Advertisement

ಬ್ರಹ್ಮಚರ್ಯ ಮುಪ್ಪಿನಲ್ಲೊ, ಮೊಳಕೆಯಲ್ಲೋ?

08:28 PM Mar 06, 2020 | Lakshmi GovindaRaj |

ಟಿ.ವಿ.ಗಳಲ್ಲಿ ಬರುವ ಪೌರಾಣಿಕ ಕಥೆಗಳಲ್ಲಿ “ಬ್ರಹ್ಮಚಾರಿ’ಯನ್ನು ಚಿತ್ರಿಸುವುದೇ ಬೇರೆ. ಕಾಡು- ಆಶ್ರಮಗಳಲ್ಲಿ ವಾಸ, ಕಠೊರ ಪರಿಶ್ರಮ, ಗುರುಸೇವೆ, ಭಿಕ್ಷೆ, ವೇದ- ಮಂತ್ರಗಳ ಅಧ್ಯಯನ ಮಾಡುತ್ತಿರುವ ಹುಡುಗರ ಚಿತ್ರಣ ಸಾಮಾನ್ಯವಾಗಿ ಮೂಡುವುದು. ಸಣ್ಣ ವಯಸ್ಸಿನಲ್ಲಿ ಇದೇನು ಶೋಷಣೆ! ತಂದೆ- ತಾಯಿಯರಿಂದ ಬೇರ್ಪಡಿಸಿ ಕಠೊರವಾದ ಜೀವನ ನಡೆಸಲು ಹೊರದೂಡುವುದು ಕ್ರೌರ್ಯದ ಪರಮಾವಧಿ.

Advertisement

“ವಯಸ್ಸಾದ ಮೇಲೆ ರಾಮ - ಕೃಷ್ಣ ಅಂತ ಇರೋದು ತಪ್ಪಿದ್ದಲ್ಲ. ಈ ವಯಸ್ಸಿನಲ್ಲಿ ಇದೆಲ್ಲ ಯಾಕಪ್ಪ ಬೇಕಿತ್ತು?’ ಎಂಬುದು ಸಹಜ ಪ್ರತಿಕ್ರಿಯೆ. ಯಾವುದೇ ಸಸಿಯನ್ನು ಬೆಳೆದ ಮೇಲೆ ಬಗ್ಗಿಸಲಾರೆವು. ಮಡಿಕೆಯ ಆಕಾರವನ್ನು ಒಣಗಿದ ಮೇಲೆ ಬದಲಾಯಿಸಲು ಸಾಧ್ಯವಿಲ್ಲ. ಈ ಮಾತುಗಳು ಪ್ರಸಿದ್ಧವಾಗಿದ್ದರೂ, ಇಡೀ ಜೀವನವನ್ನು ಮೋಜು ಗಮ್ಮತ್ತಿನಲ್ಲಿ ಕಳೆದು ರಿಟೈರ್‌ ಆದಮೇಲೆ ಜಪ, ತಪ, ಭಜನೆ ಅಂತ ಮಾಡುವವರನ್ನು ನೋಡುತ್ತಲೇ ಇದ್ದೇವಲ್ಲ ಎಂಬ ಸಂಶಯ ಹುಟ್ಟುವುದು ಸಹಜವಷ್ಟೇ.

ಇಲ್ಲಿ ಜಪ, ತಪಾದಿಗಳಿಂದ ಆಗಬೇಕಾದದ್ದು ಏನು ಎಂಬ ಅರಿವು ಅವಶ್ಯ. ಜಪ, ತಪಾದಿಗಳು ಸಾಧನವಷ್ಟೇ. ನಮ್ಮೊಳಗಿನ ಚೈತನ್ಯವನ್ನು ಕಾಣುವುದೇ ಗುರಿ. ಕೊನೆಯ ಕಾಲದಲ್ಲಿ ಎಲ್ಲರೂ ಹುಡುಕುವ ನೆಮ್ಮದಿ- ಶಾಂತಿ- ಸಾರ್ಥಕತೆ, ಆ ಒಳ ಅನುಭವದಿಂದ ಮಾತ್ರ ಬರತಕ್ಕದ್ದು. ಅದು ಫ‌ಲಿಸಬೇಕಾದರೆ, ನಮ್ಮ ಮೈ-ಮನಗಳು ಚೆನ್ನಾಗಿ ತಪದ ತಾಪದಲ್ಲಿ ಬೆಂದು ಪಾಕವಾಗಬೇಕು. ಇದು ಮುಪ್ಪಿನಲ್ಲಿ ಪ್ರಾರಂಭಿಸಿ, ಪಕ್ವವಾಗಲು ಸಾಧ್ಯವಾಗುವುದಿಲ್ಲ.

ನೂರಾರು ವಾಹನಗಳು ಚಲಿಸುವ ರಸ್ತೆಯ ನಡುವೆ ಸೈಕಲ್‌ ಕಲಿಯುವುದು ಅಸಾಧ್ಯ. ಖಾಲಿ ಮೈದಾನದಲ್ಲೇ ಕಲಿಯಬೇಕು. ಅಂತೆಯೇ, ಒಳ ಬ್ಯಾಲೆ ಕಲಿಯಬೇಕಾದರೆ ಸಂಸಾರದ ಸುಖ-ದುಃಖ, ಕಷ್ಟ- ಕಾರ್ಪಣ್ಯಗಳೆಂಬ ಟ್ರಾಫಿಕ್‌ ನಡುವೆ ಕಲಿಯಲು ಅಸಾಧ್ಯ. ಅದರ ಸೋಂಕಿಲ್ಲದ, ಮುಗ್ಧವಾದ ಬಾಲ್ಯದಲ್ಲಿ ಕಲಿಯುವುದು ಸುಲಭ. ಒಬ್ಬ ಸಂಯಮಿ ಜ್ಞಾನಿಯಾದ ಗುರುವಿನ ಆಶ್ರಯ ಬೇಕು. ಉಳಿದಂತೆ ಆಶ್ರಮ, ಗುರುಸೇವೆ ಮಂತ್ರ, ಯಜ್ಞ ಮುಂತಾದವೆಲ್ಲ ಕುಶಲನಾದ ಗುರುವು ಉಪಯೋಗಿಸುವ ಸಾಧನಗಳಷ್ಟೇ ಎಂದು ಶ್ರೀರಂಗ ಮಹಾಗುರುಗಳು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದರು.

* ಡಾ. ಮೋಹನ್‌ ರಾಘವನ್‌, ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ

Advertisement
Advertisement

Udayavani is now on Telegram. Click here to join our channel and stay updated with the latest news.

Next