Advertisement

ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ರಚನೆ

02:22 AM Jul 24, 2020 | Hari Prasad |

ಹೊಸದಿಲ್ಲಿ: ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ರಚಿಸಲು ಕೊನೆಗೂ ಕೇಂದ್ರ ಸರಕಾರ ಮುಂದಾಗಿದೆ.

Advertisement

ಈ ಸಂಬಂಧ ರಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಸೇನೆಯಲ್ಲಿ ಮಹಿಳೆಯರ ಸಾಮರ್ಥ್ಯದ ಬಗ್ಗೆ ತಾರತಮ್ಯ ಇರಬಾರದು.

ಅವರಿಗೂ ಉನ್ನತ ಹುದ್ದೆ ನಿರ್ವಹಿಸಲು ಅವಕಾಶ ಒದಗಿಸಬೇಕು ಎಂದು ಸುಪ್ರೀಂಕೋರ್ಟ್‌ ಕಳೆದ ತಿಂಗಳಷ್ಟೇ ಸೂಚಿಸಿತ್ತು.

ಸರಕಾರ ಹೊರಡಿಸಿರುವ ಆಯೋಗ ರಚನೆ ಆದೇಶವು ಸೈನ್ಯದಲ್ಲಿ ಮಹಿಳೆಯರಿಗೆ ಉನ್ನತ ಹುದ್ದೆಗಳನ್ನು ನಿರ್ವಹಿಸಲು ಅನುವುಮಾಡಿಕೊಡಲಿದೆ ಎಂದು ಸೇನೆಯ ವಕ್ತಾರ ಕ| ಅಮನ್‌ ಆನಂದ್‌ ಹೇಳಿದ್ದಾರೆ.

Advertisement

ಈ ಮೂಲಕ ಸೇನೆಯ ಎಲ್ಲ 10 ವಿಭಾಗಗಳಲ್ಲೂ ಮಹಿಳೆಯರಿಗೆ ಉನ್ನತ ಹುದ್ದೆಗಳು ಲಭಿಸಲಿವೆ. ಆಯೋಗಕ್ಕೆ ಅಗತ್ಯ ಅನುದಾನ ನಿಗದಿಪಡಿಸಲು ಸರಕಾರ ತೀರ್ಮಾನಿಸಿದೆ.

ವಾಯುರಕ್ಷಣ ವ್ಯವಸ್ಥೆ, ಸಿಗ್ನಲ್ಸ್‌, ಎಂಜಿನಿಯರ್, ಎಲೆಕ್ಟ್ರಾನಿಕ್ಸ್‌ ಮತ್ತು ಮೆಕ್ಯಾನಿಕಲ್‌ ಎಂಜಿನಿಯರ್ ಮತ್ತಿತರ ವಿಭಾಗಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ಅವಕಾಶಗಳು ಹೆಚ್ಚಲಿವೆ.

Advertisement

Udayavani is now on Telegram. Click here to join our channel and stay updated with the latest news.

Next