Advertisement

ಸವಿತಾ ಅಭಿವೃದ್ಧಿ ನಿಗಮ ಘೋಷಣೆಗೆ ಸಂಭ್ರಮ

06:06 AM Feb 09, 2019 | Team Udayavani |

ವಾಡಿ: ಜೆಡಿಎಸ್‌ ಹಾಗೂ ಕಾಂಗ್ರೆಸ್‌ ರಾಜ್ಯ ಮೈತ್ರಿಕೂಟ ಸರಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ ಎರಡನೆ ಬಜೆಟ್‌ನಲ್ಲಿ ಸವಿತಾ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಘೋಷಿಸಿರುವುದನ್ನು ಸ್ವಾಗತಿಸಿ, ಸವಿತಾ (ಕ್ಷೌರಿಕ) ಸಮಾಜದ ಪದಾಧಿಕಾರಿಗಳು ಸಂಭ್ರಮ ಆಚರಿಸಿದರು.

Advertisement

ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪಮಾಲೆ ಅರ್ಪಿಸುವ ಮೂಲಕ ಸವಿತಾ ಸಮಾಜದ ಬಂಧುಗಳು ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿದರು.

ಈ ವೇಳೆ ಮಾತನಾಡಿದ ಸ್ಥಳೀಯ ಸವಿತಾ ಮಹರ್ಷಿ ಸಮಾಜದ ಪ್ರಧಾನ ಕಾರ್ಯದರ್ಶಿ ಹಣಮಂತ ಶಿವುಪುರ, ಸಾಮಾಜಿಕವಾಗಿ ಅಸ್ಪೃಶ್ಯತೆಗೆ ಒಳಗಾಗಿ ಬದುಕು ಸಾಗಿಸುತ್ತಿರುವ ರಾಜ್ಯ ಸವಿತಾ (ಕ್ಷೌರಿಕ) ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಘೋಷಿಸುವ ಮೂಲಕ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ನ್ಯಾಯ ಒದಗಿಸಿಕೊಟ್ಟಿದೆ ಎಂದರು.

ಸವಿತಾ ಸಮಾಜದ ತಾಲೂಕು ಅಧ್ಯಕ್ಷ ರಾಜು ಶಿವುಪುರ, ನಗರ ಅಧ್ಯಕ್ಷ ಅಂಬ್ರೀಶ ಕಡದರಾಳ, ಮುಖಂಡರಾದ ಭೀಮರಾವ್‌ ಮದ್ರಿಕಿ, ಬಸವರಾಜ ಪಗಡೀಕರ, ಶರಣಪ್ಪ ಶಹಾಪುರ, ಮಹಾದೇವ ಪಗಡೀಕರ, ನಾಗರಾಜ ಸಾತನೂರ, ರಾಘವೇಂದ್ರ ಪಗಡೀಕರ, ಹುಸನಪ್ಪ ಮಲಾರ, ಬಾಬು ಅರಿಕೇರಿ, ಹಣಮಂತ ಜಯ ಶಿವುಪುರ, ವೆಂಕಟೇಶ ನಸಲವಾಯಿ, ದೇವರಾಜ ಮಲಾರ, ಮೌನೇಶ ಹಾಗೂ ಮತ್ತಿತರರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next