Advertisement

ಸಿಮೆಂಟ್‌ ಕ್ವಾರಿ ನೀರು; ಜನವರಿಗೆ ಪೂರ್ಣ ಪೂರೈಕೆ

01:38 PM Nov 03, 2020 | Suhan S |

ಬಾಗಲಕೋಟೆ: ಕಳೆದ ಎಂಟು ವರ್ಷಗಳಿಂದ ಕುಂಟುತ್ತ ಸಾಗಿದ್ದ ಇಲ್ಲಿನ ಸಿಮೆಂಟ್‌ ಕಾರ್ಖಾನೆಯ ಕ್ವಾರಿ ನೀರು ಪೂರೈಕೆ ಯೋಜನೆ ಪೂರ್ಣಗೊಂಡಿದ್ದು, ಡಿಸಿಎಂ ಗೋವಿಂದ ಕಾರಜೋಳ ಲೋಕಾರ್ಪಣೆಗೊಳಿಸಿದರು.

Advertisement

ನಗರದ ನಾಡಗೌಡ ಬಡಾವಣೆ, ರೈಲ್ವೆ ನಿಲ್ದಾಣದ ಹತ್ತಿರ ನಿರ್ಮಿಸಲಾದ ಈ ಯೋಜನೆಗೆ ಬಟನ್‌ ಒತ್ತುವ ಮೂಲಕ ಚಾಲನೆ ನೀಡಿ, 10.56 ಕೋಟಿ ರೂ.ಗಳ ವೆಚ್ಚದಲ್ಲಿ ಈ ಯೋಜನೆ ಕೈಗೊಳ್ಳಲಾಗಿದ್ದು, ಈ ಯೋಜನೆ ಕಾರ್ಯ ಶೀಘ್ರ ಪೂರ್ಣಗೊಳಿಸಿ ಹಳೆಯ ಬಾಗಲಕೋಟೆಯ ಜನರಿಗೆ 24×7 ಮಾದರಿಯ ನೀರು ಸರಬರಾಜು ಮಾಡಲು ಸೂಚಿಸಿದರು.

ಶಾಸಕ ಡಾ| ವೀರಣ್ಣ ಚರಂತಿಮಠ ಮಾತನಾಡಿ, ನೀರು ಸರಬರಾಜು ಯೋಜನೆಯ ಕಾಮಗಾರಿ ಜನವರಿ 2016 ರಿಂದ ಪ್ರಾಯೋಗಿಕವಾಗಿ ಚಾಲನೆಗೊಳಿಸಲಾಗಿತ್ತು. 11.20 ಎಂಎಲ್‌ಡಿ ಜಲಶುದ್ದೀಕರಣ ಘಟಕದ ಬಾಕಿ ಉಳಿದ ಕಾಮಗಾರಿಗಳನ್ನು ಮೂಲ ಗುತ್ತಿಗೆದಾರರನ್ನು ಬ್ಲಾಕ್‌ಲಿಸ್ಟ್‌ಗೆ ಹಾಕಿ ಬೇರೆ ಗುತ್ತಿಗೆದಾರರಿಂದ ಕೈಗೆತ್ತಿಕೊಂಡುನವೆಂಬರ್‌ 2018ರಿಂದ ಪೂರ್ಣಗೊಳಿಸಲಾಗಿದೆ ಎಂದರು. ಅಮೃತ ಯೋಜನೆಯಡಿ 24×7 ಮಾದರಿಯ ನೀರು ಸರಬರಾಜು ವಿತರಣಾ ಕೊಳವೆ ಮಾರ್ಗವನ್ನು ಜೈನ್‌ ಗುತ್ತಿಗೆದಾರರಿಂದ ಕೈಗೆತ್ತಿಕೊಂಡು ಝೋನ್‌-1ರಲ್ಲಿ ನೀರು ಸರಬರಾಜು ಯೋಜನೆ ಲೋಕಾರ್ಪಣೆಗೊಳಿಸಲಾಗಿದೆ.

ಝೋನ್‌-2ರ ವಿತರಣಾ ಕೊಳವೆ ಮಾರ್ಗ ಎರಡು ತಿಂಗಳಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆ ಮಾಡಿ 2021ರ ಜನವರಿಯಿಂದ ಪೂರ್ಣ ಪ್ರಮಾಣದಲ್ಲಿ ಹಳೆ ಬಾಗಲಕೋಟೆ ಪಟ್ಟಣಕ್ಕೆ 24×7 ಮಾದರಿಯ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.

ಸಂಸದ ಪಿ.ಸಿ. ಗದ್ದಿಗೌಡರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ, ಪೊಲೀಸ್‌ ವರಿಷ್ಠಾಧಿಕಾರಿಲೋಕೇಶ ಜಗಲಾಸರ, ಜಿಪಂ ಸಿಇಒ ಟಿ. ಭೂಬಾಲನ,ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗಣಪತಿಪಾಟೀಲ, ಅಭಿಯಂತರ ಎಸ್‌.ಎಸ್‌. ಪಟ್ಟಣಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಗುರುರಾಜ ಬಂಗಿನ್ನವರ, ನಗರಸಭೆ ಆಯುಕ್ತ ಮುನಿಶ್ಯಾಮಪ್ಪ ಉಪಸ್ಥಿತರಿದ್ದರು.

Advertisement

2.15 ಕೋಟಿ ವೆಚ್ಚದಲ್ಲಿ ಪಾಲಿಕ್ಲಿನಿಕ್‌ ನಿರ್ಮಾಣ: ಕಾರಜೋಳ :

 ಬಾಗಲಕೋಟೆ: ನವನಗರದ ಯುನಿಟ್‌-2ರಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ಪಶು ಆಸ್ಪತ್ರೆ (ಪಾಲಿಕ್ಲಿನಿಕ್‌) ಕಟ್ಟಡಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪುನರ್‌ರಚನೆಯಿಂದಾಗಿ 2014ರಲ್ಲಿ ಜಿಲ್ಲೆಗೆ ಒಂದರಂತೆ ಹೊಸದಾಗಿಪ್ರಾರಂಭವಾದ ಪಾಲಿಕ್ಲಿನಿಕ್‌ನ ಸುಸಜ್ಜಿತ ಕಟ್ಟಡ ನಿರ್ಮಾಣ ಕೈಗೊಳ್ಳಲು 2019-20 ನೇ ಸಾಲಿನ ಆರ್‌ಐಡಿಎಫ್‌ ಟ್ಯಾಂಚ್‌-25ರ ಅಡಿ ಹಣ ಮಂಜೂರಾಗಿದ್ದು, 2.15 ಕೋಟಿ ರೂ. ಗಳ ವೆಚ್ಚದಲ್ಲಿ 9 ಸಾವಿರ ಚದರ ಅಡಿ ಸುಸಜ್ಜಿತ ಪಾಲಿಕ್ಲಿನಿಕ್‌ ಕಟ್ಟಡ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಡಾ|ವೀರಣ್ಣ ಚರಂತಿಮಠ, ಜಿಪಂ ಉಪಾಧ್ಯಕ್ಷಮುತ್ತಪ್ಪ ಕೋಮಾರ, ತಾಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಡಿಸಿ ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ,ಎಸ್ಪಿ ಲೋಕೇಶ ಜಗಲಾಸರ, ಜಿಪಂ ಸಿಇಒ ಟಿ. ಭೂಬಾಲನ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next