ಬೆಂಗಳೂರು: “ಪ್ರಧಾನಿಯವರ ಭಾಷೆಯಲ್ಲೇ ಹೇಳುವುದಾದರೆ ನಾನೊಬ್ಬ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿಯಾಗಿ ಕರ್ನಾಟಕದಲ್ಲಿ ಹಲವಾರು ಅಭಿವೃದಿಟಛಿಪರ ತೀರ್ಮಾನ ಕೈಗೊಂಡು ದೊಡ್ಡಮಟ್ಟದ ಸಾಧನೆ ಮಾಡಿದ್ದೇನೆ. ಅವರಿಂದ ನಾನು ಹೇಳಿಸಿಕೊಳ್ಳಬೇಕಿಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೋದಿಗೆ ತಿರುಗೇಟು ನೀಡಿದ್ದಾರೆ.ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಿ ನೀಡುತ್ತಿರುವ ಹೇಳಿಕೆಯನ್ನು ನೋಡಿದರೆ ಬಹುಶಃ ಜನ ಎಚ್ಚರಿಕೆ ವಹಿಸಬೇಕು ಎನಿಸುತ್ತಿದೆ. ಈ ರೀತಿ ಅತ್ಯಂತ ಸುಳ್ಳುಗಳನ್ನು ಹೇಳುವ ಮತ್ತೂಬ್ಬ ಪ್ರಧಾನಿ ದೇಶದಲ್ಲಿ ಬರಲು ಸಾಧ್ಯವಿಲ್ಲ ಎಂದು ಕುಟುಕಿದರು.
ಕರ್ನಾಟಕದಲ್ಲಿ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿಗಳಾಗಿ ದ್ದಾರೆಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಗೃಹ ಕಚೇರಿ “ಕೃಷ್ಣಾ’ದಲ್ಲಿ ಬುಧವಾರ ಪ್ರತಿಕ್ರಿಯಿಸಿದ ಕುಮಾರಸ್ವಾಮಿ,”ನನ್ನ ಆಡಳಿತದಲ್ಲಿ ಹಲವು ಅಭಿವೃದಿಟಛಿ ಪರ ತೀರ್ಮಾನ ಕೈಗೊಂಡಿದ್ದು, ಆ ಬಗ್ಗೆ ಪ್ರಧಾನಿಯವರಿಗೂ ಮಾಹಿತಿ ಹೋಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲೂ ಇಷ್ಟು ದೊಡ್ಡಮಟ್ಟದ ಸಾಧನೆ ಮಾಡಿದ್ದೇನೆ. ನಾನು ಅವರಿಂದ ಹೇಳಿಸಿಕೊಳ್ಳಬೇಕಿಲ್ಲ. ಅವರಿಗಿಂತಲೂ ದೊಡ್ಡಮಟ್ಟದಲ್ಲಿ ನಾಡಿನ ರಕ್ಷಣೆ ಮಾಡಿಕೊಳ್ಳುವಲ್ಲಿ ನನ್ನ ಕೆಲಸ ನಿರ್ವಹಿಸುತ್ತಿದ್ದೇನೆ’ ಎಂದು ಹೇಳಿದರು. ಪದೇಪದೆ ಕರ್ನಾಟಕದ ಮುಖ್ಯಮಂತ್ರಿಯನ್ನೇ ಗುರಿಯಾಗಿಸಿ ಪ್ರಧಾನಿ ಟೀಕಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರಿಗೆ ಕರ್ನಾಟಕ ರಾಜ್ಯದ ಬಗ್ಗೆ ಭಯವಿದೆ ಎಂದು ಹೇಳಿದರು.
ಕರ್ನಾಟಕ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ ಎಂಬ ಪ್ರಧಾನಿ ಟೀಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ಇಂದು ಯಾರಿಗಾದರೂ ಮಾಹಿತಿ ಕೊರತೆಯಿದೆ ಎಂದರೆ ಬಹುಶಃ ಅದು ಪ್ರಧಾನಿ ನರೇಂದ್ರ ಮೋದಿಯವರಿಗೆ ಎಂಬುದು ನನ್ನ ಅಭಿಪ್ರಾಯ. ರಾಜ್ಯದಲ್ಲಿ ಈಗಾಗಲೇ ಸಹಕಾರಿ ಬ್ಯಾಂಕ್‌ಗಳಲ್ಲಿ 7 ಲಕ್ಷ ರೈತರ ಸಾಲ ಹಾಗೂ ವಾಣಿಜ್ಯ ಬ್ಯಾಂಕ್‌ಗಳಲ್ಲಿ 6.40 ಲಕ್ಷ ರೈತರ ಸಾಲ ಮನ್ನಾಗೆ ಪ್ರಸಕ್ತ ವರ್ಷದಲ್ಲಿ 11,170 ಕೋಟಿ ರೂ.ಬಿಡುಗಡೆ ಮಾಡಿದ್ದೇನೆ. ಪ್ರಧಾನಿಯವರು ರೈತರ ಸಾಲಮನ್ನಾ ಬಗ್ಗೆ ಹುಡುಗಾಟಿಕೆ ಮಾತುಗಳನ್ನಾ ಡುತ್ತಿದ್ದು, ಅವರಿಗೆ ಮಾಹಿತಿ ಇದೆಯೋ, ಇಲ್ಲವೋ ಗೊತ್ತಿಲ್ಲ. ಮೋದಿಯವರಿಗೆ ಮಾಹಿತಿ ಇಲ್ಲದಿದ್ದರೆ, ನಮ್ಮ ಅಧಿಕಾರಿಗಳನ್ನೇ ಕಳುಹಿಸಿ ಮಾಹಿತಿ ಕೊಡಿಸುತ್ತೇನೆ’ ಎಂದು ಟಾಂಗ್ ನೀಡಿದರು. ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ ಫಲಾನು ಭವಿಗಳ ಮಾಹಿತಿಯನ್ನು ರಾಜ್ಯ ಸರ್ಕಾರ ನೀಡು ತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕೇಂದ್ರ ಸರ್ಕಾರ ಕೇಳಿದ ಮಾಹಿತಿ ನೀಡಿದ್ದೇವೆ. ಆದರೆ, ಕೇಂದ್ರದ ಬಳಿ ರೈತರಿಗೆ ನೀಡಲು ಹಣವಿಲ್ಲ. ನರೇಗಾ ಯೋಜನೆ ಹಣವನ್ನು ರೈತರಿಗೆ ನೀಡಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ನರೇಗಾದಿಂದ ಹಣ ಬಂದಿಲ್ಲ
ಕರ್ನಾಟಕಕ್ಕೆ ನರೇಗಾದಡಿ 2,000 ಕೋಟಿ ರೂಗಳನ್ನು ಕೇಂದ್ರ ಸರ್ಕಾರ ನೀಡಬೇಕಿದೆ. ಆದರೆ, ಈವರೆಗೆ ಹಣ ಬಿಡುಗಡೆಮಾಡದ ಕಾ ರಣ ನಾನೇ ರಾಜ್ಯ ಸರ್ಕಾರದಿಂದ ರೈತರಿಗೆ ಕೂಲಿ ಪಾವತಿಸಲು ಹಣ ನೀಡುತ್ತಿದ್ದೇನೆ. ಮೋದಿಯವರಿಗೆ ನರೇಗಾ ಹಣ ನೀಡಲು ಸಾಧ್ಯವಾಗುತ್ತಿಲ್ಲ. ನರೇಗಾ ಹಣವನ್ನು ಡಿಬಿಟಿ ಮೂಲಕ ರೈತರಿಗೆ ಕೊಡಲು ಹೊರಟಿರುವುದು ಪ್ರಧಾನಿ ಕಾರ್ಯಕ್ರಮ. ಆದರೆ, ಕುಮಾರಸ್ವಾಮಿ ಕಾರ್ಯಕ್ರಮಗಳು ನರೇಂದ್ರ ಮೋದಿ ತರದ ಕಾರ್ಯಕ್ರಮಗಳಲ್ಲ. ಮೋದಿ ಸರ್ಕಾರ ಆರ್ಥಿಕ ದಿವಾಳಿ ಸ್ಥಿತಿಗೆ ತಲುಪಿದ್ದು, ನನ್ನ ರಾಜ್ಯ ಆ ಸ್ಥಿತಿಯಲ್ಲಿಲ್ಲ ಎಂದು ತಿರುಗೇಟು ನೀಡಿದರು.