Advertisement

ಪಿಎಂ ಮೋದಿ ವಿಮಾನ ಸಂಚರಿಸಲು ಪಾಕ್‌ ಅನುಮತಿ ಕೋರಿದ ಕೇಂದ್ರ

01:10 PM Jun 10, 2019 | Hari Prasad |

ಹೊಸದಿಲ್ಲಿ: ಕಿರ್ಗಿಸ್ಥಾನ ರಾಜಧಾನಿ ಬಿಷೆRàಕ್‌ನಲ್ಲಿ 13, 14ರಂದು ನಡೆಯಲಿರುವ ಶಾಂಘೈ ಸಹಕಾರ ಒಕ್ಕೂಟ (ಎಸ್‌ಸಿಒ) ಸಭೆಯಲ್ಲಿ ಭಾಗವಹಿಸಲು ತೆರಳುವ ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನಕ್ಕೆ ಪಾಕಿಸ್ಥಾನದ ವಾಯುಯಾನ ಪ್ರದೇಶದಲ್ಲಿ ಸಾಗಲು ಅನುಮತಿ ನೀಡುವಂತೆ ಪಾಕ್‌ಗೆ ಕೇಂದ್ರ ಸರಕಾರ ಮನವಿ ಮಾಡಿದೆ.

Advertisement

ಫೆ. 26ರ ಬಾಲಾಕೋಟ್‌ ದಾಳಿ ಬಳಿಕ ತನ್ನ ವಾಯುಪ್ರದೇಶವನ್ನು ಭಾರತದ ವಿಮಾನಗಳ ಪ್ರವೇಶಕ್ಕೆ ಪಾಕ್‌ ನಿಷೇಧ ಹೇರಿದೆ. ಆದರೆ, ಮೇ 21ರಂದು ಎಸ್‌ಸಿಒ ರಾಷ್ಟ್ರಗಳ ವಿದೇಶಾಂಗ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ್ದ ಮಾಜಿ ಸಚಿವೆ ಸುಷ್ಮಾ ಸ್ವರಾಜ್‌ ಅವರ ವಿಮಾನಕ್ಕೆ ತಮ್ಮ ವಾಯುಮಾರ್ಗದ ಮೂಲಕ ಸಂಚರಿಸಲು ಪಾಕ್‌ ಅವಕಾಶ ಕಲ್ಪಿಸಿತ್ತು. ಹೀಗಾಗಿ, ಮೋದಿ ಅವರ ಪ್ರಯಾಣಕ್ಕೂ ಅವಕಾಶ ನೀಡುವಂತೆ ಈಗ ಕೇಳಿಕೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next