Advertisement

Covishield ಲಸಿಕೆಯಿಂದ ಮತ್ತೊಂದು ಸೈಡ್‌ಎಫೆಕ್ಟ್!

01:05 AM May 17, 2024 | Team Udayavani |

ಹೊಸದಿಲ್ಲಿ: ಗಂಭೀರ ಅಡ್ಡ ಪರಿಣಾಮ ಒಪ್ಪಿಕೊಂಡ ಬೆನ್ನಲ್ಲೇ ಆಸ್ಟ್ರಾಜೆನಿಕಾ ತನ್ನ ಕೋವಿಶೀಲ್ಡ್‌ ಲಸಿಕೆಗಳನ್ನು ಮಾರು ಕಟ್ಟೆಯಿಂದ ವಾಪಸ್‌ ಪಡೆದುಕೊಂಡಿತ್ತು. ಈಗ ಮತ್ತೂಂದು ಸಂಶೋಧನೆಯ ಪ್ರಕಾರ, ಆಸ್ಟ್ರಾಜೆನಿಕಾ ಲಸಿಕೆಯು ವ್ಯಾಕ್ಸಿನ್‌- ಇಂಡ್ನೂಸಿಡ್‌ ಇಮ್ಯೂನ್‌ ಥ್ರಾಂಬೋ ಸೈಟೋಪೆನಿಯಾ ಆ್ಯಂಡ್‌ ಥ್ರಾಂಬೋ ಬೋ ಸಿಸ್‌(ವಿಐಟಿಟಿ) ಎಂಬ ವಿರಳ ರಕ್ತ ಹೆಪ್ಪುಗಟ್ಟುವ ರೋಗಕ್ಕೆ ಕಾರಣವಾಗುತ್ತದೆ!

Advertisement

2021ರಲ್ಲಿ ಆಸ್ಟ್ರಾಜೆನಿಕಾ ಲಸಿಕೆಯನ್ನು ಪಡೆದವರಲ್ಲಿ ವಿಐಟಿಟಿ ಕಾಣಿಸಿಕೊಂಡಿದೆ ಎಂಬ ಸಂಗತಿಯನ್ನು ಆಸ್ಟ್ರೇಲಿಯಾದ ಫ್ಲಿಂಡರ್ಸ್‌ ವಿಶ್ವವಿದ್ಯಾನಿಲಯವು “ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್ ಮೆಡಿಸಿನ್‌’ನಲ್ಲಿ ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ತಿಳಿಸಿದೆ. ರಕ್ತದಲ್ಲಿನ ಪ್ಲೇಟ್‌ಲೆಟ್‌ (ಪಿಎಫ್4) ಎಂಬ ಪ್ರೋಟಿನ್‌ ಅನ್ನು ಗುರಿಯಾಗಿಸುವ ಹಾನಿಕಾರ ರಕ್ತದ “ಸ್ವಯಂ ಪ್ರತಿಕಾಯ’ದಿಂದ ವಿಐಟಿಟಿ ಉಂಟಾಗುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ವಿಐಟಿಟಿ ಬಾಧಿತ ರೋಗಿಗಳಲ್ಲಿ ಮೆದುಳು ಮತ್ತು ಹೊಟ್ಟೆ ಭಾಗದಲ್ಲಿ ರಕ್ತಹೆಪ್ಪುಗಟ್ಟುತ್ತದೆ. ಅಲ್ಲದೆ ಅವರ ರಕ್ತದಲ್ಲಿ ಡಿ-ಡೈಮರ್‌ ಎನ್ನುವ ಅಂಶ ಕೂಡ ಹೆಚ್ಚಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next