Advertisement

PM: ವಿದ್ಯಾಲಕ್ಷ್ಮೀ ಯೋಜನೆಗೆ ಕೇಂದ್ರ ಸಮ್ಮತಿ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಾಲ!

11:57 PM Nov 06, 2024 | Team Udayavani |

ಹೊಸದಿಲ್ಲಿ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 10 ಲಕ್ಷ ರೂ. ವರೆಗೆ ಸಾಲ ಒದಗಿಸುವ ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಜಾರಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ಸೂಚಿಸಿದೆ. ಈ ಯೋಜನೆಗಾಗಿ 2024ರಿಂದ 2031ರ ವರೆಗೆ 3,600 ಕೋಟಿ ರೂ. ಹಣ ಮೀಸಲಿಡಲಾಗಿದೆ.

Advertisement

ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಹಣದ ಕೊರತೆಯಾಗಬಾರದು ಎನ್ನುವ ಕಾರಣಕ್ಕೆ ಈ ಯೋಜನೆ ಜಾರಿ ಮಾಡಲಾಗುತ್ತಿದೆ ಎಂದು ಕೇಂದ್ರ ವಾರ್ತಾ ಸಚಿವ ಅಶ್ವಿ‌ನಿ ವೈಷ್ಣವ್‌ ತಿಳಿಸಿದ್ದಾರೆ.

ಹೊಸ ಯೋಜನೆಯಡಿ ವಿದ್ಯಾರ್ಥಿಗಳಿಗೆ ಯಾವುದೇ ಅಡಮಾನ ಇಲ್ಲದೆ 10 ಲಕ್ಷ ರೂ. ವರೆಗೆ ಸಾಲ ನೀಡಲಾಗುತ್ತದೆ. ಇದು ಬಡ್ಡಿರಹಿತವಾಗಿದ್ದು, ಇದರೊಂದಿಗೆ ವಿದ್ಯಾರ್ಥಿಗಳ ಬೋಧನ ಶುಲ್ಕ ಸೇರಿದಂತೆ ಅವರು ಆಯ್ಕೆ ಮಾಡಿಕೊಂಡ ಕೋರ್ಸ್‌ ಗಳಿಗೆ ವ್ಯಯಿಸುವ ಇತರ ಖರ್ಚನ್ನು ಭರಿಸಲಾಗುತ್ತದೆ.

ಯಾರೆಲ್ಲ ಫ‌ಲಾನುಭವಿಗಳು
ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕದ ಚೌಕಟ್ಟಿನಲ್ಲಿ ರ್‍ಯಾಂಕ್‌ ಪಡೆದಿರುವ 100 ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ಮತ್ತು ಕೇಂದ್ರ ಸರಕಾರ ನಡೆಸುವ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೇರುವ ವಿದ್ಯಾರ್ಥಿಗಳು ಈ ಯೋಜನೆಯ ಫ‌ಲಾನುಭವಿಗಳಾಗಬಹುದು. ಅಲ್ಲದೇ ಪ್ರತೀ ವರ್ಷ ಈ ಯೋಜನೆಯನ್ನು ಅಪ್‌ಡೇಟ್‌ ಮಾಡಲಾಗುವುದು. ಸುಮಾರು 7 ಲಕ್ಷ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ನೆರವು ನೀಡಲು ಯೋಜಿಸಲಾಗಿದೆ.

ಯೋಜನೆಯ
ವಿಶೇಷತೆ
-ಉನ್ನತ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿಗೆ 10 ಲಕ್ಷ ರೂ. ಸಾಲ
-ಪಿಎಂ ವಿದ್ಯಾಲಕ್ಷ್ಮಿಗೆ 3,600 ಕೋಟಿ ರೂ. ಮೀಸಲು
-ಪ್ರತೀ ವರ್ಷ 1 ಲಕ್ಷ ವಿದ್ಯಾರ್ಥಿಗಳಿಗೆ ನೆರವು ಘೋಷಣೆ
-ಕುಟುಂಬದ ಆದಾಯ 8 ಲಕ್ಷ ಇದ್ದರೆ ಶೇ. 3 ಬಡ್ಡಿ ಸಬ್ಸಿಡಿ
-ಕುಟುಂಬದ ಆದಾಯ 4.5 ಲಕ್ಷ ಇದ್ದರೆ ಶೇ. 100 ಬಡ್ಡಿ ವಿನಾಯಿತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next