Advertisement

ಸ್ಮಶಾನ ಒತ್ತುವರಿ ದೂರು: ಪರಿಶೀಲನೆ

04:22 PM Jan 02, 2020 | Suhan S |

ಬಂಗಾರಪೇಟೆ: ತಾಲೂಕಿನ ಸಿಂಗರಹಳ್ಳಿ ಗ್ರಾಮದಲ್ಲಿ ಸ್ಮಶಾನ ಒತ್ತುವರಿಗೆ ಸಂಬಂಧಿಸಿದಂತೆ ಗ್ರಾಮಸ್ಥರ ದೂರಿನ ಮೇರೆಗೆ ತಹಶೀಲ್ದಾರ್‌ ಕೆ.ಬಿ. ಚಂದ್ರಮೌಳೇಶ್ವರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ತಾಲೂಕಿನ ಸಿಂಗರಹಳ್ಳಿ ಸರ್ವೆ ನಂ.27ರಲ್ಲಿ 17 ಎಕರೆ ಗೋಮಾಳ ಇದೆ. ಇದರಲ್ಲಿ ಸ್ಮಶಾನಕ್ಕೆ ಸ್ಥಳ ನಿಗದಿಯಾಗಿದೆ. ಆದರೆ, ಇತ್ತೀಚಿಗೆ ಮಂಜುನಾಥ್‌ ಅವರ ಕುಟುಂಬದವರ ಸ್ಮಶಾನಕ್ಕೆ ಬೇಲಿ ಹಾಕಿರುವುದರಿಂದ ಗ್ರಾಮದಲ್ಲಿ ನಿಧನರಾದವರನ್ನು ಶವ ಸಂಸ್ಕಾರ ಮಾಡಲು ಸ್ಥಳವಿಲ್ಲ ಎಂದು ಗ್ರಾಮಸ್ಥರು ತಹಶೀಲ್ದಾರ್‌ ಅವರಿಗೆ ಅನೇಕ ಬಾರಿ ಮನವಿ ಸಲ್ಲಿಸಿ, ನ್ಯಾಯಕ್ಕಾಗಿ ಒತ್ತಾಯಿಸಿದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ತಹಶೀಲ್ದಾರ್‌ ಕೆ.ಬಿ.ಚಂದ್ರಮೌಳೇಶ್ವರ್‌, ಸ್ಥಳಕ್ಕೆ ಆಗಮಿಸಿ ಸ್ಮಶಾನಭೂಮಿ ಒತ್ತುವರಿ ಮಾಡಿಕೊಳ್ಳಲಾಗಿದ್ದ ಮಂಜುನಾಥ್‌ ಹಾಗೂ ಗ್ರಾಮಸ್ಥರ ವಿಚಾರಣೆ ಮಾಡಿ, ಮೂಲ ದಾಖ ಲಾತಿಗಳನ್ನು ಪರಿಶೀಲನೆ ಮಾಡಿ, ಮೂರು ದಿನಗಳೊಳಗೆ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು.

ಈ ವೇಳೆ ಕಂದಾಯ ನಿರೀಕ್ಷಕ ಗೋಪಾಲ್‌, ಪಿಡಿಒ ಸರಸ್ವತಿ, ಗ್ರಾಪಂ ಸದಸ್ಯ ಅಂಬೇಡ್ಕರ್‌, ನಾರಾಯಣ, ಮಂಜುನಾಥ್‌, ಮಧು ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next