Advertisement
ಕಳೆದ ಮೂರು ದಿನಗಳಿಂದ ತೊಗರಿ ಖರೀದಿ ಕೇಂದ್ರದವರು ತೊಗರಿ ಖರೀದಿಗೆ ಮುಂದಾಗಲಿಲ್ಲ. ಖಾಲಿ ಚೀಲದ ನೆಪದಲ್ಲಿ ಖರೀದಿಯನ್ನ ಸ್ಥಗಿತಗೊಳಿಸಲಾಗಿದೆ. ಈ ಕುರಿತು ರೈತರು ಶುಕ್ರವಾರ ಆಕ್ಷಪವೆತ್ತಿ ಅಧಿಕಾರಿಗಳೂಂದಿಗೆ ವಾಗ್ವಾದ ನಡೆಸಿ ರಸ್ತೆ ತಡೆಯಿಂದ ಸಂಚಾರದಲ್ಲಿ ವ್ಯತೆಯ ಉಂಟಾಯಿತು.
ಸಮಸ್ಯೆ ನಿವಾರಣೆ ಮಾಡುವವರೆಗೆ ರಸ್ತೆ ತಡೆ ಕೈಬಿಡುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದರು. ಪೋಲಿಸ್ ಹಾಗೂ ರೈತರ ನಡುವೆ ಮಾತಿನ ಚಕಮುಕಿ ನಡೆಯಿತು. ಪಿಐ ಟಿ.ಆರ್. ರಾಘವೇಂದ್ರ ಸಂಧಾನ ನಡೆಸಿ ಪರಸ್ಥಿತಿ ತಿಳಿಗೊಳಿಸಿದರು. ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಣ್ಣ ಸಂತ್ಯಂಪೇಟ ಮಾತನಾಡಿ, ತೊಗರಿ ಖರೀದಿ ನೆಪದಲ್ಲಿ ಸರಕಾರಗಳು ರೈತರೊಂದಿಗೆ ಚಲ್ಲಾಟ ನಡೆಸಿವೆ. ಖಾಲಿ ಚೀಲದ ನೆಪಹೇಳಿ ಖರೀದಿ ಸ್ಥಗಿತಗೊಳಿಸಿರುವುದು ರೈತರನ್ನು ಪೇಚಿಗೆ ಸಿಲುಕಿಸಿದೆ. ಕಳೆದ ಮೂರು ದಿನಗಳಿಂದ ರೈತರು ತಮ್ಮ ತೊಗರಿ ಮಾರಾಟ ಮಾಡಲು ಕೇಂದ್ರದ ಬಳಿ ಹಗಲು ರಾತ್ರಿ ಮಲಗಿದ್ದಾರೆ. ಈ ಕುರಿತು ಸರಕಾರ ಮತ್ತು ಕೇಂದ್ರದ ಅಧಿಕಾರಿಗಳು ನಿರ್ಲಕ್ಷé ವಹಿಸಿರುವುದು ನಾಚಿಕೆಗೇಡು ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
ನೀಡಿ ನೋಂದಣಿ ದಿನಾಂಕ ವಿಸ್ತರಿಸಲು ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ
ಪ್ರತಿಭಟನೆ ಹಿಂಪಡೆಯಲಾಯಿತು. ಸಂಘದ ಪ್ರಮುಖರಾದ ಹಣಮಂತ್ರಾಯ ಮಡಿವಾಳರ್, ದೇವಿಂದ್ರಪ್ಪ ಪತ್ತಾರ, ಶಿವಪ್ಪ ಪಾಟೀಲ್, ದೇವಿಂದ್ರ ಪಾಟೀಲ್, ಹಣಮಗೌಡ ಪಾಟೀಲ್, ಮಾನಪ್ಪ ಹರಿಜನ್, ಯಂಕಪ್ಪ ದಾಸರ, ಚಂದ್ರು ಠಾಣಾಗುಂದಿ, ಈರಪ್ಪ, ಸಂಗಮೇಶ ಹೈಯಾಳ, ಬಸ್ಸಣ್ಣ ರಂಗಂಪೇಟ, ಶ್ರೀನಿವಾಸ ದೇವಾಪುರ, ಸಿದ್ರಾಮಪ್ಪ, ಅಮರನಾಥ ಹೈಯಾಳ, ಮಲ್ಲಪ್ಪ ದಿವಳಗುಡ್ಡ, ರಂಗನಾಥ ಗುತ್ತೆದಾರ, ರಮೇಶ, ಹಣಮಂತ್ರಾಯ, ರಾಘವೇಂದ್ರ, ವೆಂಕೋಬ, ವೆಂಕಟೇಶ ಕುಪಗಲ್ ಇದ್ದರು’
Advertisement
ಆನ್‌ಲೈನ್ ಬೆಳೆ ದೃಢೀಕರಣ ಬೇಡ: ಆನ್‌ಲೈನ್ ಬೆಳೆ ದೃಢೀಕರಣ ಕೈ ಬಿಡಲಾಗಿದೆ. ರೈತರು ಆತಂಕಗೊಳ್ಳುವ ಅಗತ್ಯವಿಲ್ಲ. ಗ್ರಾಮ ಲೆಕ್ಕಿಗರಿಂದ ಈ ಹಿಂದಿನಂತೆ ಕೈ ಬರಹದ ಬೆಳೆ ದೃಢೀಕರಣ ತಂದು ಖರೀದಿ ಕೇಂದ್ರದಲ್ಲಿನೋಂದಾಯಿಸಿಕೊಳ್ಳಬೇಕು.
ಸೋಫಿಯಾ ಸುಲ್ತಾನ, ಗ್ರೇಡ್ 2 ತಹಶೀಲ್ದಾರ್ ರೈತರು ಆತಂಕ ಪಡಬೇಕಾಗಿಲ್ಲ
ಖಾಲಿ ಚೀಲಗಳ ಕೊರತೆಯಿಂದ ಕೇಂದ್ರಗಳಲ್ಲಿ ವ್ಯತೆಯಾಗಿತ್ತು. ಇಗಾಗಲೇ ಎಲ್ಲಾ ಕೇಂದ್ರಗಳಿಗೆ ಸಾಕಾಗುವಷ್ಟು ಖಾಲಿ ಚೀಲಗಳನ್ನು ಪೂರೈಸಲಾಗಿದೆ. ರೈತರು ಆತಂಕ ಪಡಬೇಕಾಗಿಲ್ಲ. ನೋಂದಣಿಗೆ ಜ. 14 ಕೊನೆ ದಿನವಾಗಿದೆ. ಕೈ ಬರಹದ ದೃಢೀಕರಣ ಪತ್ರ ಸ್ವೀಕರಿಸಿ ನೋಂದಣಿ ಮಾಡಿಕೊಳ್ಳುಲು ಕೇಂದ್ರದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ರಂಗನಾತ ದೇಸಾಯಿ, ಮಾರುಕಟ್ಟೆ ಸಹಾಯಕ ನಿರ್ದೇಶಕ