆರಿಗೆ (ಎಲ್‌ಟಿಸಿಜಿ), ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ಹಾಗೂ ಲಾಭಾಂಶ ಹಂಚಿಕೆ ತೆರಿಗೆ (ಡಿಡಿಟಿ)ಯನ್ನು ಕಡಿತಗೊಳಿಸುವ ಸಾಧ್ಯತೆ ಇದೆ.
Advertisement
ಈ ಸಂಬಂಧ ಪ್ರಧಾನಮಂತ್ರಿ ಕಾರ್ಯಾಲಯವು, ಹಣಕಾಸು ಸಚಿವಾಲಯದ ತೆರಿಗೆ ಇಲಾಖೆ ಹಾಗೂ ನೀತಿ ಆಯೋಗದ ಜೊತೆ ಚರ್ಚೆ ನಡೆಸುತ್ತಿದೆ. ನವೆಂಬರ್ ತಿಂಗಳಾಂತ್ಯದಲ್ಲಿ ಅಂತಿಮ ರೂಪುರೇಷೆ ನಿಗದಿಪಡಿಸಲಿದೆ ಎಂದು ಮೂಲಗಳು ತಿಳಿಸಿವೆ. ಫೆಬ್ರವರಿ 3ರಂದು ಕೇಂದ್ರ ಬಜೆಟ್ ಮಂಡಿಸಲಿದ್ದು, ಇದಕ್ಕೂ ಮುನ್ನವೇ ತೆರಿಗೆ ಕಡಿತವನ್ನು ಘೋಷಿಸುವ ಸಂಭವ ಇದೆ.
ಈ ದೀಪಾವಳಿಯು ಷೇರು ಹೂಡಿಕೆದಾರರಿಗೆ ಹೊಸ ಭರವಸೆಯ ಬೆಳಕು ಮೂಡಿಸಿದ್ದು, ಹಬ್ಬದ ಮಾರನೇ ದಿನದ ವಹಿವಾಟಿನಲ್ಲೇ ಸೆನ್ಸೆಕ್ಸ್ ಭರ್ಜರಿ ಏರಿಕೆ ದಾಖಲಿಸಿದೆ. ಕೇಂದ್ರ ಸರಕಾರವು ಆರ್ಥಿಕತೆಗೆ ಉತ್ತೇಜನ ನೀಡಲು ಇನ್ನಷ್ಟು ಕ್ರಮಗಳನ್ನು ಘೋಷಿಸಲಿದೆ ಹಾಗೂ ಆದಾಯ ತೆರಿಗೆ ಕಡಿತ ಮಾಡಲಿದೆ ಎಂಬ ಸುದ್ದಿಯು ಹೂಡಿಕೆದಾರರಿಗೆ ಹುಮ್ಮಸ್ಸು ನೀಡಿದೆ.
Related Articles
Advertisement