Advertisement

ಸೌಲಭ್ಯ ಕಲ್ಪಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫ‌ಲ

03:54 PM Sep 06, 2019 | Team Udayavani |

ತುಮಕೂರು: ರಾಜ್ಯದಲ್ಲಿ ನೆರೆಯಿಂದ ಜನರು ಬದುಕನ್ನೆ ಕಳೆದುಕೊಂಡಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೌಲಭ್ಯ ಕಲ್ಪಿಸುವಲ್ಲಿ ವಿಫ‌ಲ ವಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ದೂರಿದರು.

Advertisement

ನಗರದ ಕನ್ನಡ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೂಡಲೇ ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಬೆಕು. ರಾಜ್ಯ ಸರ್ಕಾರ ಪ್ರತಿ ಕುಟುಂಬಕ್ಕೆ ತಕ್ಷಣ 25 ಸಾವಿರ ರೂ. ವಿತರಣೆ ಮಾಡಬೇಕು. ರಾಜ್ಯದಲ್ಲಿ ಸುರಿದಿರುವ ಮಳೆಯಿಂದ 1 ಲಕ್ಷ ಕೋಟಿ ನಷ್ಟ ವಾಗಿದೆ. 14 ಲಕ್ಷ 80 ಸಾವಿರ ಹೆಕ್ಟೇರ್‌ ಪ್ರದೇಶದ ಬೆಳೆ ನಾಶವಾಗಿದೆ. ತೆಂಗು, ಅಡಕೆ, ಏಲಕ್ಕಿ, ಕಾಫಿ, ಜೋಳದ ಬೆಳೆಗಳು ನಾಶವಾಗಿವೆ. ಕೇಂದ್ರ ಸರ್ಕಾರ ರಾಜ್ಯದ ಪ್ರಕೃತಿವಿಕೋಪ ಅರ್ಥ ಮಾಡಿಕೊಂಡು ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಮಲತಾಯಿ ಧೋರಣೆ: ನೆರೆ ಸಂತ್ರಸ್ತರ ಪರಿಹಾರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಹಿಂದೆ ಬಿದ್ದಿದೆ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನು ಸರಿಸುತ್ತಿದೆ. ಪ್ರವಾಹ ಪರಿಹಾರಕ್ಕೆ ಈವರೆಗೆ ಬಿಡಿ ಗಾಸೂ ನೀಡಿಲ್ಲ. ಎಲ್ಲಾ ಸಂತ್ರಸ್ತರಿಗೂ ಸಂಪೂರ್ಣ ಪರಿಹಾರ ಒದಗಿಸುವ ಕಾರ್ಯ ಶೀಘ್ರವಾಗಿ ಆಗಬೇಕಿದೆ. ಕೇಂದ್ರ ಸರ್ಕಾರಕ್ಕೆ ಪರಿಪೂರ್ಣವಾದ ಮಾಹಿತಿ ಒದಗಿಸ ಬೇಕು ಎಂದು ಆಗ್ರಹಿಸಿದರು.

ಕರ್ನಾಟಕಕ್ಕೆ ಮಾತ್ರ ಅನ್ಯಾಯ: ಮಲತಾಯಿ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರ್ಕಾರ ರಾಜಕೀಯ ಲಾಭದ ಉದ್ದೇಶದ ತೀರ್ಮಾನ ಮಾಡುತ್ತಿದೆ. ಕೇರಳ, ಮಹಾರಾಷ್ಟ್ರ, ತಮಿಳುನಾಡಿಗೆ ಪರಿಹಾರ ನೀಡುತ್ತೇವೆ ಎಂದು ಹೇಳಿರುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾತ್ರ ಅನ್ಯಾಯ ಮಾಡುತ್ತಿದೆ. ರೈತರು ಬೆಳೆ ಕಳೆದು ಕೊಂಡು ಸಂಕಷ್ಟದಲ್ಲಿ ಕುಳಿತಿದ್ದಾರೆ. ಪರಿಸ್ಥಿತಿ ಅರ್ಥ ಮಾಡಿಕೊಂಡು ರಾಜ್ಯ ಹಾಗೂ ಕೇಂದ್ರ ಸರ್ಕಾರ ಪರಿಹಾರ ಒದಗಿಸಬೇಕು.

ಮೈತ್ರಿ ಸರ್ಕಾರ‌ದ ರಚನೆಗೂ ಮುನ್ನ ಮೊದಲ ಬಾರಿಗೆ ಮುಖ್ಯಮಂತ್ರಿ ಯಾಗಿ ಅಧಿಕಾರ ವಹಿಸಿಕೊಂಡ ಬಿ.ಎಸ್‌. ಯಡಿಯೂರಪ್ಪ ಸಾಲ ಮನ್ನಾದ ಘೋಷಣೆ ಮಾಡಿದ್ದರು. ಮೈತ್ರಿ ಸರ್ಕಾರ ಆಡಳಿತ ಕಳೆದು ಕೊಂಡ ನಂತರ ಮತ್ತೆ ಅಧಿಕಾರ ವಹಿಸಿಕೊಂಡ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಈ ಬಾರಿಯೂ ಸಾಲ ಮನ್ನಾ ಘೋಷಣೆ ಮಾಡುತ್ತಾರೆಂಬ ರೈತರ ನಿರೀಕ್ಷೆ ಹುಸಿಯಾಗಿಸಿದ್ದಾರೆ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸಂಘದ ಗೌರವಾಧ್ಯಕ್ಷ ಎಚ್.ಆರ್‌. ಬಸವ ರಾಜ್‌, ಕಾರ್ಯಾಧ್ಯಕ್ಷ ಸಿದ್ದವೀರಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಲಕ್ಷ್ಮಣ್‌ ಸ್ವಾಮಿ, ಬೈರೇಗೌಡ, ಶಿವಪ್ಪ, ಕಾರ್ತಿಕ್‌, ಕಾರ್ಯದರ್ಶಿ ಗಳಾದ ಸತೀಶ್‌, ಆನಂದ್‌ಪಟೇಲ್, ಉಪಾಧ್ಯಕ್ಷ ರಾದ ಕೆಂಕೆರೆ ಸತೀಶ್‌, ಮಹೇಶ್‌, ಮುನಿಯಪ್ಪ, ವೀರಣ್ಣ, ದೇವರಾಜ್‌, ಚಂದ್ರಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next