Advertisement

ಕಲಾವಿದರ ಸಮೀಕ್ಷೆಗೆ ಕೇಂದ್ರದಿಂದ ಕ್ರಮ: ನಾಯ್ಕರ್‌

10:48 AM Dec 20, 2021 | Team Udayavani |

ಮಂಗಳೂರು: ದೇಶದಲ್ಲಿರುವ ಎಲ್ಲ ಪ್ರಕಾರಗಳ ಕಲಾವಿದರ ಸರ್ವೆ ಹಾಗೂ ಅಸಂಘಟಿತ ಕಲಾವಿದರನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಲು ಕೇಂದ್ರ ಸರಕಾರ ಕ್ರಮ ಕೈಗೊಂಡಿದ್ದು ಕಲಾವಿದರ ಪಾಲಿಗೆ ಇದು ಉಪಯುಕ್ತ ಕ್ರಮವಾಗಲಿದೆ ಎಂದು ಬಿಜೆಪಿಯ ಕಲೆ ಮತ್ತು ಸಂಸ್ಕೃತಿ ಪ್ರಕೋಷ್ಠ ರಾಜ್ಯ ಸಹ ಸಂಚಾಲಕ ರಮೇಶ್‌ ಪರವಿ ನಾಯ್ಕರ್‌ ಹೇಳಿದ್ದಾರೆ.

Advertisement

ನಗರದ ಕುದ್ಮಲ್ ರಂಗರಾವ್‌ ಪುರಭವನದಲ್ಲಿ ರವಿವಾರ ಜರ ಗಿದ ಬಿಜೆಪಿ ಜಿಲ್ಲಾ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಜಿಲ್ಲಾ 9 ಮಂಡಲಗಳನ್ನೊಳಗೊಂಡ ಜಿಲ್ಲಾ ಸಮಿತಿಯ ಪದಗ್ರಹಣ ಹಾಗೂ ವಿಶಿಷ್ಠ ಯಕ್ಷಗಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಲಾವಿದರಿಗೆ ಹಾಗೂ ಅವರ ಕುಟುಂಬಕ್ಕೆ ನೆರವಾಗುವ ದಿಶೆಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ಅಸಂಘ ಟಿತ ಕಾರ್ಮಿಕರ ನೆಲೆಯಲ್ಲಿ ನೋಂದಾವಣೆ ನಡೆಯುತ್ತಿದೆ. ಕಲಾವಿದರ ಸರ್ವೆ ಕಾರ್ಯದಿಂದ ಅವ ರಿಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸಲು ಸುಲಭವಾಗಲಿದೆ. ಈಗಾಗಲೇ ಕರ್ನಾಟಕದ ಶಿವಮೊಗ್ಗ ದಲ್ಲಿ ಕಲಾವಿದರ ನೋಂದಣಿ ಸಂಪೂರ್ಣಗೊಂಡಿದೆ. ಉಳಿದ ಜಿಲ್ಲೆಗಳಲ್ಲೂ ತ್ವರಿತವಾಗಿ ಕಲಾವಿದರ ನೋಂದಣಿ ಕಾರ್ಯ ನಡೆಯಲಿದೆ ಎಂದರು.

ಶಾಸಕ ವೇದವ್ಯಾಸ ಕಾಮತ್‌ ಅವರು ಮಾತನಾಡಿ ಕಲೆ, ಸಂಸ್ಕೃತಿಯ ಸಂರಕ್ಷಣೆಯಲ್ಲಿ ಕಲಾವಿದರ ಕೊಡುಗೆ ಮಹತ್ತರವಾಗಿದ್ದು ಅವರಿಗೆ ಹೆಚ್ಚಿನ ರೀತಿಯ ಪ್ರೋತ್ಸಾಹ ಹಾಗೂ ಸವಲತ್ತುಗಳು ನೀಡುವುದು ಅಗತ್ಯ. ಬಿಜೆಪಿ ಸರಕಾರ ಕಲೆ, ಸಂಸ್ಕೃತಿಗೆ ಹೆಚ್ಚಿನಪ್ರೋತ್ಸಾಹ ನೀಡು ತ್ತಿದ್ದು ಈ ನಿಟ್ಟಿನಲ್ಲಿ ಹಲ ವಾರು ಯೋಜನೆಗಳನ್ನು ಅನುಷ್ಠಾನ ಗೊಳಿಸಿದೆ ಎಂದರು.

ಇದನ್ನೂ ಓದಿ:ಆಸ್ಪತ್ರೆಗಳಿಗೆ ಸಿಗಲಿದೆ “ಸ್ತನ್ಯಪಾನ ಸ್ನೇಹಿ’ ಟ್ಯಾಗ್‌

Advertisement

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡು ಬಿದಿರೆ ಯವರು ಮಾತನಾಡಿ ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಅವರ ಪರಿಕಲ್ಪನೆಯಾಗಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ರೂಪು ಗೊಂಡಿದೆ ಎಂದರು. ಜಿಲ್ಲಾ ಪ್ರಕೋಷ್ಠದ ಸಂಚಾಲಕ ಸರಪಾಡಿ ಆಶೋಕ್‌ ಶೆಟ್ಟಿ ಪ್ರಸ್ತಾವನೆಗೈದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್‌ ಬಂಟ್ವಾಳ , ತಿಲಕ್‌ರಾಜ್‌ ಕೃಷ್ಣಾಪುರ, ರೂಪಾ ಡಿ.ಬಂಗೇರ, ಸಹಸಂಚಾಲಕ ಚೇತಕ ಪೂಜಾರಿ ಮತ್ತಿತರು ಉಪಸ್ಥಿತರಿದ್ದರು.

ಸಮ್ಮಾನ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ವಾದ್ಯ ಕಲಾವಿದ ರಾಘು ಸುವರ್ಣ,ಯಕ್ಷಗಾನ ಕಲಾವಿದ ಎಡಪದವು ಶ್ರೀನಿವಾಸ ಆಚಾರ್ಯ, ತುಳುನಾಟಕ ರಂಗದ ಸದಾಶಿವ ಅಮೀನ್‌ ಹಾಗೂ ಕಲಾವಿದ ಭುಜಬಲಿ ಧರ್ಮಸ್ಥಳ , ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮಚಂದರ್‌ ಬೈಕಂಪಾಡಿ ಅವರನ್ನು ಸಮ್ಮಾನಿಸಿ ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next