Advertisement

ಈ ತಾರೆಯರಿಗೆ ಸ್ವಲ್ಪವೂ ತಟ್ಟಿಲ್ಲ ಕೋವಿಡ್ ಬಿಸಿ!

12:32 AM Nov 21, 2020 | mahesh |

ಹೊಸದಿಲ್ಲಿ: ಕೋವಿಡ್‌ ಬಿಕ್ಕಟ್ಟು ಕ್ರೀಡೆ ಹಾಗೂ ಸಿನೆಮಾ ಕ್ಷೇತ್ರಕ್ಕೆ ನೀಡಿರುವ ಪೆಟ್ಟು ಅಷ್ಟಿಷ್ಟಲ್ಲ. ಆದರೂ, ಕೆಲವು ತಾರೆಯರ ಬ್ರಾಂಡ್‌ ಮೌಲ್ಯಕ್ಕೆ ಮಾತ್ರ ಪೆಟ್ಟು ಬಿದ್ದಿಲ್ಲ. ಈಗಲೂ ಬಹುರಾಷ್ಟ್ರೀಯ ಕಂಪೆನಿಗಳು ಜಾಹೀರಾತು ಒಪ್ಪಂದ ಮಾಡಿಕೊಳ್ಳಲು ಅವರ ಮುಂದೆ ಸಾಲುಗಟ್ಟಿ ನಿಲ್ಲುತ್ತಲೇ ಇವೆ.

Advertisement

ಕೆಲವೇ ದಿನಗಳ ಹಿಂದಷ್ಟೇ ಕೋಲ್ಗೇಟ್‌-ಪಾಮೋಲಿವ್‌ ಸಂಸ್ಥೆಯು ಬಾಲಿವುಡ್‌ ನಟ ಆಯುಷ್ಮಾನ್‌ ಖುರಾನಾ ಜತೆಗೆ ಜಾಹೀರಾತು ಒಪ್ಪಂದ ಮಾಡಿಕೊಂಡಿತ್ತು, ತನ್ಮೂಲಕ ಕೋವಿಡ್‌ ಸಮಯದಲ್ಲಿ ಖುರಾನಾ 19ನೇ ಬ್ರಾಂಡ್‌ಗೆ ಸಹಿ ಹಾಕಿದಂತಾಗಿದೆ. ಇವರಷ್ಟೇ ಅಲ್ಲದೇ, ಜಾಹೀರಾತು ಲೋಕವನ್ನು ವರ್ಷಗಳಿಂದ ಆಳುತ್ತಿರುವ ಅಮಿತಾಭ್‌ ಬಚ್ಚನ್‌, ಅಕ್ಷಯ್‌ ಕುಮಾರ್‌, ವಿರಾಟ್‌ ಕೊಹ್ಲಿ ಮತ್ತು ಮಹೇಂದ್ರ ಸಿಂಗ್‌ ಧೋನಿಯವರ ಬ್ರಾಂಡ್‌ ಮೌಲ್ಯ ಈ ವರ್ಷವೂ ಒಂದಿಷ್ಟೂ ಹಿಂಜರಿತ ಕಂಡಿಲ್ಲ.

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗಿದ್ದರೂ, ಜಾಹೀರಾತುದಾರರಿಗೆ ಅವರು ಈಗಲೂ ಹಾಟ್‌
ಫೇವರಿಟ್‌ ಆಗಿಯೇ ಉಳಿದಿದ್ದಾರೆ. 78 ವರ್ಷದ ಅಮಿತಾಭ್‌ ಕೂಡ ಒಂದರ ಅನಂತರ ಒಂದರಂತೆ ಬ್ರಾಂಡ್‌ಗಳ ಜತೆ ಒಪ್ಪಂದ ಮಾಡಿಕೊಳ್ಳುತ್ತಲೇ ಸಾಗಿದ್ದಾರೆ. ಇತ್ತೀಚೆಗಷ್ಟೇ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹ್ಯಾಂಡ್‌
ಸ್ಯಾನಿಟೈಸರ್‌ ಬ್ರಾಂಡ್‌ ವೈಝ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಬಾಕ್ಸ್‌ ಆಫೀಸ್‌ನ ನೆಚ್ಚಿನ ನಟ ಅಕ್ಷಯ್‌ ಕುಮಾರ್‌ ಕಳೆದೊಂದು ತಿಂಗಳಲ್ಲೇ ಲೋಧಾ ಗ್ರೂಪ್‌, ಡಾಲರ್‌ ಇಂಡಸ್ಟ್ರೀಸ್‌, ಬರ್ಜರ್‌ ಪೇಂಟ್ಸ್‌ ಮತ್ತು ಪಾಲಿಸಿ ಬಾಜಾರ್‌ ಜಾಹೀರಾತುಗಳಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next