Advertisement

ಕೆ.ಪಿ.ಟಿ. ಕಟ್ಟಡ ದುರಸ್ತಿಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

12:29 AM Jan 23, 2020 | Team Udayavani |

ಮಹಾನಗರ: ಕೆ.ಪಿ.ಟಿ ಡಿಪ್ಲೊಮಾ ಕಾಲೇಜಿನ ಸಮಸ್ಯೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಮಂಗಳೂರು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕೆ.ಪಿ.ಟಿ. ಘಟಕದ ವತಿಯಿಂದ ನಗರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

Advertisement

ಸರ್ವಕಾಲೇಜು ಎಬಿವಿಪಿ ಅಧ್ಯಕ್ಷ ವಚನ್‌ ಕುಮಾರ್‌ ಮಾತನಾಡಿ, ಅನೇಕ ಬಾರಿ ಕೆ.ಪಿ.ಟಿ. ಕಾಲೇಜಿನ ಪಾಲಿಮರ್‌, ಕೆಮಿಕಲ್‌ ಮತ್ತು ಎಲೆಕ್ಟ್ರಾನಿಕ್‌ ವಿಭಾಗದ ಕಟ್ಟಡವು ಶಿಥಿಲಗೊಂಡಿದ್ದು, ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಕಾಲೇಜಿನ ಪ್ರಾಂಶು ಪಾಲರನ್ನು ಮನವಿ ಮಾಡಿದ್ದು, ಈ ವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ದೊರೆತಿಲ್ಲ ಎಂದರು.

ಎಬಿವಿಪಿಯ ಆಗ್ರಹದಂತೆ ಶಾಸಕ ಡಾ| ಭರತ್‌ ಶೆಟ್ಟಿ ವೈ. ಅವರು ಪ್ರತಿಭಟನ ಸ್ಥಳಕ್ಕೆ ಭೇಟಿ ನೀಡಿ ಕಟ್ಟಡವನ್ನು ಪರಿಶೀಲಿಸಿ ಪ್ರಾಂಶುಪಾಲರೊಂದಿಗೆ ಮಾತನಾಡಿ, ಸದ್ಯ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಬೇರೆ ಕಟ್ಟಡದಲ್ಲಿ ತರಗತಿ ನಡೆಸಲು ತಿಳಿಸಿದರು. ಪ್ರತಿಭಟನಕಾರರನ್ನು ಉದ್ದೇಶಿಸಿ ಕೆ.ಪಿ.ಟಿ. ಸಹಿತ ವಿವಿಧ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಮಸ್ಯೆಗಳು ಈ ಎ.ಬಿ.ವಿ.ಪಿ. ಯ ಪ್ರತಿಭಟನೆಯಿಂದ ಗಮನಕ್ಕೆ ಬಂದಿದ್ದು, ಅದನ್ನು ಶಿಕ್ಷಣ ಸಚಿವರ ಗಮನಕ್ಕೆ ತಂದು ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ವಿಶೇಷ ಒತ್ತು ನೀಡಲಾಗುವುದು ಎಂದರು.

ಹಿರಿಯ ಕಾರ್ಯಕರ್ತರಾದ ಶೀತಲ್‌ ಕುಮಾರ್‌ ಜೈನ್‌, ವಿಕಾಸ್‌ ಕಾಟಿಪಳ್ಳ, ಜಿಲ್ಲಾ ಸಂಚಾಲಕ್‌ ಸಂದೇಶ್‌ ರೈ ಮಜಕ್ಕಾರ್‌, ನಗರ ಸಂಘಟನ ಕಾರ್ಯದರ್ಶಿ ವೀರೇಶ್‌ ಅಜ್ಜ ಣ್ಣ ನವರು, ನಗರ ಕಾರ್ಯದರ್ಶಿ ಮಣಿಕಂಠ ಕಳಸ, ಸಹ ಕಾರ್ಯದರ್ಶಿ ನಿಶಾನ್‌ ಆಳ್ವ, ಶ್ರೇಯಸ್‌, ಅಕ್ಷಯ್‌ ಕಾಮಾಜೆ, ಘಟಕ ಅಧ್ಯಕ್ಷ ರೋನಕ್‌, ಘಟಕ ಕಾರ್ಯದರ್ಶಿ ಗುರುಪ್ರಸಾದ್‌, ಸರ್ವಕ ಾಲೇಜು ಪ್ರಮುಖರಾದ ವಚನ್‌ ಕುಮಾರ್‌, ದೀಕ್ಷಿತ್‌, ಧನುಷ್‌ ಸುವರ್ಣ, ಲಿಖೀತ್‌, ಧನುಷ್‌ ಶೆಟ್ಟಿ, ಚೇತನ್‌, ಆದರ್ಶ್‌, ಶ್ರೇಯಸ್‌, ಆದಿತ್ಯ, ವಿದ್ಯಾ ರ್ಥಿನಿ ಪ್ರಮುಖರಾದ ಅಶ್ವಿ‌ನಿ, ವಾಣಿಶ್ರೀ, ಸುಶ್ಮಾ, ಹೇಮಾ, ಲಿಖೀತ, ರಿಷಿಕ, ತೃಪ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next