Advertisement

BSNL ಪಿಂಚಣಿದಾರರ ಪರ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ ತೀರ್ಪು

10:56 PM Oct 08, 2023 | Team Udayavani |

ಮಂಗಳೂರು: ಕೇಂದ್ರ ಸರಕಾರದ ನಿಯಮದಂತೆ ಸರಕಾರಿ ನಿವೃತ್ತ ನೌಕರರಿಗೆ ಪ್ರತೀ 10 ವರ್ಷಕ್ಕೊಮ್ಮೆ ಪಿಂಚಣಿ ಪರಿಷ್ಕರಣೆಯಾಗುತ್ತದೆ. ಅದರಂತೆ ಬಿಎಸ್ಸೆನ್ನೆಲ್‌ ನಿವೃತ್ತರು 2017ರಿಂದ ಪಿಂಚಣಿ ನಿಷ್ಕರ್ಷೆಗೆ ಅರ್ಹರಾಗಿರುತ್ತಾರೆ. ಆದರೆ ಕೇಂದ್ರ ಸರಕಾರ ತನ್ನ ನಿವೃತ್ತರಿಗೆ 7ನೇ ವೇತನ ಆಯೋಗದ ಶಿಫಾರಸಿನಂತೆ ಪಿಂಚಣಿ ಪರಿಷ್ಕರಣೆ ಮಾಡಿದ್ದರೂ ಬಿಎಸ್ಸೆನ್ನೆಲ್‌ ನಿವೃತ್ತರಿಗೆ ಅದನ್ನು ಕೊಡಮಾಡದೆ ವಿಳಂಬ ನೀತಿ ಮತ್ತು ಸೌಲಭ್ಯದಿಂದ ವಂಚಿತರನ್ನಾಗುವಂತೆ ಮಾಡಿತ್ತು.

Advertisement

ಈ ಕುರಿತ ಮನವಿಗೆ ಕೇಂದ್ರ ಸ್ಪಂದಿಸದೇ ಇದ್ದ ಹಿನ್ನೆಲೆಯಲ್ಲಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ ಪಿಬಿ ಹೊಸ ದಿಲ್ಲಿ)ಯ ಪ್ರಧಾನ ಪೀಠಕ್ಕೆ ಪಿಂಚಣಿದಾರರ ಸಂಘ ಮೊರೆ ಹೋಗಿದ್ದು, ಸುದೀರ್ಘ‌ 3 ವರ್ಷಗಳ ವಿಚಾರಣೆ ಬಳಿಕ ಮಂಡಳಿ ನಿರ್ಣಯ ಪ್ರಕಟಿಸಿದೆ. ಅದರಂತೆ ಬಿಎಸ್ಸೆನ್ನೆಲ್‌ ಪಿಂಚಣಿದಾರರೂ ಕೇಂದ್ರ ಸರಕಾರಿ ಪಿಂಚಣಿದಾರರಿಗೆ ಸಲ್ಲಬೇಕಾದ ಎಲ್ಲ ಸವಲತ್ತುಗಳಿಗೆ ಅರ್ಹರು. ಈ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೇಂದ್ರ ಸರಕಾರ 2007ರ ಜ. 1ರಿಂದ ಬಿಎಸ್ಸೆನ್ನೆಲ್‌ ನಿವೃತ್ತರಿಗೆ ಆರನೇ ವೇತನ ಆಯೋಗದಂತೆ ಪಿಂಚಣಿಯನ್ನು ಪರಿಷ್ಕರಿಸಿತ್ತು. ಬಿಎಸ್ಸೆನ್ನೆಲ್‌ ಸೇವೆಯನ್ನು ಕೇಂದ್ರ ಸರಕಾರಿ ಸೇವೆಯಾಗಿ ಪರಿಗಣಿಸಲು ಕೇಂದ್ರ ಸರಕಾರ ಪಿಂಚಣಿ ದೇಣಿಗೆಯನ್ನು ನಿಗದಿಪಡಿಸಿ, ನೌಕರರ ವೇತನ ಶ್ರೇಣಿಯ ಗರಿಷ್ಠ ಮೊತ್ತದ ಮೇಲೆ ವಸೂಲು ಮಾಡಿದೆ. ಇದರ ಹೊರತಾಗಿ ಗರಿಷ್ಠ ಸೇವೆಯು 33 ವರ್ಷವಾಗಿದ್ದರೂ ಸರಕಾರ ನೌಕರರು ನಿವೃತ್ತರಾಗುವ ವರೆಗೆ ಅಂದರೆ 36-38 ವರ್ಷದ ವರೆಗೆ ಸೇರಿ ಸುಮಾರು 2,500 ಕೋ.ರೂ.ಗೂ ಮಿಕ್ಕಿ ದ ಮೊತ್ತವನ್ನು ಬಿಎಸ್ಸೆನ್ನೆಲ್‌ ಸಂಸ್ಥೆಯಿಂದ ಸಂಗ್ರಹ ಮಾಡಲಾಗಿದೆ ಎಂದು ಅಸೋಸಿಯೇಶನ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next