Advertisement

ವೈದ್ಯಕೀಯ ಪರೀಕ್ಷಾ ಶುಲ್ಕಕ್ಕೆ ಕೇಂದ್ರ ಬ್ರೇಕ್?

08:32 AM May 20, 2018 | |

ಹೊಸದಿಲ್ಲಿ: ಅಗತ್ಯ ಔಷಧಗಳ ದರಗಳ ಮೇಲೆ ನಿಯಂತ್ರಣ ಹೇರಿರುವ ಕೇಂದ್ರ ಸರ್ಕಾರ ಮತ್ತೂಂದು ಕ್ರಮ ಕೈಗೊಳ್ಳಲು ಮುಂದಾಗಿದೆ. ದೇಶದಲ್ಲಿನ ಪ್ರಯೋಗಾಲಯಗಳಲ್ಲಿ ಅಗತ್ಯವಾಗಿರುವ ವೈದ್ಯಕೀಯ ಪರೀಕ್ಷೆಗಳ ಮೇಲಿನ ಶುಲ್ಕಕ್ಕೆ ಮಿತಿ ಹೇರುವ ನಿಯಮ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ಬಗ್ಗೆ “ಮನಿಕಂಟ್ರೋಲ್‌.ಕಾಂ’ ವರದಿ ಮಾಡಿದ್ದು, ನೀತಿ ಆಯೋಗದ ಜತೆಗೆ ಈ ಕುರಿತು ಸಮಗ್ರವಾಗಿ ಚರ್ಚೆ ನಡೆಸಿದ ಬಳಿಕ ಅದನ್ನು ಜಾರಿ ಮಾಡುವ ಇರಾದೆ ಹೊಂದಿದೆ.

Advertisement

ವಿಶ್ವ ಆರೋಗ್ಯ ಸಂಸ್ಥೆ ಪಟ್ಟಿ ಮಾಡಿರುವ 113 ವೈದ್ಯಕೀಯ ಪರೀಕ್ಷೆಗಳ ಪೈಕಿ 58ನ್ನು ಸಾಮಾನ್ಯವಾಗಿ ವೈದ್ಯರು ಸೂಚಿಸುವ ಪಟ್ಟಿ ಎಂದು ಪರಿಗಣಿಸಲಾಗಿದೆ. ಅದಕ್ಕೆ ಪ್ರಯೋಗಾಲಯಗಳು ಮಿತಿಗಿಂತ ಹೆಚ್ಚು ಶುಲ್ಕ ವಿಧಿಸದಂತೆ ಮಾಡುವ ಪ್ರಸ್ತಾಪ ಇದಾಗಿದೆ. ಇತರ 55 ಗಂಭೀರ ಕಾಯಿಲೆಗಳನ್ನು ಗುರುತಿಸುವ ತಪಾಸಣೆಯಾಗಿರುತ್ತದೆ. ಸರ್ಕಾರದ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ನೀಡಿರುವ ಡಾ.ಲಾಲ್‌ ಪ್ಯಾತ್‌ ಲಾಬ್ಸ್ನ ಸಿಇಒ ಓಮ್‌ ಮನ್‌ಚಂದ, “ನಿಯಮ ಜಾರಿಗೆ ಮುನ್ನ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next