Advertisement

ಬಾಡಿಗೆ ತಾಯ್ತನಕ್ಕೂ ಸಿಗಲಿದೆ ಹೆರಿಗೆ ರಜೆ

08:15 AM Feb 09, 2018 | Team Udayavani |

ಹೊಸದಿಲ್ಲಿ: ಬಾಡಿಗೆ ತಾಯ್ತನದ ಮೂಲಕ ಗರ್ಭವತಿಯಾದ ಕೇಂದ್ರ ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ 26 ವಾರಗಳ ಹೆರಿಗೆ ರಜೆ ನೀಡುವಂತೆ ಕೇಂದ್ರ ಸಿಬ್ಬಂದಿ ಇಲಾಖೆ ಆದೇಶ ಹೊರಡಿಸಿದೆ. ಈ ವಿಚಾರವಾಗಿ, 2015ರಲ್ಲಿ ದಿಲ್ಲಿ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಈಗ ಜಾರಿಗೊಳಿಸುತ್ತಿ ರುವುದಾಗಿ ಇಲಾಖೆ ತನ್ನ ಆದೇಶದಲ್ಲಿ ಹೇಳಿದೆ. ದಿಲ್ಲಿಯ ಶಿಕ್ಷಕಿಯೊಬ್ಬರು, ಬಾಡಿಗೆ ತಾಯ್ತನದ ಮೂಲಕ ಗರ್ಭಿಣಿಯಾ ಗಿದ್ದಾಗ ಅವರ ಹೆರಿಗೆ ರಜೆ ಅರ್ಜಿಯನ್ನು ಕೇಂದ್ರೀಯ ವಿದ್ಯಾಲಯ ತಿರಸ್ಕರಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next