ಹೊಸದಿಲ್ಲಿ : ಸರಕಾರಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್‌ನ 3.6 ಲಕ್ಷ ಕೋಟಿ ರೂ.ಗಳ ಮೀಸಲು ನಿಧಿಯನ್ನು ಕಬಳಿಸುವ ಹುನ್ನಾರವಿದೆ ಎಂಬ ಮಾಧ್ಯಮ ವರದಿಗಳನ್ನು ಸಂಪೂರ್ಣ ಸುಳ್ಳೆಂದು ಸರಕಾರ ಹೇಳಿದ್ದು ಇದು ಸರಕಾರದ ವಿರುದ್ಧ ನಡೆದಿರುವ ವ್ಯವಸ್ಥಿತ ಅಪಪ್ರಚಾರವಾಗಿದೆ ಎಂದು ಹೇಳಿದೆ.
ಸರಕಾರದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಮಾಡಿರುವ ಸರಣಿ ಟ್ವೀಟ್‌ನಲ್ಲಿ “ಸರಕಾರದ ಹಣಕಾಸು ಗಣಿತ ಸರಿಯಾಗಿಯೇ ಹಳಿಯ ಮೇಲಿದೆ; 3.6 ಲಕ್ಷ ಕೋಟಿ ರೂ.ಗಳ ಮೀಸಲು ನಿಧಿಯನ್ನು ತನಗೆ ವರ್ಗಾಯಿಸುವಂತೆ ಆರ್‌ಬಿಐ ಅನ್ನು ಕೋರುವ ಯಾವುದೇ ಪ್ರಸ್ತಾವ ಸರಕಾರದ ಮುಂದಿಲ್ಲ” ಎಂದು ಹೇಳಿದ್ದಾರೆ.
ಈಗವ ಚರ್ಚೆಯಲ್ಲಿರುವ ಏಕೈಕ ಪ್ರಸ್ತಾವವೆಂದರೆ ಆರ್‌ಬಿಐ ಗೆ ಸೂಕ್ತ ಆರ್ಥಿಕ ಬಂಡವಾಳ ಚೌಕಟ್ಟನ್ನು ನಿಗದಿಸುವುದೇ ಆಗಿದೆ ಎಂದವರು ಸ್ಪಷ್ಟಪಡಿಸಿದ್ದಾರೆ.