Advertisement
ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಬಂಧನ ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ನಡೆದ ಬೃಹತ್ ಪ್ರತಿಭಟನೆ ಸಭೆ ಉದ್ದೇಶಿಸಿ ಮಾತನಾಡಿದರು. ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ವಿಚಾರಣೆ ಅವಧಿಯಲ್ಲಿ ಬಂಧಿಸಿದ್ದು ಕಾನೂನು ಬಾಹಿರ. ಊಟ ನೀಡದೆ, ಹಬ್ಬಕ್ಕೆ ಹೋಗಲು ಬಿಡದೆ ವಶದಲ್ಲಿ ಇಟ್ಟುಕೊಂಡು ಬಂಧಿಸಿರುವುದು ಸರ್ವಾಧಿಕಾರಿ ಧೋರಣೆ ಎಂದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಭರತ್ ಮುಂಡೋಡಿ ಮಾತನಾಡಿ, ಗುಜರಾತ್ ಶಾಸಕರನ್ನು ಆಪರೇಷನ್ ಕಮಲದಿಂದ ರಕ್ಷಿಸಿದ ದಿನದಿಂದ ಕೇಂದ್ರ ಸರಕಾರ ಡಿಕೆಶಿ ಅವರನ್ನು ಇ.ಡಿ. ಮುಖಾಂತರ ಬಂಧಿಸುವ ಸಂಚು ರೂಪಿಸಿತ್ತು. ಇದಕ್ಕೆ ರಾಜ್ಯದ ಡಿಸಿಎಂ ಗೋವಿಂದ ಕಾರಜೋಳ ಅವರ ಹೇಳಿಕೆಯೇ ಸಾಕ್ಷಿ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರ ಬೀಳಿಸಲು ಬಿಜೆಪಿ ಖರ್ಚು ಮಾಡಿದ ಸಾವಿರಾರು ಕೋಟಿ ರೂ. ಮೂಲದ ಬಗ್ಗೆ ತನಿಖೆ ಏಕೆ ಮಾಡಿಸಿಲ್ಲ ಎಂದು ಪ್ರಶ್ನಿಸಿದರು. ಹಣ ಇದೆ ಎನ್ನುವ ಕಾರಣ ನೀಡಿ ಬಂಧಿಸುವುದಾದರೆ, ಬಿಜೆಪಿಯ ಜನಾರ್ದನ ರೆಡ್ಡಿ ಮಗಳ ಮದುವೆಗೆ ಖರ್ಚು ಮಾಡಿದ 500 ಕೋಟಿ ರೂ. ಎಲ್ಲಿಂದ ಬಂತೆನ್ನುವ ತನಿಖೆ ಏಕೆ ಮಾಡಿಲ್ಲ? ಡಿ.ಕೆ. ಶಿವಕುಮಾರ್ ಆರೋಪ ಮುಕ್ತರಾಗಿ ಹೊರ ಬರಲಿದ್ದಾರೆ ಎಂದರು.
Related Articles
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಮಾತನಾಡಿ, ಸುಳ್ಯದವರಾದ ಶೋಭಾ, ಡಿ.ವಿ. ಸದಾನಂದ ಗೌಡ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಇದ್ದ ಆಸ್ತಿಗೂ ಈಗಿನ ಆಸ್ತಿಗೂ ತುಲನೆ ಮಾಡಲಿ. ಡಿಕೆಶಿ, ಚಿದಂಬರಂ ಬಳಿ ಮಾತ್ರ ಹಣ ಇರುವುದೇ? ಬಿಜೆಪಿ ನಾಯಕರ ಬಳಿ ಇಲ್ಲವೇ ಎಂದವರು ಪ್ರಶ್ನಿಸಿದರು.
Advertisement
ಡಿಕೆಶಿ ಮುಖ್ಯಮಂತ್ರಿ ಆಗ್ತಾರೆಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಮಾತನಾಡಿ, ಡಿ.ಕೆ. ಶಿವಕುಮಾರ್ ಹಣ ಮಾಡಿಲ್ಲ. ಜನ ಸೇವೆ ಮಾಡಿದ್ದಾರೆ. ಅವರ ಸೇವೆಯನ್ನು ತಿಳಿದಿರುವ ಜನ ಅವರ ಬಂಧನವನ್ನು ವಿರೋಧಿಸಿ ಬೀದಿಗಿಳಿದಿದ್ದಾರೆ. ಅವರ ಬಂಧನ ತಾತ್ಕಾಲಿಕ. ಸತ್ಯಕ್ಕೆ ಗೆಲುವು ಸಿಕ್ಕಿ ಮುಂದೊಂದು ದಿನ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ಮಾತನಾಡಿ, ಕಾಶ್ಮೀರದ ಇಂದಿನ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ಸ್ಥಿತಿ ತೀವ್ರ ಸ್ವರೂಪದಲ್ಲಿ ಬಿಗಡಾಯಿಸಿದ್ದು, ಇದರಿಂದ ಜನರ ಗಮನ ಬದಲಾಯಿಸುವ ಸಲುವಾಗಿ ಇ.ಡಿ. ದಾಳಿ ನಡೆಸಲಾಗುತ್ತಿದೆ ಎಂದು ಆಪಾದಿಸಿದರು. ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಪಿ.ಸಿ. ಜಯರಾಮ ಮಾತನಾಡಿದರು. ಕೆಪಿಸಿಸಿ ಸದಸ್ಯ ರಾಜೀವಿ ರೈ, ತಾ.ಪಂ. ಸದಸ್ಯ ಆಶೋಕ್ ನೆಕ್ರಾಜೆ, ಅಬ್ದುಲ್ ಗಫೂರ್, ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಜಿ.ಕೆ. ಹಮೀದ್, ಮುಖಂಡರಾದ ಬೆಟ್ಟ ರಾಜಾರಾಮ ಭಟ್, ಸುಧೀರ್ ರೈ ಮೇನಾಲ, ಜಿ.ಪಂ. ಮಾಜಿ ಸದಸ್ಯರಾದ ಸರಸ್ವತಿ ಕಾಮತ್, ಚಂದ್ರಶೇಖರ ಕಾಮತ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಕೊಕ್ಕೋ, ಬಾಲಕೃಷ್ಣ ಭಟ್, ದೀರಾ ಕ್ರಾಸ್ತಾ, ಕಳಂಜ ವಿಶ್ವನಾಥ ರೈ, ಬೀರಾ ಮೊಯಿದ್ದೀನ್, ಪಿ.ಎಸ್. ಗಂಗಾಧರ್, ಪಿ.ಎ. ಮಹಮ್ಮದ್, ಪರಶುರಾಮ ಚಿಲ್ತಡ್ಕ, ಎಂ. ಮಾಧವ ಗೌಡ, ನಂದರಾಜ್ ಸಂಕೇಶ, ಸತೀಶ್ ಕೂಜುಗೋಡು, ದಿನೇಶ್ ಸರಸ್ವತಿಮಹಲ್, ಶರೀಫ್ ಕಂಠಿ, ಲಕ್ಷ್ಮಣ ಶೆಣೈ, ರಾಧಾಕೃಷ್ಣ ಪರಿವಾರಕಾನ, ಜಯಪ್ರಕಾಶ್ ನೆಕ್ರೆಪ್ಪಾಡಿ, ಶಾಫಿ ಕುತ್ತಮೊಟ್ಟೆ, ಭವಾನಿಶಂಕರ ಕಲ್ಮಡ್ಕ, ಪವಾಝ್ ಕನಕಮಜಲು, ಲೀಲಾ ಮನಮೋಹನ್, ತಿರುಮಲೇಶ್ವರಿ ಅಡಾರ್, ರಫೀಕ್ ಪಡು, ಅನಿಲ್ ರೈ ಬೆಳ್ಳಾರೆ, ಕಂದಸ್ವಾಮಿ, ಸಿದ್ದಿಕ್ ಕಟ್ಟೆಕ್ಕಾರ್, ಶಶಿಕಲಾ ದೇರಪ್ಪಜ್ಜನಮನೆ, ಹನೀಫ್ ಬೀಜಕೊಚ್ಚಿ, ಮುತ್ತಪ್ಪ ಪೂಜಾರಿ, ಕೃಷ್ಣಪ್ಪ ಗೌಡ ನೆಕ್ರೆಪ್ಪಾಡಿ. ಎಸ್.ಎನ್. ಬಾಪೂ ಸಾಹೇಬ್, ಶಿವಕುಮಾರ್ ಕಂದಡ್ಕ, ಓವಿನ್ ಪಿಂಟೊ, ಕೆ.ಕೆ. ಹರಿಪ್ರಸಾದ್, ಧರ್ಮಪಾಲ ಕೊಯಿಂಗಾಜೆ, ಚಂದ್ರಕಲಾ ಉಬರಡ್ಕ, ಶುಭಕರ ಉಬರಡ್ಕ, ಪರಮೇಶ್ವರ ಕೆಂಬಾರೆ, ಪ್ರಹ್ಲಾದ್ ಬಿ., ಎಸ್.ಕೆ. ಹನೀಫ್, ಸುರೇಶ್ ಎಂ.ಎಚ್., ಉಮೇಶ್ ಬೂಡು, ಶ್ರೀಹರಿ ಕುಕ್ಕುಡೇಲು ಮತ್ತಿತರರು ಉಪಸ್ಥಿತರಿದ್ದರು. ಬಿಎಸ್‌ವೈ, ರಾಮುಲು ನಿಲುವಿಗೆ ಸ್ವಾಗತ
ಯಡಿಯೂರಪ್ಪ ಅವರು ಡಿಕೆಶಿ ಆರೋಪಮುಕ್ತರಾಗಿ ಹೊರಬಂದರೆ ಅತಿ ಹೆಚ್ಚು ಸಂತೋಷ ಪಡುವ ವ್ಯಕ್ತಿಗಳಲ್ಲಿ ನಾನು ಮೊದಲಿಗ ಎಂದಿದ್ದಾರೆ. ಶ್ರೀರಾಮುಲು ಡಿಕೆಶಿ ಅವರನ್ನು ಆರಂಭದಲ್ಲಿ ಟೀಕಿಸಿದರೂ ಅನಂತರ ಕ್ಷಮೆ ಕೇಳಿದ್ದಾರೆ. ಈ ಇಬ್ಬರ ನಿಲುವನ್ನು ನಾವು ಸ್ವಾಗತಿಸುತ್ತೇವೆ. ಈ ಮನಃಸ್ಥಿತಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಅವರಲ್ಲೂ ಬರಬೇಕು ಎಂದು ವೆಂಕಪ್ಪ ಗೌಡ ಹೇಳಿದರು.