Advertisement

ಬಹು ನಿರೀಕ್ಷಿತ ಕೇಂದ್ರ ಬಜೆಟ್ ಫೆ.1 ಕ್ಕೆ ಮಂಡನೆ ಸಾಧ್ಯತೆ

06:40 PM Jan 14, 2022 | Team Udayavani |

ನವದೆಹಲಿ: ಕೋವಿಡ್ ಮೂರನೇ ಅಲೆ, ಆರ್ಥಿಕ ಹಿಂಜರಿತದ ಜತೆಗೆ ಸಾಲಸಾಲು ಚುನಾವಣೆ ಇದಿರಾಗುತ್ತಿರುವ ಹೊತ್ತಿನಲ್ಲೇ ಕೇಂದ್ರ ಸರಕಾರ ಬಜೆಟ್ ಸಿದ್ಧತೆ ಆರಂಭಿಸಿದ್ದು, ಫೆಬ್ರವರಿ 1 ರಂದು ಮೋದಿ ಸರಕಾರದ ಬಹು ನಿರೀಕ್ಷಿತ ಆಯವ್ಯವ ಮಂಡನೆಯಾಗುವ ಸಾಧ್ಯತೆ ಇದೆ.

Advertisement

ಕೇಂದ್ರ ಸಂಸದೀಯ ವ್ಯವಹಾರಗಳ ಇಲಾಖೆ ಸಂಪುಟ ಉಪಸಮಿತಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ರಾಷ್ಟ್ರೀಯ ಮಾಧ್ಯಮಗಳು ಫೆ.1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ ಎಂದು ಹೇಳಿವೆ. ಹೀಗಾಗಿ ಜ.20 ಅಥವಾ 21  ರಂದು ಸಂಸತ್ ಬಜೆಟ್ ಅಧಿವೇಶನ ಪ್ರಾರಂಭವಾಗುವ ನಿರೀಕ್ಷೆ ಇದೆ.

ಹಲವು ಆಯಾಮಗಳಿಂದ ಕೇಂದ್ರ ಬಜೆಟ್ ಈ ಭಾರಿ ಮಹತ್ವ ಪಡೆದುಕೊಂಡಿದೆ. ಕಳೆದ ಎರಡು ವರ್ಷಗಳಿಂದ ರಾಷ್ಟ್ರ ತೀವ್ರ ಆರ್ಥಿಕ ಹಿಂಜರಿತಕ್ಕೆ ಸಾಕ್ಷಿಯಾಗಿದೆ. ಉದ್ಯೋಗ ಕಡಿತ, ಬೆಲೆ ಏರಿಕೆ, ಇಂಧನ ದರಗಳ ಏರಿಳಿತಗಳಿಂದ ದೇಶಾದ್ಯಂತ ಹಣದುಬ್ಬರದ ದರ ಏರಿಕೆಯಾಗಿದೆ. ಜತೆಗೆ ಉತ್ತರ ಪ್ರದೇಶ ಸೇರಿ ಪಂಚರಾಜ್ಯಗಳಿಗೆ ಬಜೆಟ್ ಮಂಡನೆಯ ಜತೆ ಜತೆಗೆ ಚುನಾವಣೆ ನಡೆಯಲಿದೆ. ಕರ್ನಾಟಕ ಸೇರಿದಂತೆ ಇನ್ನು ಕೆಲ ರಾಜ್ಯಗಳಿಗೆ ಮುಂದಿನ ವರ್ಷ ಚುನಾವಣೆ ನಡೆಯುತ್ತದೆ. ಹೀಗಾಗಿ ಮುಂದಿನ ಲೋಕಸಭೆ ಹಾಗೂ ಇನ್ನಿತರ ರಾಜ್ಯಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನಪ್ರಿಯ ಬಜೆಟ್ ನೀಡುವ ಹೊಣೆಗಾರಿಕೆ ಕೇಂದ್ರ ಸರಕಾರದ ಮೇಲಿದೆ.

ಈ ಎಲ್ಲ ಕಾರಣಗಳಿಂದಾಗಿ ಬಜೆಟ್ ಸಿದ್ದತೆಗೆ ತೊಡಗಿರುವ ಕೇಂದ್ರ ಹಣಕಾಸು ಇಲಾಖೆಗೆ ದೇಶವ್ಯಾಪಿ ಒಪ್ಪಿಗೆಯಾಗುವ ಬಜೆಟ್ ತಯಾರಿಸುವುದು ಹಗ್ಗದ ಮೇಲಿನ ನಡಿಗೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next