Advertisement

ಪೆರ್ಮನ್ನೂರು ಚರ್ಚ್‌ ಶತಮಾನೋತ್ಸವ ಸೌಹಾರ್ದ ಸಮ್ಮಿಲನ 

10:45 AM Jan 21, 2018 | Team Udayavani |

ಮಹಾನಗರ: ಉಳ್ಳಾಲದ ಪೆರ್ಮನ್ನೂರಿನ ಸಂತ ಸೆಬೆಸ್ಟಿಯನ್‌ ಚರ್ಚ್‌ ಶತಮಾನೋತ್ಸವ ಅಂಗವಾಗಿ ನಡೆಯುತ್ತಿರುವ ಸೌಹಾರ್ದ ಸಮ್ಮಿಲನವು ಸರ್ವ ಜನಾಂಗವನ್ನು ಬೆಸೆಯುವ ಕಾರ್ಯಕ್ರಮವಾಗಿದೆ.

Advertisement

ಕೋಮು ಸೂಕ್ಷ್ಮ ಪರಿಸರ ಎಂದು ಗುರುತಿಸಲ್ಪಟ್ಟರೂ ಉಳ್ಳಾಲ ಪ್ರದೇಶದಲ್ಲಿ ಸರ್ವ ಧರ್ಮದವರು ಸಮಬಾಳ್ವೆಯಿಂದ ನೆಲೆಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಚರ್ಚ್‌ ನ ಶತಮಾನೋತ್ಸವ ಸಮಾರಂಭದ ಅಂಗವಾಗಿ ತೊಕ್ಕೊಟ್ಟು ಒಳಪೇಟೆಯ ಬಳಿ ಹಿಂದೂ ಮುಖಂಡರು ದ್ವಾರ ವೊಂದನ್ನು ಹಾಕಿದ್ದಾರೆ. ಅಂದಹಾಗೆ ಈ ದ್ವಾರವು ಸೌಹಾರ್ದ ಸಮ್ಮಿಲನದ ಸಂಕೇತ ದಂತಿದ್ದು, ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಧರ್ಮದ ಸಂಕೇತವನ್ನು ಹಾಕಲಾಗಿದೆ. ಇದು ಎಲ್ಲರ ಪ್ರಶಂಸೆಗೂ ಪಾತ್ರವಾಗುತ್ತಿದೆ.

ದ್ವಾರದ ವಿಶೇಷ
ಈ ದ್ವಾರದ ಎಡ ಭಾಗದಲ್ಲಿ ಚರ್ಚ್‌ ಗಂಟೆ, ಬಲ ಭಾಗದಲ್ಲಿ ಮಸೀದಿಯ ಬಾಂಕ್‌ ಕೊಡುವ ಜಾಗ ಮತ್ತು ಮಧ್ಯದ ಭಾಗದಲ್ಲಿ ದೇವಸ್ಥಾನದ ಗೋಪುರವಿದೆ. ಈ ದ್ವಾರವನ್ನು ಚೀರುಂಭ ಭಗವತಿ ಕ್ಷೇತ್ರದ ಉಪಾಧ್ಯಕ್ಷ ಸುರೇಶ್‌ ಭಟ್ನಗರ
ಅವರು ಸ್ವಂತ ಆಸಕ್ತಿಯಿಂದ ಹಾಕಿ ಸಮಾಜಕ್ಕೆ ಸಂದೇಶ ಸಾರಿದ್ದಾರೆ.

ಸಹಬಾಳ್ವೆಯ ಸಂದೇಶ
ನಮ್ಮೆಲ್ಲರ ದೃಢಚಿತ್ತ ಸಹಬಾಳ್ವೆಯ ಎಂಬ ಸಂದೇಶವನ್ನು ಸಾರುವ ಈ ದ್ವಾರ ಎಲ್ಲ ಧರ್ಮದವರು ಒಂದೇ ಎಂಬ ಕಲ್ಪನೆ ಮೂಡಿಸುತ್ತದೆ. ಹೊಸ ಪ್ರಯೋಗ, ಪರಿಕಲ್ಪನೆಗೆ ಮಾದರಿಯಾದಂತಿರುವ ಈ ದ್ವಾರ ಏಕತೆಯನ್ನು ಸಾಧಿಸುವುದರ ಜತೆಗೆ ಜನರಲ್ಲಿ ಒಗ್ಗಟ್ಟು ಮೂಡಿಸುವ ದೃಷ್ಟಿಯಿಂದ ಮಾಡಲಾಗಿದೆ.

ಜಾತಿ ಮತ ಮೀರಿ ಸೇವೆ
ಅಂದಹಾಗೆ ಸಂತ ಸೆಬೆಸ್ಟಿಯನ್‌ ಧರ್ಮಕೇಂದ್ರ ಕೂಡ ಎಲ್ಲ ಧರ್ಮಗಳ ಸೌಹಾರ್ದ ಸಂಗಮ ಸ್ಥಳ. ಉಳ್ಳಾಲ ದರ್ಗಾ ಹಾಗೂ ಸೋಮನಾಥೇಶ್ವರ ದೇವಾಲಯ ಪಕ್ಕದಲ್ಲಿಯೇ ಇರುವುದರಿಂದ ಇಲ್ಲಿಗೆ ಆಗಮಿಸುವ ಎಲ್ಲ ಧರ್ಮದವರು ಚರ್ಚ್‌ಗೆ ಭೇಟಿ ನೀಡುತ್ತಾರೆ. ಅಲ್ಲದೆ ಇಲ್ಲಿ ನಡೆದ ಸೌಹಾರ್ದ ಸಮ್ಮಿಲನದಲ್ಲಿಯೂ ಜಾತಿ ಭೇದವಿಲ್ಲದೆ ಸ್ವಯಂಸೇವಕರಾಗಿ ಕೆಲಸ ನಿರ್ವಹಿಸಿದ್ದಾರೆ. 

Advertisement

ಸಂತಸದ ಸಂಗತಿ
ದೇವರಿಗೆ ಎಲ್ಲರೂ ಒಂದೇ ಎಂಬ ಭಾವನೆ ಇದೆ. ಭಕ್ತರಾದ ನಾವು ಕೂಡ ಯಾವುದೇ ತಾರತಮ್ಯ ಮಾಡಬಾರದು. ಎಲ್ಲ ಜಾತಿ, ವರ್ಗಕ್ಕೆ ಗೌರವ ಕೊಟ್ಟು ದ್ವಾರ ನಿರ್ಮಾಣ ಮಾಡಿದ್ದು ಸಂತಸದ ಸಂಗತಿ. ಇದು ಸಮಾಜಕ್ಕೆ ಸಂದೇಶವನ್ನು
ನೀಡುತ್ತದೆ.
– ಯು.ಟಿ. ಖಾದರ್‌, ಸಚಿವ

ಸೌಹಾರ್ದ ಸಮ್ಮಿಲನ
ಸೌಹಾರ್ದ ಸಮ್ಮಿಲನ ಸಮಾರಂಭದಲ್ಲಿ ಎಲ್ಲ ಧರ್ಮದವರಿಗೂ ಪ್ರಾಶಸ್ತ್ಯ ನೀಡಲಾಗಿದೆ. ಶಾಂತಿ ಮತ್ತು ಸಹಬಾಳ್ವೆಯಿಂದ ಬಾಳಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ. ಈ ಕಾರ್ಯರ್ಕಮದಲ್ಲಿ ಹೆಚ್ಚಾಗಿ ಹಿಂದೂ ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು.
ಕೆ. ಜಯರಾಮ ಶೆಟ್ಟಿ, ,
ಮಾಜಿ ಶಾಸಕ, ಉಳ್ಳಾಲ

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next