Advertisement
ತಾಲೂಕಿನ ಮಧುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಶತಮಾನೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲೆಯು 1908ರಲ್ಲಿ ಆರಂಭಗೊಂಡು ಈಗ 110 ವರ್ಷ ಪೂರೈಸಿದೆ. ಸರ್ಕಾರ 100 ವರ್ಷ ಪೂರೈಸಿದ ಶಾಲೆಯನ್ನು ಪಾರಂಪರಿಕ ಶಾಲೆಯೆಂದು ಘೋಷಣೆ ಮಾಡಿದ್ದು, ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣ ಪಡೆದು, ಶಾಲೆಗೆ ಕೀರ್ತಿ ತರಬೇಕು ಎಂದು ಕಿವಿ ಮಾತು ಹೇಳಿದರು.
Related Articles
Advertisement
ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ: ಬಿಇಒ ಚಂದ್ರಪಾಟೀಲ್ ಮಾತನಾಡಿ, ಸರ್ಕಾರ ತಾಲೂಕಿನಲ್ಲಿ ಶತಮಾನ ಪೂರೈಸಿದ ಮಧುವನಹಳ್ಳಿ ಏಕೈಕ ಶಾಲೆಯನ್ನು ಪಾರಂಪರಿಕ ಶಾಲೆ ಎಂದು ಗುರುತಿಸಿದೆ. ಇದೊಂದು ಐತಿಹಾಸಿಕ ಶಾಲೆ, ಗ್ರಾಮಸ್ಥರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಮನವಿ ಮಾಡಿದರು.
ಸನ್ಮಾನ: ಈ ಸಂದರ್ಭದಲ್ಲಿ ಪಾರಂಪರಿಕ ಶಾಲೆಯಲ್ಲಿ ಓದಿದ ಸುಬ್ಬಶೆಟ್ಟಿ ಮತ್ತು ಹನುಮಶೆಟ್ಟಿ ಅವರನ್ನು ಸನ್ಮಾನಿಸಿದರು. ಮಧುವನಹಳ್ಳಿ ಸರ್ಕಾರಿ ಶಾಲೆ ಶತಮಾನ ಪೂರೈಸಿದ ಹಿನ್ನೆಲೆಯಲ್ಲಿ ವಿಶೇಷ ವಾರ್ಷಿಕ ಸಂಚಿಕೆಯನ್ನು ಶಾಸಕ ಆರ್.ನರೇಂದ್ರ ಬಿಡುಗಡೆ ಮಾಡಿದರು. ಶಾಲಾ ವಿದ್ಯಾರ್ಥಿಗಳು ವಿವಿಧ ಹಾಡುಗಳಿಗೆ ನೃತ್ಯ ಮಾಡಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಮಧುವನಹಳ್ಳಿ ಗ್ರಾಪಂ ಅಧ್ಯಕ್ಷೆ ಯಶೋಧಮ್ಮ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಕುಮಾರ್, ಸದಸ್ಯ ಸಿದ್ದಪ್ಪಾಜಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಕೆಂಪಣ್ಣ, ಪರೀವೀಕ್ಷಕ ಜಯರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬುಕಾನಿ, ಸಂಯೋಜಕ ಚಾಮರಾಜು, ಮಾನಸ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಚನ್ನಶೆಟ್ಟಿ, ಗ್ರಾಪಂ ಸದಸ್ಯರಾದ ಮಹದೇವ ಸ್ವಾಮಿ, ರಂಗಸ್ವಾಮಿ, ಸತೀಶ್, ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್ ಹಾಜರಿದ್ದರು.