ಈ ಸಂಬಂಧ ಕೇಂದ್ರ ಸರಕಾರ ವಾಟ್ಸ್‌ಆ್ಯಪ್‌ಗೆ ನೋಟಿಸ್ ಜಾರಿ ಮಾಡಿದ್ದು, ನ.4ರೊಳಗೆ ಉತ್ತರಿಸುವಂತೆ ಹೇಳಿದೆ.
Advertisement
ಇಸ್ರೇಲ್‌ನ ಸರಕಾರೇತರ ಸರ್ವೇಕ್ಷಣಾ ಸಂಸ್ಥೆಯೊಂದು ಪೆಗಸಸ್ ಹೆಸರಿನ ಸ್ಪೈವೇರ್ ಮೂಲಕ ವಾಟ್ಸ್‌ಆ್ಯಪ್‌ಗೆ ಕನ್ನ ಹಾಕಿದ್ದು, ಅದು ಸುಮಾರು 1400 ಬಳಕೆದಾರರ ಚಾಟಿಂಗ್ ಮಾಹಿತಿಗಳನ್ನು ಕದಿಯಲಾಗಿದೆ, ಇವುಗಳಲ್ಲಿ ಹೆಚ್ಚಿನವು ವೀಡಿಯೋ ಚಾಟಿಂಗ್ ಮಾಹಿತಿಗಳಾಗಿವೆ ಎಂದು ಎಂದು ಸ್ವತಃ ವಾಟ್ಸ್‌ಆ್ಯಪ್ ಕನ್ನಕೊರೆದ ಸಂಗತಿಯನ್ನು ಹೇಳಿತ್ತು.
Related Articles
ಇದರೊಂದಿಗೆ ಇಸ್ರೇಲ್ ಕಂಪೆನಿ ವಿರುದ್ಧ ಸುಮಾರು 53 ಲಕ್ಷ ನಷ್ಟ ಪರಿಹಾರವನ್ನು ಕ್ಯಾಲಿಫೋರ್ನಿಯಾ ಕೋರ್ಟ್‌ನಲ್ಲಿ ವಾಟ್ಸ್‌ಆ್ಯಪ್ ಕೇಳಿದೆ. ವಾಟ್ಸ್‌ಆ್ಯಪ್‌ಗೆ 150 ಕೋಟಿ ಮಂದಿ ಗ್ರಾಹಕರಿದ್ದು ಭಾರತದಲ್ಲಿ 4 ಕೋಟಿ ಮಂದಿ ಗ್ರಾಹಕರಿದ್ದಾರೆ.
Advertisement
ಕಾಂಗ್ರೆಸ್ ಟೀಕೆ ಇದೇ ವೇಳೆ ವಾಟ್ಸ್‌ಆ್ಯಪ್ ಮಾಹಿತಿ ಕಳವು ವಿಚಾರದಲ್ಲಿ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದೆ. ಮೋದಿ ಸರಕಾರ ಮಾಹಿತಿ ಕಳವು ಮಾಡಿದ್ದು ಸಿಕ್ಕಿಬಿದ್ದಿದೆ. ಸುಪ್ರೀಂ ಕೋರ್ಟ್‌ನಲ್ಲಿ ಇತ್ತೀಚಿಗೆ ಸರಕಾರ ನಮ್ಮ ಖಾಸಗಿ ಹಕ್ಕುಗಳ ವಿರುದ್ಧ ವಾದ ಮಾಡಿದ್ದು, ಮಾಹಿತಿ ಕದಿವ ವ್ಯವಸ್ಥೆಯನ್ನು ಕೋಟ್ಯಂತರ ರೂ. ವೆಚ್ಚದಲ್ಲಿ ಅನುಷ್ಠಾನ ಮಾಡಿತ್ತು. ಆದರೆ ಇದಕ್ಕೆ ಸುಪ್ರೀಂ ತಡೆ ನೀಡಿದೆ. ಆದ್ದರಿಂದ ಸುಪ್ರೀಂ ಕೋರ್ಟ್ ಕೂಡಲೇ ಮಧ್ಯ ಪ್ರವೇಶಿಸಿ ಬಿಜೆಪಿ ಸರಕಾರದ ವಿರುದ್ಧ ನೋಟಿಸ್ ಜಾರಿ ಮಾಡಬೇಕು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುಜೇìವಾಲ ಟ್ವೀಟ್ ಮಾಡಿದ್ದಾರೆ. ಏನಿದು ಸ್ಪೈವೇರ್
ವಾಟ್ಸ್‌ಆ್ಯಪ್ ಮಾಹಿತಿಯನ್ನು ಕದಿಯಲು ಅಭಿವೃದ್ಧಿ ಪಡಿಸಿದ ವೈರಸ್ ರೀತಿಯದ್ದು. ಇದನ್ನು ಸ್ಪೈವೇರ್ ಎಂದು ಕರೆಯುತ್ತಾರೆ. ಬಳಕೆದಾರ ವೀಡಿಯೋ ಕಾಲ್ ರಿಸೀವ್ ಮಾಡಿದ ಕೂಡಲೇ ಈ ಸ್ಪೈವೇರ್ ಆ್ಯಕ್ಟಿವೇಟ್ ಆಗಿ ಅದು ಮಾಹಿತಿ ಕದಿಯುವಾತನಿಗೆ ಸಂಪರ್ಕ ಏರ್ಪಡಿಸುತ್ತದೆ. ಬಳಕೆದಾರ ಕಾಲ್ ರಿಸೀವ್ ಮಾಡದಿದ್ದರೂ, ಆತನ ಫೋನ್‌ನಲ್ಲಿರುವ ಸಂಪರ್ಕ ಸಂಖ್ಯೆಗಳು, ವಾಟ್ಸ್‌ಆ್ಯಪ್ ಮಾಹಿತಿ, ಕ್ಯಾಲೆಂಡರ್, ಪಾಸ್‌ವರ್ಡ್, ಕಾಂಟ್ಯಾಕ್ಟ್ ಲಿಸ್ಟ್‌ಗಳ ಮಾಹಿತಿಯನ್ನು ಪಡೆಯಲು ನೆರವು ನೀಡುತ್ತದೆ.