Advertisement

ಚಿಕ್ಕಮಗಳೂರು : 400 ಕೋಟಿ ರೂ. ಬಿಡುಗಡೆ ನಿರೀಕ್ಷೆ

02:42 AM Jan 21, 2021 | Team Udayavani |

ಸಿಎಂ ಬಿ.ಎಸ್‌.ಯಡಿಯೂರಪ್ಪ ಮತ್ತೂಂದು ಬಜೆಟ್‌ಗೆ ಅಣಿಯಾಗುತ್ತಿದ್ದಾರೆ. ಕೊರೊನಾದಿಂದಾಗಿ ಆರ್ಥಿಕತೆ ಹಳಿ ತಪ್ಪಿದ್ದು, ಅತ್ಯಂತ ಎಚ್ಚರಿಕೆಯಿಂದ ಆದ್ಯತಾ ವಲಯಗಳನ್ನು ಗುರುತಿಸಿ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಆರ್ಥಿಕ ಸ್ಥಿತಿ ಏನು? ನಿರೀಕ್ಷೆಗಳೇನು? ಎಂಬ ಬಗ್ಗೆ ಬೆಳಕು ಚೆಲ್ಲುವ ಸರಣಿ ಇಂದಿನಿಂದ.

Advertisement

ಪ್ರಾಕೃತಿಕವಾಗಿ ಮಲೆನಾಡು ಮತ್ತು ಬಯಲುಸೀಮೆಯಾಗಿ  ಪ್ರವಾಸೋದ್ಯಮಕ್ಕೆ ಜನಪ್ರಿಯತೆ ಗಳಿಸಿರುವ ಚಿಕ್ಕಮಗಳೂರು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಈ ಬಾರಿಯ ಬಜೆಟ್‌ನಲ್ಲಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ನಿರೀಕ್ಷೆಯನ್ನು ಜನತೆ ಹೊಂದಿದ್ದಾರೆ.

1,200 ಕೋಟಿ ರೂ. ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಯಿಂದ ತರೀಕೆರೆ, ಕಡೂರು, ಚಿಕ್ಕಮಗಳೂರು ತಾಲೂಕಿನ 197 ಕೆರೆಗಳಿಗೆ ನೀರು ತುಂಬಿಸುವ ಗೊಂದಿ ಯೋಜನೆ. ಸಂಪುಟ ಅನುಮೋದನೆ ದೊರೆತಿದ್ದು  ಬಜೆಟ್‌ನಲ್ಲಿ ಮೊದಲ ಹಂತದ 400 ಕೋಟಿ ರೂ. ಬಿಡುಗಡೆ ನಿರೀಕ್ಷೆ .

ತಲಾ ಆದಾಯ : 2,24,312 ರೂಪಾಯಿ

ಐದು ಎಕರೆ ಮೇಲ್ಪಟ್ಟ ಒತ್ತುವರಿ ಭೂಮಿಯನ್ನು ದೀರ್ಘಾವಧಿ ಗುತ್ತಿಗೆ ನೀಡುವ ವಿಚಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಚರ್ಚಿಸಲಾಗಿತ್ತು. ಆದರೆ ಅನುಷ್ಠಾನಕ್ಕೆ ಬಂದಿರ ಲಿಲ್ಲ, ಈ ಬಜೆಟ್‌ನಲ್ಲಿ ಅನುಷ್ಠಾನಕ್ಕೆ ಬರಬಹುದೆಂಬ ನಿರೀಕ್ಷೆ ಜನರಲ್ಲಿದೆ.

Advertisement

ಕಳೆದ  ಬಜೆಟ್‌ನಲ್ಲಿ ಯೋಜನಾ ವೆಚ್ಚ : 1.98%

ಪ್ರತ್ಯೇಕ ಹಾಲು ಉತ್ಪಾದಕರ ಒಕ್ಕೂಟ ಸ್ಥಾಪನೆ ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದು, ಈ ಬಜೆಟ್‌ ನಲ್ಲಿ ರಾಜ್ಯ ಸರಕಾರ ಕಾಫಿನಾಡಿಗೆ ಪ್ರತ್ಯೇಕ ಹಾಲು ಒಕ್ಕೂಟ ನೀಡುವ ನಿರೀಕ್ಷೆಯನ್ನು ಜನರು ಹೊಂದಿದ್ದಾರೆ.

ಸಚಿವರ  ಸಂಖ್ಯೆ : 00

ಜಿಲ್ಲೆಯಲ್ಲಿ ಸರಕಾರಿ ಇಂಜಿನಿಯರಿಂಗ್‌ ಕಾಲೇಜು ನಿರ್ಮಾಣ ಬೇಡಿಕೆ ಬಹಳ ವರ್ಷಗಳಿಂದ ಕೇಳಿ ಬರುತ್ತಿದ್ದು ಈ ಬಜೆಟ್‌ನಲ್ಲಿ ಸಿಗುವ ನಿರೀಕ್ಷೆ ಜನರಲ್ಲಿದೆ.

ಮಾನವ  ಅಭಿವೃದ್ಧಿ  ಸೂಚ್ಯಂಕ  ರ್‍ಯಾಂಕ್‌ ; 8

ಜಿಲ್ಲೆಯ ತರೀಕೆರೆ, ಕಡೂರು, ಚಿಕ್ಕಮಗಳೂರು ತಾಲೂಕಿನ ಲಖ್ಯಾ ಹೋಬಳಿಯ 780 ಗ್ರಾಮಗಳಿಗೆ ಭದ್ರಾ ಜಲಾಶಯದಿಂದ 630 ಕೋಟಿ ರೂ. ವೆಚ್ಚದಲ್ಲಿ ಜಲಧಾರೆ ಯೋಜನೆ ಅನುಷ್ಠಾನದ ನಿರೀಕ್ಷೆಯಿದೆ. ಅಮೃತ್‌ ಮಹಲ್‌ ಕಾವಲ್‌ ಜಾನುವಾರುಗಳ ರಕ್ಷಣೆಗೆ ಅನುದಾನ ನಿರೀಕ್ಷೆ.

Advertisement

Udayavani is now on Telegram. Click here to join our channel and stay updated with the latest news.

Next