ಹೊಸದಿಲ್ಲಿ: ವಿವಿಧ ಸರಕಾರಿ ಇಲಾಖೆಗಳಲ್ಲಿ 30 ವರ್ಷಗಳ ಸೇವೆ ಪೂರ್ಣಗೊಳಿಸಿರುವ ಎಲ್ಲ ಉದ್ಯೋಗಿಗಳ ಸೇವಾ ದಾಖಲೆ ಪರಿಶೀಲಿಸುವ ಮೂಲಕ ಅದಕ್ಷ ಮತ್ತು ಭ್ರಷ್ಟ ಉದ್ಯೋಗಿಗಳನ್ನು ಪತ್ತೆ ಹಚ್ಚಿ, ಅವಧಿ ಪೂರ್ವ ನಿವೃತ್ತಿ ನೀಡಲು ಕೇಂದ್ರ ಸರಕಾರ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಉದ್ಯೋಗಿಗಳ ಸೇವಾ ದಾಖಲೆ ಪರಿಶೀಲಿಸಲು ತನ್ನ ಎಲ್ಲ ಇಲಾಖೆಗಳಿಗೆ ಸರಕಾರ ಆದೇಶ ಹೊರಡಿಸಿದೆ.
ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು, 1972ರ ಅನ್ವಯ ಉದ್ಯೋಗಿಗಳ ಕಾರ್ಯಕ್ಷಮತೆ ಪರಿಶೀಲನೆ ನಡೆಸುವಂತೆ ಸೂಚಿಸ ಲಾಗಿದೆ.
ಈ ನಿಯಮಗಳ ಪ್ರಕಾರ ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ಅಗತ್ಯಬಿದ್ದರೆ ಸಿಬಂದಿಗೆ ಅವಧಿಪೂರ್ವ ನಿವೃತ್ತಿ ನೀಡುವ ಅಧಿಕಾರ ಆಯಾ ಇಲಾಖೆಗೆ ಇರುತ್ತದೆ. ಉದ್ಯೋಗಿ ಕಾರ್ಯಕ್ಷಮತೆ ಪರಿಶೀಲನೆಯ ರಿಜಿಸ್ಟರ್ ನಿರ್ವಹಿ ಸಬೇಕು. ಈ ಪ್ರಕ್ರಿಯೆಗಾಗಿ ಪರಿಶೀಲನ ಸಮಿತಿ ರಚಿಸಬೇಕು ಎಂದೂ ಸೂಚಿಸಲಾಗಿದೆ.