Advertisement

ಚಾರಮಕ್ಕಿ ಶಾಲೆ ರೂಪಿಸಿದ ವೀಡಿಯೋಗೆ ರಾಷ್ಟ್ರದ ಮೆಚ್ಚುಗೆ

07:13 AM Mar 17, 2021 | Team Udayavani |

ಕುಂದಾಪುರ: ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ “ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಪ್ರೇರಣೆ ನೀಡುವ ಪ್ರಮೋಶನಲ್‌ ವೀಡಿಯೋ ಒಂದನ್ನು ಅಲ್ಬಾಡಿ – ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ನಿರ್ಮಿಸಿದ್ದು, ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ಈ ವೀಡಿಯೋ ದೂರದರ್ಶನದ ಡಿಡಿ ಇಂಡಿಯಾ, ಡಿಡಿ ನ್ಯೂಸ್‌ ಮತ್ತು ಡಿಡಿ ಚಂದನ ಟಿ.ವಿ., ಡಿಡಿ ನ್ಯೂಸ್‌ ಟ್ವಿಟರ್‌ನಲ್ಲಿ ಪ್ರಸಾರವಾಗುವ ಮೂಲಕ ಹಳ್ಳಿಗಾಡಿನ ಮಕ್ಕಳ ಮತ್ತು ಶಿಕ್ಷಕರ ಪ್ರತಿಭೆ ದೇಶದಲ್ಲಿ ಪಸರಿಸುವಂತಾಗಿದೆ. ಇದರ ಹಿಂದಿ ಅವತರಣಿಕೆಯು ರಾಷ್ಟ್ರ ಮಟ್ಟದ ಹಿಂದಿ ಚಾನೆಲ್‌ಗ‌ಳಲ್ಲೂ ಪ್ರಸಾರವಾಗಲಿದೆ.

ಪ್ರೇರಣದಾಯಿ
2.52 ನಿಮಿಷಗಳ ಈ ವೀಡಿಯೋವನ್ನು ಮುಖ್ಯ ಶಿಕ್ಷಕ ಶೇಖರ ಶೆಟ್ಟಿಗಾರ್‌ ಮಾರ್ಗದರ್ಶನ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ್‌ ಮರಕಾಲ ಸಾೖಬರಕಟ್ಟೆ ಅವರ ನಿರ್ದೇಶನದಲ್ಲಿ ಎಲ್ಲ ಶಿಕ್ಷಕರ ಸಹಯೋಗದೊಂದಿಗೆ ಗೂಗಲ್‌ ಅರ್ಥ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳ ಊರು, ಶಾಲೆಯ ಪರಿಸರವನ್ನು ತೋರಿಸಲು ಗೂಗಲ್‌ ಅರ್ಥನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ.

ವೀಡಿಯೋದಲ್ಲಿ ಐವರು ವಿದ್ಯಾರ್ಥಿನಿಯರು, ಇಬ್ಬರು ವಿದ್ಯಾರ್ಥಿಗಳು ವೀಕ್ಷಕರಿಗೆ ಅರ್ಜಿ ಸಲ್ಲಿಸಲು ಪ್ರೇರಣೆಯ ಮಾತುಗಳನ್ನಾಡಿದ್ದಾರೆ.

Advertisement

ಅತ್ಯಂತ ಗ್ರಾಮೀಣ ಪ್ರದೇಶದ ಈ ಶಾಲೆಯ ಶಿಕ್ಷಕರು ಮತ್ತು ಮಕ್ಕಳ ಈ ಕಾರ್ಯವನ್ನು ದಿಲ್ಲಿಯ ಎಂಎಚ್‌ಆರ್‌ಡಿ ಶಿಕ್ಷಣ ವಿಭಾಗದ ನಿರ್ದೇಶಕರು ಶ್ಲಾಘಿಸಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಇಲಾಖಾ ಧಿಕಾರಿಗಳು, ಪೋಷಕರು, ಚಾರಮಕ್ಕಿ ನಾರಾಯಣ ಶೆಟ್ಟಿ ಸಂಸ್ಥೆಯವರು, ಹಳೆ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನ ನಿಪುಣರ ಮುಕ್ತ ಕಂಠದ ಪ್ರಶಂಸೆಗೂ ಪಾತ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next