Advertisement

ಈ ಬಾರಿಯ ಜನಗಣತಿಯಲ್ಲಿ ಕೇಳಲಾಗುವ ಪ್ರಶ್ನೆಗಳ ಪಟ್ಟಿ ಇಲ್ಲಿದೆ…

09:54 AM Jan 17, 2020 | Hari Prasad |

ನವದೆಹಲಿ: ವಿಶ್ವದ ಎರಡನೇ ಅತೀದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ 09 ವರ್ಷಗಳ ಬಳಿಕ ಮತ್ತೆ ಜನಗಣತಿ ಬಂದಿದೆ. ದೇಶವಾಸಿಗಳ ಸ್ಥಿತಿಗತಿ, ಜೀವನಶೈಲಿ, ಕುಟುಂಬ ಪದ್ಧತಿ ಹೀಗೆ ಹತ್ತು ಹಲವು ಮಾಹಿತಿಗಳನ್ನು ಪಡೆದುಕೊಂಡು ಅದಕ್ಕೆ ಅನುಗುಣವಾಗಿ ಸರಕಾರದ ನೀತಿ ನಿಯಮಗಳನ್ನು ಮತ್ತು ಯೋಜನೆಗಳನ್ನು ರೂಪಿಸಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ದೇಶದ ಜನಸಂಖ್ಯಾ ಗಾತ್ರವನ್ನು ಅಳೆಯುವ ಉದ್ದೇಶಕ್ಕಾಗಿಯೂ ಈ ಗಣತಿ ಮಹತ್ವವನ್ನು ಪಡೆದುಕೊಂಡಿದೆ.

Advertisement

ಈ ಬಾರಿ ಒಟ್ಟು ಎರಡು ಹಂತಗಳಲ್ಲಿ ಜನಗಣತಿ ನಡೆಯುತ್ತಿದ್ದು ಪ್ರಥಮ ಹಂತ ಇದೇ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಪ್ರಾರಂಭಗೊಂಡು ಸೆಪ್ಟಂಬರ್ 30ರವರೆಗೆ ನಡೆಯುತ್ತದೆ. ಎರಡನೇ ಹಂತದಲ್ಲಿ ನಡೆಯುವ ‘ರಾಷ್ಟ್ರೀಯ ಜನಸಂಖ್ಯಾ ದಾಖಲಾತಿ’ 2021ರ ಫೆಬ್ರವರಿಯಲ್ಲಿ ನಡೆಯಲಿದೆ.

ಇದೀಗ ಪ್ರಥಮ ಹಂತದ ಜನಗಣತಿಯಲ್ಲಿ ನಿಮ್ಮ ಮನೆಗೆ ಬರುವ ಗಣತಿದಾರರು ಮನೆ ಮತ್ತು ಮನೆಯಲ್ಲಿರುವ ವ್ಯವಸ್ಥೆ/ಸೌಲಭ್ಯಗಳಿಗೆ ಸಂಬಂಧಿಸಿದ ಕೆಲವೊಂದು ಮಾಹಿತಿಗಳನ್ನು ಪ್ರಶ್ನೆಗಳ ಮೂಲಕ ನಿಮ್ಮಿಂದ ಪಡೆದುಕೊಳ್ಳಲಿದ್ದಾರೆ. ಮೊದಲ ಹಂತದಲ್ಲಿ 31 ವಿಷಯಗಳ ಮೇಲೆ ಪ್ರಶ್ನೆಗಳನ್ನು ಕೇಳಲಾಗುತ್ತದೆ, ಈ ಪ್ರಶ್ನೆಗಳ ಮಾದರಿ ಹೀಗಿರುತ್ತದೆ.

1. ಕಟ್ಟಡದ ಸಂಖ್ಯೆ
2. ಗಣತಿ ನಡೆಸುತ್ತಿರುವ ಮನೆಯ ಸಂಖ್ಯೆ
3. ಗಣತಿ ಮಾಡುತ್ತಿರುವ ಮನೆಯ ನೆಲ, ಗೋಡೆ ಮತ್ತು ಛಾವಣಿಯನ್ನು (ಮಾಡಿನ ಮಾದರಿ) ನಿರ್ಮಾಣ ಮಾದರಿ
4. ಗಣತಿಯ ಮನೆಯನ್ನು ಬಳಸುತ್ತಿರುವ ಉದ್ದೇಶ
5. ಗಣತಿಯ ಮನೆಯ ಸದ್ಯದ ಪರಿಸ್ಥಿತಿ
6. ಮನೆಯಲ್ಲಿ ಇರುವ ಸದಸ್ಯರ ಸಂಖ್ಯೆ
7. ಮನೆಯಲ್ಲಿ ಸಾಧಾರಣವಾಗಿ ಯಾವಾಗಲೂ ಇರುವ ಸದಸ್ಯರ ಸಂಖ್ಯೆ
8. ಮನೆಯ ಯಜಮಾನರ ಹೆಸರು
9. ಮನೆಯ ಯಜಮಾನರ ಲಿಂಗ
10. ಮನೆಯ ಯಜಮಾನ ಪ.ಜಾತಿ/ಪ.ಪಂಗಡ/ಇತರೇ ವರ್ಗಕ್ಕೆ ಸೇರಿದ್ದಾರೆಯೇ?
11. ಗಣತಿ ಮನೆಯ ಒಡೆತನದ ಸ್ವರೂಪ
12. ಮನೆಯಲ್ಲಿರುವ ವಾಸಯೋಗ್ಯ ಕೊಠಡಿಗಳ ಸಂಖ್ಯೆ
13. ಮನೆಯಲ್ಲಿ ವಾಸಿಸುತ್ತಿರುವ ದಂಪತಿ(ಗಳು) ಸಂಖ್ಯೆ
14. ಕುಡಿಯುವ ನೀರಿನ ಪ್ರಮುಖ ಮೂಲ
15. ಕುಡಿಯುವ ನೀರಿನ ಲಭ್ಯತೆ
16. ಪ್ರಮುಖ ಬೆಳಕಿನ ಮೂಲ
17. ಶೌಚಾಲಯ ಸೌಲಭ್ಯದ ಲಭ್ಯತೆ
18. ಶೌಚಾಲಯದ ವಿಧ
19. ತ್ಯಾಜ್ಯ ನೀರು ಸಂಗ್ರಹ ವ್ಯವಸ್ಥೆ
20. ಸ್ನಾನಗೃಹ ಸೌಲಭ್ಯದ ಲಭ್ಯತೆ
21. ಅಡುಗೆ ಕೋಣೆ ಲಭ್ಯತೆ ಮತ್ತು ಎಲ್.ಪಿ.ಜಿ./ಪಿ.ಎನ್.ಜಿ. ಸಂಪರ್ಕ
22. ಅಡುಗೆಗೆ ಬಳಸುವ ಪ್ರಮುಖ ಎಣ್ಣೆ
23. ರೆಡಿಯೋ/ಟ್ರಾನ್ಸಿಸ್ಟರ್
24. ಟೆಲಿವಿಷನ್
25. ಇಂಟರ್ನೆಟ್ ಸೌಲಭ್ಯ
26. ಲ್ಯಾಪ್ ಟಾಪ್/ಕಂಪ್ಯೂಟರ್
27. ದೂರವಾಣಿ/ಮೊಬೈಲ್ ಫೋನ್/ಸ್ಮಾರ್ಟ್ ಫೋನ್
28. ಬೈಸಿಕಲ್/ಸ್ಕೂಟರ್/ಮೊಟಾರ್ ಸೈಕಲ್/ಮೊಪೆಡ್
29. ಕಾರು/ಜೀಪು/ವ್ಯಾನ್
30. ಮನೆಯಲ್ಲಿ ಸೇವಿಸುವ ಪ್ರಮುಖ ಆಹಾರ ಧಾನ್ಯ
31. ಮೊಬೈಲ್ ನಂಬರ್

ಈ ಸಲ ಜನಗಣತಿ ಸಂದರ್ಭದಲ್ಲಿ ದೇಶವಾಸಿಗಳು ಗಣತಿದಾರರಿಗೆ ಯಾವುದೇ ರೀತಿಯ ದಾಖಲೆಗಳನ್ನು ತೋರಿಸುವ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ. ಇದಕ್ಕೂ ಮೇಲೆ ನಾಗರಿಕರು ಯಾವುದೇ ದಾಖಲೆಗಳನ್ನು ಗಣತಿದಾರರಿಗೆ ತೋರಿಸುವುದು ಅಥವಾ ತೋರಿಸದೇ ಇರುವುದು ಅವರವರ ನಿರ್ಧಾರಕ್ಕೆ ಬಿಟ್ಟ ವಿಚಾರವಾಗಿದೆ. 2011ರ ಜನಗಣತಿ ವರದಿ ಪ್ರಕಾರ ದೇಶದ ಒಟ್ಟು ಜನಸಂಖ್ಯೆ 1,210,854,977 ಆಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next