Advertisement

“ಪಾಲನ್‌ 1000′ಅಭಿಯಾನಕ್ಕೆ ಚಾಲನೆ ನೀಡಿದ ಕೇಂದ್ರ ಸರ್ಕಾರ

10:21 PM Aug 16, 2022 | Team Udayavani |

ಮುಂಬೈ: ಮಕ್ಕಳ ಹುಟ್ಟಿನಾಗಿಂದ 1000 ದಿನಗಳವರೆಗಿನ ಆರೈಕೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ “ಪಾಲನ್‌ 1000′ ಅಭಿಯಾನ ಆರಂಭಿಸಿದ್ದು, ಅದಕ್ಕೆ ಕೇಂದ್ರ ಆರೋಗ್ಯ ಸಚಿವಾಲಯದ ಸಹಾಯಕ ಸಚಿವೆ ಭಾರತಿ ಪ್ರವೀಣ್‌ ಮಂಗಳವಾರ ಚಾಲನೆ ನೀಡಿದ್ದಾರೆ.

Advertisement

ಅದರ ಜತೆ 2 ವರ್ಷಗಳವರೆಗೆ ಮಕ್ಕಳ ಆರೈಕೆಗೆಂದು ಪೋಷಕರಿಗಾಗಿ ನಿರ್ಮಿಸಲಾಗಿರುವ ವಿಶೇಷ ಮೊಬೈಲ್‌ ಆ್ಯಪ್‌ ಅನ್ನೂ ಲೋಕಾರ್ಪಣೆಗೊಳಿಸಲಾಗಿದೆ. “ಶಿಶುವು ಗರ್ಭದಲ್ಲಿರುವಾಗಲೇ ಮೆದುಳು ಬೆಳವಣಿಗೆಯಾಗುತ್ತದೆ.

ಹಾಗೆಯೇ ಜನನವಾಗಿ ಮೊದಲೆರೆಡು ವರ್ಷ ಮಕ್ಕಳಲ್ಲಿ ಅನೇಕ ಬದಲಾವಣೆಗಳುಂಟಾಗುವ ಹಿನ್ನೆಲೆ ಅವರ ಆರೈಕೆ ಅತ್ಯಗತ್ಯ’ ಎಂದು ಸಚಿವೆ ತಿಳಿಸಿದ್ದಾರೆ.

ದೇಶದಲ್ಲಿ 2014ರಲ್ಲಿ ಸಾವಿರ ಶಿಶುಗಳಲ್ಲಿ 45 ಶಿಶುಗಳು ಸಾವನ್ನಪ್ಪುತ್ತಿದ್ದರೆ 2019ರಲ್ಲಿ 1000ದಲ್ಲಿ 35 ಶಿಶುಗಳು ಮಾತ್ರ ಸಾವನ್ನಪ್ಪಿವೆ ಎಂದೂ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next