Advertisement

ಭಾಗ್ಯಗಳ ಯೋಜನೆಗೆ ಕೇಂದ್ರದ ಹಣ

03:19 PM Jul 05, 2017 | Team Udayavani |

ಚನ್ನಗಿರಿ: ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಹಲವು ಭಾಗ್ಯಗಳ ಯೋಜನೆಗೆ ಶೇ.90 ಹಣ ಕೇಂದ್ರದಿಂದ ಬರುತ್ತದೆ. ಆದರೆ ಭಾಗ್ಯಗಳ ಯೋಜನೆ ನಮ್ಮ ಸರ್ಕಾರದ್ದೆ ಎಂದು ರಾಜ್ಯ ಸರ್ಕಾರ ಬಿಂಬಿಸುತ್ತಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

Advertisement

ಪಟ್ಟಣದ ರುಕ್ಕುಮಾಯಿ ಕಲ್ಯಾಣ ಮಂಟಪದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅನಿಲ ಸಂಪರ್ಕ ಮೇಳ
ಹಾಗೂ ಸುರಕ್ಷತಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಜನತೆ ಯಾವ ಸರ್ಕಾರ ಅನುದಾನ ನೀಡುತ್ತಿದೆ ಎಂದು ಮನಗಾಣಬೇಕು. ರೈತರು ಬ್ಯಾಂಕ್‌ಗಳಲ್ಲಿ ತಾವು ಬೆಳೆದ ಬೆಳೆಗಳಿಗೆ ಬೆಳೆವಿಮೆ ಮಾಡಿಸಿಕೊಳ್ಳಬೇಕು. ಇದು ಮುಂದಿನ ದಿನಗಳಲ್ಲಿ ಫಲಕಾರಿ ಆಗುತ್ತದೆ. ಕೇಂದ್ರ  ಸರ್ಕಾರ ಅನೇಕ ಯೋಜನೆಗಳು ಜನಪರವಾಗಿ ಇದ್ದು, ಇದನ್ನು ಜನತೆ ಬಳಕೆ ಮಾಡಿಕೊಳ್ಳಬೇಕು ಎಂದರು. 

ಪ್ರಧಾನಮಂತ್ರಿಗಳು ಜಿಎಸ್‌ಟಿ ಜಾರಿಗೆ ತರುವುದರ ಮೂಲಕ ದೇಶದಲ್ಲಿ ಅರ್ಥ ಕ್ರಾಂತಿಯನ್ನೇ ಮಾಡುತ್ತಿದ್ದಾರೆ. ಮೂರು ವರ್ಷದ ಆಡಳಿತದಲ್ಲಿ ಸ್ವತಂತ್ರಪೂರ್ವದಲ್ಲಿ ಯಾವೊಬ್ಬ ಪ್ರಧಾನ ಮಂತ್ರಿಗಳು ಮಾಡಿರದ ಕೆಲಸಗಳನ್ನು ಮೋದಿಜೀ ಮಾಡುತ್ತಿದ್ದಾರೆ. ದೇಶದಲ್ಲಿ ಪ್ರತಿಯೊಬ್ಬ ಬಿಪಿಎಲ್‌ ಕಾಡ್‌ ìದಾರರಿಗೆ ಮುಂದಿನ ದಿನಗಳಲ್ಲಿ ಗ್ಯಾಸ್‌
ನೀಡುವ ಚಿಂತನೆಯಲ್ಲಿ ಕೇಂದ್ರ ಸರ್ಕಾರ ಆಲೋಚನೆ ನಡೆಸಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಜಿಲ್ಲೆಯಲ್ಲಿ 11500 ಫಲಾನುಭವಿಗಳು ಆಗಿದ್ದು ತಾಲೂಕಿನಲ್ಲಿ 1470 ಫಲಾನುಭವಿಗಳ ಆಯ್ಕೆ ನಡೆದಿದೆ. ಒಟ್ಟು ಈ ಯೋಜನೆಗೆ 8 ಸಾವಿರ ಕೋಟಿ ಹಣ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ ಎಂದರು.

ತಾಪಂ ಅಧ್ಯಕ್ಷೆ ಸುಜಾತ ಬಸವರಾಜ್‌ ಮಾತನಾಡಿ, ಕೇಂದ್ರ ಸರ್ಕಾರದಿಂದ ರಾಜ್ಯದಲ್ಲಿ ಸಾಕಷ್ಟು ಯೋಜನೆಗಳು
ಜಾರಿಯಲ್ಲಿವೆ. ಅವುಗಳ ಬಗ್ಗೆ ತಿಳಿಸುವಂತಹ ನಿಟ್ಟಿನಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು. ಮುಂಬರುವಂತಹ
ಚುನಾವಣೆಯಲ್ಲಿ ಪಕ್ಷವನ್ನು ಆಡಳಿತಕ್ಕೆ ತರುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು. ಈಗಾಗಲೇ ತಾಲೂಕಿನಲ್ಲಿ
ಬಿಜೆಪಿ ಆಡಳಿತದಲ್ಲಿ ನಡೆದಿರುವಂತಹ ಕಾಮಗಾರಿಗಳು ಮಾತ್ರ ಜನತೆ ನೋಡುತ್ತಿದ್ದಾರೆ. ಪಟ್ಟಣದಲ್ಲಿ ಅಭಿವೃದ್ಧಿ
ಎಂಬುದು ಮರಿಚೀಕೆಯಾಗಿರುವುದು ಕಾಣಬಹುದು. ಆದ್ದರಿಂದ ಕಾರ್ಯಕರ್ತರು ಬಿಜೆಪಿಯ ಸಾಧನೆ ಬಗ್ಗೆ ಮನೆ-ಮನೆಗೂ ತಲುಪಿಸಿ ಸಂಘಟನೆ ಮಾಡಬೇಕು ಎಂದರು. 

ಶಾಸಕ ಮಾಡಾಳು ವಿರೂಪಾಕ್ಷಪ್ಪ, ಜಿಪಂ ಸದಸ್ಯರಾದ ಸಾಕಮ್ಮ, ಯಶೋಧಮ್ಮ, ಮಂಜುಳಾ, ಲೋಕೇಶಪ್ಪ, ಪುರಸಭೆ ಉಪಾಧ್ಯಕ್ಷೆ ಸುನಿತಾ ಗಣೇಶ್‌, ಮಾಲತೇಶ ಮತ್ತಿತರರು ಹಾಜರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next