Advertisement

ರೈತರ ಅಭಿವೃದ್ಧಿಗೆ ಕೇಂದ್ರ ಬದ್ಧ :ಉತ್ತರಾಖಂಡ ರೈತನ ಪತ್ರಕ್ಕೆ ಪ್ರಧಾನಿ ಮೋದಿ ಪ್ರತ್ಯುತ್ತರ

07:48 PM Mar 18, 2021 | Team Udayavani |

ನವದೆಹಲಿ: “ರೈತ ಬೆಳೆದ ಧಾನ್ಯಗಳು, ಹೊಲದಿಂದ ಮಾರುಕಟ್ಟೆಯವರೆಗೆ ಸರಾಗವಾಗಿ ತಲುಪುವಲ್ಲಿ ಅಡ್ಡವಾಗಿರುವ ಎಲ್ಲಾ ಅಡಚಣೆಗಳನ್ನು ನಿವಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

Advertisement

ಉತ್ತರಾಖಂಡದ ನೈನಿತಾಲ್‌ ನಿವಾಸಿ ಖೀಮಾನಂದ್‌ ಪಾಂಡೆ ಎಂಬ ರೈತ, ಪ್ರಧಾನ ಮಂತ್ರಿ ಫ‌ಸಲ್‌ ಭಿಮಾ ಯೋಜನೆ (ಪಿಎಂಎಫ್ಬಿವೈ) ಐದು ವರ್ಷಗಳನ್ನು ಪೂರೈಸಿದ್ದಕ್ಕೆ ಪ್ರಧಾನಿಯವರನ್ನು ಅಭಿನಂದಿಸಿ ಪತ್ರವೊಂದನ್ನು ಬರೆದಿದ್ದರು. ಅದಕ್ಕೆ ಉತ್ತರಿಸಿರುವ ಪ್ರಧಾನಿ “ಪಿಎಂಎಫ್ಬಿವೈ ಯೋಜನೆಯು ಶ್ರಮಜೀವಿಗಳಾದ ರೈತರಿಗೆ ಆರ್ಥಿಕ ಭದ್ರತೆಯನ್ನು ಕೊಡುತ್ತದೆ. ಜೊತೆಗೆ, ಹವಾಮಾನ, ನೈಸರ್ಗಿಕ ವಿಕೋಪಗಳಿಂದ ಆಗುವ ನಷ್ಟಗಳ ಹೊರೆಯನ್ನು ಕಡಿಮೆ ಮಾಡುತ್ತದೆ. ಕೋಟ್ಯಂತರ ರೈತರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ’ ಎಂದಿದ್ದಾರೆ.

ನಮ್ಮ ಸರ್ಕಾರಕ್ಕಿರುವ ರೈತರ ಪರ ಕಾಳಜಿಯನ್ನು ಪಿಎಂಎಫ್ಬಿವೈ ಯೋಜನೆ ತೋರಿಸಿಕೊಟ್ಟಿದೆ. ಇಳುವರಿ ಖಾತ್ರಿ ಹಾಗೂ ಅಭಿವೃದ್ಧಿ ಖಾತ್ರಿಯನ್ನು ಈ ಯೋಜನೆ ಒಳಗೊಂಡಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ :ಕೆಪಿಎಸ್‌ಸಿ ಪರೀಕ್ಷಾ ವಿಧಾನಗಳಲ್ಲಿ ಬದಲಾವಣೆ ತರಲು ಚಿಂತನೆ : ಸಚಿವ ಬೊಮ್ಮಾಯಿ

Advertisement

Udayavani is now on Telegram. Click here to join our channel and stay updated with the latest news.

Next