Advertisement

8 High Courts; ಸಿಜೆಗಳನ್ನು ನೇಮಿಸಿದ ಕೇಂದ್ರ ಸರ್ಕಾರ

11:05 PM Sep 22, 2024 | Team Udayavani |

ನವದೆಹಲಿ: ಕೊಲಿಜಿಯಂ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರ 8 ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯ ಮೂರ್ತಿಗಳ ನೇಮಕ ಪೂರ್ಣಗೊಳಿಸಿದೆ. ದೆಹಲಿ ಹೈಕೋರ್ಟ್‌ನ ಹಂಗಾಮಿ ಸಿ.ಜೆ. ಆಗಿದ್ದ ಮನ ಮೋಹನ್‌ರನ್ನು ಸಿಜೆಯಾಗಿ, ರಾಜೀವ್‌ ಶಕ್‌ಧೇರ್‌ರನ್ನು ಹಿಮಾಚಲ, ನ್ಯಾ.ಸುರೇಶ್‌ ಕುಮಾರ್‌ ಕೈಟ್‌ರನ್ನು ಮಧ್ಯ ಪ್ರದೇಶ, ನ್ಯಾ.ಇಂದ್ರ ಪ್ರಸನ್ನ ಮುಖರ್ಜಿ ಮೇಘಾ ಲಯ, ಕೇರಳಕ್ಕೆ ನ್ಯಾ.ನಿತಿನ್‌ ಜಾಮ್‌ದಾರ್‌, ಜಮ್ಮು-ಕಾಶ್ಮೀರ ಮತ್ತು ಲಡಾಖ್‌ಗೆ ನ್ಯಾ.ತಾಶಿ ರಬ್‌ಸ್ತಾನ್‌, ಮದ್ರಾಸ್‌ಗೆ ನ್ಯಾ.ಶ್ರೀರಾಮ್‌, ಜಾರ್ಖಂಡ್‌ಗೆ ನ್ಯಾ.ಎಂ.ಎಸ್‌.ರಾಮಚಂದ್ರ ರಾವ್‌ ನೇಮಕಗೊಂಡಿದ್ದಾರೆ. ಕೊಲಿಜಿಯಂ ಶಿಫಾರಸ್ಸುಗಳು ಕೇವಲ ಸಲಹೆಗಳಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದ 1 ದಿನದ ಬಳಿಕ ಈ ಅಧಿಸೂಚನೆ ಹೊರಡಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next