ನವದೆಹಲಿ: ಭಾರತದಲ್ಲಿ ಚೀನಾ ಪರ ಪ್ರಚಾರ ಮಾಡುತ್ತಿರುವ ಸುಮಾರು 2,500 ಸೋಶಿಯಲ್ ಮೀಡಿಯಾ ಅಕೌಂಟ್ ಗಳ ಮೇಲೆ ಕೇಂದ್ರದ ಏಜೆನ್ಸಿಗಳು ಕಣ್ಣಿಟ್ಟಿವೆ ಎಂದು ಭದ್ರತಾ ಮೂಲಗಳು ತಿಳಿಸಿದೆ.
ವರದಿಗಳ ಪ್ರಕಾರ ಫೇಸ್ ಬುಕ್, ಟ್ವಿಟ್ಟರ್ ಮತ್ತು ಯೂಟ್ಯೂಬ್ ಮೂಲಕ ಚೀನಾ ಪರವಾದ ನಿಲುವುಗಳನ್ನು ಕೆಲವರು ಹರಡುತ್ತಿದ್ದಾರೆ. ಗಮನಾರ್ಹ ಸಂಗತಿಯೆಂದರೇ ಹೀಗೆ ಚೀನಾ ಪರವಾದ ಪೋಸ್ಟ್ ಹಾಕುತ್ತಿರುವವರ ಖಾತೆಗಳ ಐಪಿ ಅಡ್ರೆಸ್ ಗಳು ಪಾಕಿಸ್ಥಾನ, ಹಾಂಗ್ ಕಾಂಗ್, ಯುಕೆ, ರಷ್ಯಾ ಹಾಗೂ ಚೀನಾ ದೇಶಗಳಲ್ಲಿ ಪತ್ತೆಯಾಗಿದೆ.
ಭಾರತ ಸರ್ಕಾರ ಕೂಡ ತನ್ನ ಪ್ರಜೆಗಳ ಖಾಸಗಿ ಮಾಹಿತಿಗಳು ಹಾಗೂ ಡೇಟಾಗಳು ಸೋರಿಕೆಯಾಗದಂತೆ ಕಠಿಣ ಕ್ರಮ ಅನುಸರಿಸಿದೆ. ಅದಾಗ್ಯೂ ಭಾರತೀಯ ಬಳಕೆದಾರರಿಗೆ ತಿಳಿಯದಂತೆ ಅವರ ಡೇಟಾಗಳನ್ನು ವಿದೇಶಿ ಮೂಲದ ಸಂಸ್ಥೆಗಳು ಹ್ಯಾಕ್ ಮಾಡುವ ಆತಂಕವಿದೆ. ಈ ಕುರಿತು ಸೈಬರ್ ಸೆಕ್ಯೂರಿಟಿ ಸಂಸ್ಥೆಗಳು ವಿವಿಧ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿವೆ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದ್ದಾರೆ.
ಚೀನಾ ಸೈನಿಕರು ಪಂಜಾಬಿ ಹಾಡುಗಳನ್ನು ಲೌಡ್ ಸ್ಪೀಕರ್ ಮೂಲಕ ಫಿಂಗರ್ 4 ಪಾಯಿಂಟ್ ನ ಎತ್ತರದ ಸ್ಥಳದಲ್ಲಿ ಬೀಡುಬಿಟ್ಟಿರುವ ಭಾರತೀಯ ಸೈನಿಕರಿಗೆ ಕೇಳಿಸುತ್ತಿದ್ದಾರೆ. ಇದು ಎದುರಾಳಿಗಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಮಣಿಸಲು ಎಲ್ಲಾ ರೀತಿಯ ತಂತ್ರ ಕುತಂತ್ರಗಳು ಎಂದು ತಿಳಿದುಬಂದಿದೆ. ಇದೇ ಮಾದರಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಭಾರತದಲ್ಲಿ ಚೀನಾ ಪರ ಪ್ರಚಾರ ಮಾಡಲಾಗುತ್ತಿದೆ ಎನ್ನಲಾಗಿದೆ.