Advertisement
– ತಮ್ಮ ಮೊದಲ ಪಿಂಚಣಿ ಹಣ ಪಡೆಯಲು, ಬ್ಯಾಂಕ್‌ಗಳಿಗೆ ಹೋಗಲೇಬೇಕಾಗಿಲ್ಲ. ಖಾತೆ ತೆರೆಯಲು, ಪಿಂಚಣಿದಾರನ ಉಪಸ್ಥಿತಿ ಬೇಕಿಲ್ಲ.
Related Articles
Advertisement
– ಪಿಂಚಣಿ ಪಡೆಯುವ ಪ್ರತೀ ವ್ಯಕ್ತಿ, ಪ್ರತೀವರ್ಷ ನವೆಂಬರ್‌ನಲ್ಲಿ ತಮ್ಮ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಬ್ಯಾಂಕ್‌ಗಳು ಅಂತರ್ಜಾಲದ ಮೂಲಕ ಆಧಾರ್ ಆಧಾರಿತ ಜೀವನ್ ಪ್ರಮಾಣ್ ಅನ್ನು ಅಂಗೀಕರಿಸಬಹುದು. ಇನ್ನು ಬ್ಯಾಂಕ್‌ಗಳು ಪ್ರತೀವರ್ಷ ಅ.24, ನ.1, ನ.15, ನ. 25ಕ್ಕೆ ಎಲ್ಲ ಪಿಂಚಣಿದಾರರಿಗೆ ಎಸ್‌ಎಂಎಸ್, ಇಮೇಲ್‌ಗಳ ಮೂಲಕ ಜೀವಿತ ಪ್ರಮಾಣ ಪತ್ರ ಸಲ್ಲಿಸುವಂತೆ ಎಚ್ಚರಿಸಬೇಕು.
– ಇನ್ನು ಪ್ರತೀವರ್ಷ ಡಿ.1ರಂದು ಬ್ಯಾಂಕ್‌ಗಳು ಜೀವಿತ ಪ್ರಮಾಣಪತ್ರ ಸಲ್ಲಿಸದಿದ್ದವರ ಪಟ್ಟಿ ತಯಾರಿಸಬೇಕು. ಅವರಿಗೆ ಸಂದೇಶ ಕಳುಹಿಸಿ, ಪ್ರಮಾಣಪತ್ರವನ್ನು ಮನೆ ಬಾಗಿಲಿಗೆ ಬಂದು ಪಡೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಬೇಕು.
– ಒಂದು ವೇಳೆ ಪಿಂಚಣಿಯು ಶಾಶ್ವತ ಅಂಗವೈಕಲ್ಯ ಮಗುವಿಗೆ ಹೋಗುತ್ತಿದ್ದರೆ, ಆ ಮಗು ಇನ್ನು ಪ್ರತೀವರ್ಷ ಅಂಗವೈಕಲ್ಯ ಹೊಂದಿರುವ ಬಗ್ಗೆ ಹೊಸ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿಲ್ಲ. ಕೇವಲ ತಾನು ಗಳಿಕೆ ಮಾಡುತ್ತಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಿದರೆ ಸಾಕು. ತಾತ್ಕಾಲಿಕ ವೈಕಲ್ಯ ಹೊಂದಿದ್ದರೆ, 5 ವರ್ಷಕ್ಕೊಮ್ಮೆ ಪೋಷಕರು ಪ್ರಮಾಣಪತ್ರ ಸಲ್ಲಿಸಬೇಕು.