Advertisement

ಕನಕದಾಸರ 530ನೇ ಜಯಂತ್ಯುತ್ಸವ ಆಚರಣೆ

03:51 PM Nov 16, 2019 | Suhan S |

ಕನಕಪುರ: ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ ಎಂದು ಹಾಡುವ ಮೂಲಕ ಕನಕದಾಸರು ಕಿಂಡಿಯಲ್ಲಿ ಕೃಷ್ಣನ ದರ್ಶನ ಪಡೆ ದವರು ಎಂದು ತಹಶೀಲ್ದಾರ ಆನಂದಯ್ಯ ತಿಳಿಸಿದರು.

Advertisement

ನಗರದ ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 530ನೇ ಕನಕದಾಸರ ಜಯಂತ್ಯುತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತನ್ನ ತಂದೆಯ ಅಕಾಲಿಕ ಮರಣದ ನಂತರ ಅಧಿಕಾರ ವಹಿಸಿಕೊಂಡ ದಂಡ ನಾಯಕನಾಗಿ ಮೊದಲ ಯುದ್ಧದಲ್ಲಿ ಸೋತ ನಂತರ ವೈರಾಗ್ಯ ಹೊಂದಿ ವ್ಯಾಸ ರಾಯರ ಶಿಷ್ಯರಾಗಿ ಕನಕದಾಸ ಎಂದು ನಾಮಾಂಕಿತರಾಗಿ ದಾಸ ಪರಂಪರೆಯ 250 ದಾಸರಲ್ಲಿ ಶ್ರೇಷ್ಠ ದಾಸರಾದರು ಎಂದು ಹೇಳಿದರು.

ಕನಕದಾಸರು ಪುರಂದರದಾಸರು, ವಾದಿರಾಜರ ಸ್ನೇಹ ಗಳಿಸಿಕೊಂಡು ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಕೃಷ್ಣನ ನೆನೆದು ಹಾಡಿ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆದರು ಅದೇ ಕನಕನ ಕಿಂಡಿ. 316 ಕೀರ್ತನೆಗಳು ಐದು ಕೃತಿ ಗಳನ್ನು ರಚಿಸಿ ತಿಮ್ಮಪ್ಪನಾಯಕ ಕನಕದಾಸ ಕನಕ ನಾಯಕ ಎಂಬ ಬಿರುದು ಪಡೆದು ವಿಶ್ವಮಾನವರಾಗಿ ಹೊರ ಹೊಮ್ಮಿದರು ಎಂದು ತಿಳಿಸಿದರು.

ಆಹಾರ ಇಲಾಖೆ ಅಧಿಕಾರಿ ಪ್ರಕಾಶ್‌ ಮಾತನಾಡಿ, ಯಾವುದೇ ವ್ಯಕ್ತಿ ಹುಟ್ಟಿನಿಂದ ಶ್ರೇಷ್ಠನಾಗಲು ಸಾಧ್ಯವಿಲ್ಲ. ಅವನ ಸಂಸ್ಕಾರದಿಂದ ಶ್ರೇಷ್ಠನಾಗಲು ಸಾಧ್ಯ. ಒಬ್ಬ ಸಾಧಾರಣ ತಿಮ್ಮಪ್ಪ ನಾಯಕ ಎಂಬ ವ್ಯಕ್ತಿ ಕನಕದಾಸನಾಗಿ ಪರಿವರ್ತನೆಯಾಗಿ ದೇಶದ ಆಸ್ತಿಯಾಗಿ ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ಕೊಟ್ಟಿದ್ದಾರೆ. ನಮ್ಮ ಕರ್ನಾಟಕದ ಶಾಸ್ತ್ರೀಯ ಸಂಗೀತಕ್ಕೆ ಕನಕದಾಸರು ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಮಹನೀಯರ ಜಯಂತಿಯನ್ನು ಆಚ ರಿಸುವುದರ ಜೊತೆಗೆ ಅವರ ವ್ಯಕ್ತಿತ್ವವನ್ನು ಇಂದಿನ ಯುವ ಪೀಳಿಗೆಗೆ ತಿಳಿಸ ಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ಬಸಪ್ಪ, ತಾಪಂ ಸದಸ್ಯ ಬೊಜಿಗೌಡ, ಟಿಎಪಿಸಿಎಂಎಸ್‌ ಅಧ್ಯಕ್ಷ ಮುನಿ ಉಚೇ ಗೌಡ, ಶಿರಸ್ತೆದಾರ್‌ ರಘು, ಅಧಿಕಾರಿಗಳು ಉಪಸ್ಥಿತರಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next