Advertisement

ಕೇಂದ್ರ ನೌಕರರಿಗೆ ಡಬಲ್ ಖುಷಿ…ವೇತನ ಹೆಚ್ಚಳದ ಜೊತೆ ತುಟ್ಟಿ ಭತ್ತೆಯೂ ಹೆಚ್ಚಳ

09:36 PM Mar 09, 2023 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರಿ ನೌಕರರಿಗೆ ಶೀಘ್ರದಲ್ಲೇ 7ನೇ ವೇತನ ಆಯೋಗದ ಪ್ರಕಾರ ವೇತನ ಹೆಚ್ಚಳವಾಗಲಿದ್ದು, ಇದಕ್ಕೆ ಪೂರಕವಾಗಿ ತುಟ್ಟಿ ಭತ್ತೆಯೂ ಹೆಚ್ಚಾಗುವ ಸಂಭವವಿದೆ. ಈ ಮೂಲಕ ಅವರಿಗೆ ಡಬಲ್‌ ಖುಷಿ ಸಿಗಲಿದೆ.

Advertisement

ಮೂಲಗಳ ಪ್ರಕಾರ, ಕೇಂದ್ರ ಸರಕಾರಿ ನೌಕರರ ಮೂಲ ವೇತನ ಪ್ರತಿ ತಿಂಗಳಿಗೆ 18 ಸಾವಿರ ರೂ.ಗಳಿಂದ 26 ಸಾವಿರ ರೂ.ಗಳಿಗೆ ಏರಿಕೆಯಾಗಲಿದೆ ಎನ್ನಲಾಗುತ್ತಿದೆ. ಮೂಲ ಸಂಬಳದ ಜತೆಗೆ ಮಾಡಲಾಗಿರುವ ಹೊಂದಾಣಿಕೆ ಅಂಶಗಳಲ್ಲಿ ಕೂಡ (ಫಿಟ್‌ಮೆಂಟ್‌ ಫ್ಯಾಕ್ಟರ್‌) ಹೆಚ್ಚಳವಾಗಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಲಿದೆ. ಬಣ್ಣಗಳ ಹಬ್ಬ ಹೋಳಿ ಮುಕ್ತಾಯವಾದ ಬಳಿಕ ಕೇಂದ್ರ ಸರಕಾರದಿಂದ ನಿರ್ಧಾರ ಪ್ರಕಟವಾಗಲಿದೆ ಎನ್ನಲಾಗಿದೆ.

ತುಟ್ಟಿಭತ್ತೆ (ಡಿಎ)ಯನ್ನು ಈಗಾಗಲೇ ಎರಡು ಬಾರಿ ಪರಿಷ್ಕರಿಸಲಾಗಿದೆ. 2022ರ ಸೆಪ್ಟಂಬರ್‌ನಲ್ಲಿ ಡಿ.ಎ. ಏರಿಸಲಾಗಿತ್ತು. ಇದರಿಂದಾಗಿ 48 ಲಕ್ಷ ಮಂದಿ ಕೇಂದ್ರ ಸರಕಾರಿ ಉದ್ಯೋಗಿಗಳು ಹಾಗೂ 68 ಲಕ್ಷ ಮಂದಿ ಪಿಂಚಣಿದಾರರಿಗೆ ಅನುಕೂಲವಾಗಿತ್ತು. ಆ ಸಂದರ್ಭದಲ್ಲಿ ಶೇ.4ರಿಂದ ಶೇ.38ರ ವರೆಗೆ ಹೆಚ್ಚಿಸಲಾಗಿತ್ತು. ಇದಲ್ಲದೆ 18 ತಿಂಗಳಿಂದ ತುಟ್ಟಿಭತ್ತೆ ನೀಡಬೇಕಾಗಿರುವುದರ ಬಗ್ಗೆಯೂ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

 

Advertisement

Udayavani is now on Telegram. Click here to join our channel and stay updated with the latest news.

Next