Advertisement
ಧನುಷ್ಕೋಡಿ ಯೋಜನೆಧನುಷ್ಕೋಡಿಯ ರೈಲು ನಿಲ್ದಾಣ 1964ರಲ್ಲಿ ಸಂಭವಿಸಿದ್ದ ಚಂಡಮಾರುತದಲ್ಲಿ ಹಾನಿಗೀಡಾಗಿತ್ತು. ಆಗಿನಿಂದ ಅದರ ಉಪಯೋಗವಿರಲಿಲ್ಲ. ನೂತನ ಪ್ರಸ್ತಾವನೆಯಲ್ಲಿ ಆ ನಿಲ್ದಾಣದ ಮರುನಿರ್ಮಾಣದ ಜತೆಗೆ, ರಾಮೇಶ್ವರಂ – ಧನುಷ್ಕೋಡಿ ನಡುವೆ ಹೊಸ ರೈಲು ಮಾರ್ಗ ನಿರ್ಮಾಣವಾಗಲಿದೆ. ಈ ಮಾರ್ಗವನ್ನು ಮುಂದೆ ಭಾರತ- ಶ್ರೀಲಂಕಾ ನಡುವೆ ಸಂಪರ್ಕ ಮಾರ್ಗವಾಗಿ ವಿಸ್ತರಿಸುವ ಯೋಚನೆಯೂ ಇದೆ. ಯೋಜನೆ ಪೂರ್ಣಗೊಂಡ ಬಳಿಕ, ರಾಮೇಶ್ವರಂನಿಂದ ಬಸ್ಸು, ಖಾಸಗಿ ವಾಹನ ಮೂಲಕ ಧನುಷ್ಕೋಡಿಗೆ ಬರಬೇಕಿದ್ದ ಯಾತ್ರಿಗಳಿಗೆ ರೈಲಿನಲ್ಲಿ ಆಗಮಿಸುವ ಅನುಕೂಲ ಸಿಗಲಿದೆ.
ಪಂಬನ್ ಬದಲಿ ಸೇತುವೆ
ಇತ್ತೀಚೆಗಷ್ಟೇ ರೈಲು ಸಂಚಾರ ಸ್ಥಗಿತಗೊಂಡಿರುವ ಪಂಬನ್ ಸೇತುವೆಯ ಪಕ್ಕದಲ್ಲೇ ಮತ್ತೂಂದು ರೈಲು ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ. 2.06 ಕಿ.ಮೀ. ಉದ್ದದ ಈ ಸೇತುವೆಯನ್ನು ಅಂದಾಜು 249 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗುತ್ತದೆ. ನೂತನ ಪಂಬನ್ ಸೇತುವೆ ದೇಶದ ಮೊಟ್ಟಮೊದಲ ವಿದ್ಯುತ್ ಆಧಾರಿತ ಸ್ವಯಂ ಚಾಲಿತ ವರ್ಟಿಕಲ್ ಲಿಫ್ಟ್ ಎಂಬ ಹೆಗ್ಗಳಿಕೆ ಪಡೆಯಲಿದೆ.