ಹೊಸಕೋಟೆ: ಸಂವಿಧಾನದ ಅನುಗುಣವಾಗಿ ಪ್ರಜಾಪ್ರಭುತ್ವ ನಡೆಯುತ್ತಿದ್ದು ಕಾನೂನನ್ನು ಎಲ್ಲರೂಗೌರವಿಸಬೇಕು. ರಾಜಕೀಯವಾಗಿ ಎಲ್ಲೆಡೆ ನಡೆಯುತ್ತಿರುತ್ತದೆ, ಆದರೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದ್ದು ಎಲ್ಲರೂ ನ್ಯಾಯಾಲಯದ ಆದೇಶಕ್ಕೆ ತಲೆ ಭಾಗಬೇಕು. ಯಾವುದೇ ರೀತಿಯತೀರ್ಪು ಬಂದರೂ ಅದನ್ನು ಒಪ್ಪಿಕೊಳ್ಳಬೇಕು ಎಂದುಪೌರಾಡಳಿತ ಮತ್ತು ಸಣ್ಣ ಉದ್ದಿಮೆಗಳ ಸಚಿವ ಎಂ.ಟಿ.ಬಿ. ನಾಗರಾಜ್ ಹೇಳಿದರು.
ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಹೋಬಳಿ ಗೊಟ್ಟಿಪುರ ಗ್ರಾಮದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಅನುಗೊಂಡನಹಳ್ಳಿ ಹೋಬಳಿ ಹಾಗೂ ಜಡಿಗೇನಹಳ್ಳಿ ಹೋಬಳಿಯಲ್ಲಿ ಈಗಾಗಲೇ 39 ಕೆರೆಗಳಿಗೆನೀರು ತುಂಬಿಸುವ ಯೋಜನೆ ಜಾರಿಯಲ್ಲಿದ್ದು 36 ಕಿ.ಮೀ. ಪೈಪ್‌ಲೈನ್ ಸಹ ನಡೆಯುತ್ತಿದ್ದೆ 4 ತಿಂಗಳಲ್ಲಿಎಲ್ಲಾ ಕೆರೆಗಳನ್ನು ತುಂಬಿಸಲಾಗುವುದು. ಈಗಾಗಲೆಸಚಿವ ಮಾಧುಸ್ವಾಮಿ ಅವರ ಜೊತೆ ಸಹ ಚರ್ಚಿಸಲಾಗಿದೆ ಎಂದರು.
ಹೊಸಕೋಟೆಯಿಂದ ಎಲೆಮಲ್ಲಪ್ಪನಶೆಟ್ಟಿ ಕೆರೆಗೆ ನೀರು ತುಂಬಿಸುವ 2ನೇ ಪೈಪ್‌ಲೈನ್ ಕಾಮಗಾರಿಗೆ40 ಕೋಟಿ, ಸೂಲಿಬೆಲೆ ಹಾಗೂ ನಂದಗುಡಿ ಹೋಬಳಿಗೆ 100 ಕೋಟಿ ಸಹ ಕೇಳಿದ್ದು ನೀಡುವುದಾಗಿಭರವಸೆ ನೀಡಿದ್ದಾರೆ. ಆದರೆ ಉಪ ಚುನಾವಣೆಯಲ್ಲಿಸೋತ ಹಿನ್ನೆಲೆಯಲ್ಲಿ ತಡವಾಗಿದೆ. ಆದರೆ ಈಗ ಶಾಸಕಹಾಗೂ ಸಂಸದರು ತಂದೆ ಮಗ ಇದ್ದರೂ ಸಹಯಾವುದೇ ಕೆಲಸ ಕಾರ್ಯ ನಡೆಸುತ್ತಿಲ್ಲ. ಅವರು ಯಾವ ಯಾವ ಕಾಮಗಾರಿ ಮಾಡಿದ್ದಾರೆ ಎಂಬುದು ಪಟ್ಟಿ ನೀಡಲಿ ಎಂದು ಸವಾಲು ಹಾಕಿದರು.
ಎಚ್.ಎನ್. ವ್ಯಾಲಿ ನೀರು ತರುವ ಸಂದರ್ಭದಲ್ಲಿ ಶಾಸಕರಾಗಿಯೇ ಇರಲಿಲ್ಲ. ಇನ್ನೂ ಕೆ.ಸಿ. ವ್ಯಾಲಿಎಚ್. ಎನ್. ವ್ಯಾಲಿ ನೀರು ಈ ಭಾಗಕ್ಕೆ ತಂದರೆ ಈ ಭಾಗದಜನರಿಗೆ ತೊಂದರೆಯಾಗುತ್ತದೆ. ಪಟ್ಟಣ ಪ್ರದೇಶದಲ್ಲಿಉಪಯೋಗಿಸಿದ ಕೆಟ್ಟ ನೀರು ಈ ಭಾಗಕ್ಕೆ ಹರಿದರೆಜನರಿಗೆ ತೊಂದರೆಯಾಗುತ್ತದೆ ಎಂದು ಹೇಳಿದವರುಈಗ ನಾನೇ ಈ ಭಾಗಕ್ಕೆ ನೀರು ಹರಿಸಿದೆ ಎಂದುಹೇಳುತ್ತಿದ್ದಾರೆ ಎಂದು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಳೇ ಟೇಪ್ರೀ ಕಾರ್ಡ್ ವಾದಕ್ಕೆ ತಿರುಗೇಟು: ಕಳೆದ 3 ವರ್ಷದಿಂದ ಹರಿಜನರ ಜಮೀನು ವಾಪಸ್ಸುನೀಡುವಂತೆ ಬಚ್ಚೇಗೌಡರ ಕುಟುಂಬದ ವಿರುದ್ಧ ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕಜಾಲತಾಣದಲ್ಲಿ ಹಳೇ ಟೇಪ್‌ರೀಕಾರ್ಡ್ ರೀತಿಯಲ್ಲಿಹೇಳಿದ್ದೇ ಹೇಳುತ್ತಿದ್ದಾರೆ ಎಂಬ ಮಾತಿಗೆ ತಿರುಗೇಟು ನೀಡಿದ ಸಚಿವರು ಈಗಾಗಲೇ ಈ ಪ್ರಕರಣ ಸಂಬಂಧವಿಧಾನಪರಿಷತ್ ಅಧಿವೇಶನದಲ್ಲಿ ಎಸಿಬಿಗೆ ತನಿಖೆನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಹರಿಜನರಿಗೆಈ ಜಮೀನು ತಿರುಗುವ ತನಕ ನಾನು ಇದೇ ರೀತಿ ಹೇಳುತ್ತಲೇ ಇರುತ್ತೇನೆ ಎಂದರು.
ಎಂ.ಹೊಸಹಳ್ಳಿ ಗ್ರಾಮದಲ್ಲಿ 2019-20ನೇ ಸಾಲಿನಬಯಲು ಸೀಮೆ ಅನುದಾನದಡಿಯಲ್ಲಿ 5 ಲಕ್ಷವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ, ದಾಸರಹಳ್ಳಿ
ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಎಸ್ .ಸಿ.ಪಿ.-ಟಿ.ಎಸ್.ಪಿ ಅನುದಾನದಡಿಯಲ್ಲಿ 40 ಲಕ್ಷರೂ. ವೆಚ್ಚದಲ್ಲಿ ರಸ್ತೆ ಉದ್ಘಾಟನೆ ಹಾಗೂ ಗೊಟ್ಟಿಪುರಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಎಸ್‌ಸಿಪಿ-ಟಿಎಸ್‌ಪಿ ಅನುದಾನದಡಿಯಲ್ಲಿ 40 ಲಕ್ಷ ರೂ.ಗಳವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಸತೀಶ್, ಬಿಎಂಆರ್‌ಡಿಎ ಅಧ್ಯಕ್ಷ ಚನ್ನಸಂದ್ರ ಸಿ.ನಾಗರಾಜ್, ಗ್ರಾಪಂ ಅಧ್ಯಕ್ಷರಾದ ಸುಬ್ಬಲಕ್ಷ್ಮೀ ಚಿಕ್ಕನಾರಾಯಣಸ್ವಾಮಿ, ಮುಖಂಡರಾದ ರಘುವೀರ್,ಜಿ.ಎಂ.ಕೃಷ್ಣಪ್ಪ, ನಾಗೇಶ್, ಗೊಟ್ಟಿಪುರ ಶ್ರೀನಿವಾಸ್ ನಾಯಕ್, ಗೋಪಾಲ್, ಸುಜಾತ ನಾಗರಾಜ್ ಹಾಗೂ ಇತರರು ಉಪಸ್ಥಿತರಿದ್ದರು.