Advertisement

Karnataka: ಸಮಯಾವಕಾಶ ಕೇಳಿದರೂ ಪ್ರತಿಕ್ರಿಯಿಸದ ಕೇಂದ್ರ: ಸಿಎಂ ಸಿದ್ದರಾಮಯ್ಯ

11:17 PM Sep 09, 2023 | Team Udayavani |

ಹುಬ್ಬಳ್ಳಿ/ಧಾರವಾಡ: ವಿವಿಧ ನೀರಾವರಿ ಯೋಜನೆಗಳ ವಿಚಾರ, ಸಮಸ್ಯೆಗಳ ಕುರಿತು ಸರ್ವಪಕ್ಷ ನಿಯೋಗ ಕರೆತರುತ್ತಿದ್ದು, ತಮಗೆ ಸಮಯ ನೀಡಬೇಕು ಎಂದು ಪ್ರಧಾನಿಗೆ 10 ದಿನಗಳ ಹಿಂದೆಯೇ ಪತ್ರ ಬರೆದಿದ್ದೇನೆ. ಇದುವರೆಗೂ ಅವರಿಂದ ಸಮಯ ನಿಗದಿಯ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಶನಿ ವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮಹಾದಾಯಿ, ಕಾವೇರಿ, ಕೃಷ್ಣಾ ಮೇಲ್ದಂಡೆ , ಮೇಕೆದಾಟು ಸಹಿತ ವಿವಿಧ ನೀರಾವರಿ ಯೋಜನೆಗಳಿಗೆ ಸಂಬಂಧಿಸಿ ಮಾತನಾಡಲು ಸಮಯಾವಕಾಶ ನೀಡುವಂತೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆಯಲಾಗಿದೆ. ಜತೆಗೆ, ಬರಗಾಲ ಘೋಷಣೆ ವಿಚಾರದಲ್ಲಿ ನಿಯಮಗಳನ್ನು ಬದಲಾವಣೆ ಮಾಡುವಂತೆ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಿದರು.

ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಮುಂಗಾರು ವಿಫಲವಾಗಿದ್ದು, ಬರಗಾಲ ಘೋಷಣೆಗೆ ಸರಕಾರ ಉಪಸಮಿತಿ ರಚಿಸಿದೆ. ಈಗಾಗಲೇ 196 ತಾಲೂಕುಗಳಲ್ಲಿ ಬರ ಅಧ್ಯಯನ ಕೈಗೊಳ್ಳಲಾಗಿದೆ. ವರದಿ ಪರಿಶೀಲಿಸಿ ಬರ ಪೀಡಿತ ತಾಲೂಕು ಘೋಷಿಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next